Geomagnetic Storm: ಇಂದು ಅಥವಾ ನಾಳೆ ಭೂಮಿಗೆ ಅಪ್ಪಳಿಸಲಿದೆ ಸೌರ ಚಂಡಮಾರುತ; ಮೊಬೈಲ್​ ಸಿಗ್ನಲ್, ವಿದ್ಯುತ್, ಸ್ಯಾಟಲೈಟ್ ಸಂಪರ್ಕ ಎಲ್ಲವೂ ಕಡಿತ ಸಾಧ್ಯತೆ!

Solar Storm: ಈಗಿನ ಲೆಕ್ಕಾಚಾರದ ಪ್ರಕಾರ ಇಂದು ಅಥವಾ ನಾಳೆ ಅಯಸ್ಕಾಂತೀಯ ಗುಣದ ಈ ಚಂಡಮಾರುತಗಳು (Geomagnetic storm) ಭೂಮಿಗೆ ಬಂದೆರಗುವ ಸಾಧ್ಯತೆ ದಟ್ಟವಾಗಿದೆ.

Important Highlight‌
Geomagnetic Storm: ಇಂದು ಅಥವಾ ನಾಳೆ ಭೂಮಿಗೆ ಅಪ್ಪಳಿಸಲಿದೆ ಸೌರ ಚಂಡಮಾರುತ; ಮೊಬೈಲ್​ ಸಿಗ್ನಲ್, ವಿದ್ಯುತ್, ಸ್ಯಾಟಲೈಟ್ ಸಂಪರ್ಕ ಎಲ್ಲವೂ ಕಡಿತ ಸಾಧ್ಯತೆ!
ಸಾಂಕೇತಿಕ ಚಿತ್ರ
Follow us
TV9 Digital Desk
|

Updated on:Jul 13, 2021 | 1:14 PM

ಭೂಮಂಡಲದತ್ತ ಅತಿ ವೇಗವಾಗಿ ನುಗ್ಗಿ ಬರುತ್ತಿರುವ ಸೌರ ಚಂಡಮಾರುತ (Solar Storm) ಇಂದು (ಜುಲೈ 13, ಮಂಗಳವಾರ) ಅಥವಾ ನಾಳೆ (ಜುಲೈ 14, ಬುಧವಾರ) ಭೂಮಿಗೆ (Earth) ಅಪ್ಪಳಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿಂದಿನ ವರದಿಗಳು ಸೌರ ಚಂಡಮಾರುತ ಭಾನುವಾರ ಅಥವಾ ಸೋಮವಾರದಂದೇ ಭೂಮಿಗೆ ಅಪ್ಪಳಿಸಲಿವೆ ಎಂದು ಹೇಳಿದ್ದವು. ಆದರೆ, ಈಗಿನ ಲೆಕ್ಕಾಚಾರದ ಪ್ರಕಾರ ಇಂದು ಅಥವಾ ನಾಳೆ ಅಯಸ್ಕಾಂತೀಯ ಗುಣದ ಈ ಚಂಡಮಾರುತಗಳು (Geomagnetic storm) ಭೂಮಿಗೆ ಬಂದೆರಗುವ ಸಾಧ್ಯತೆ ದಟ್ಟವಾಗಿದೆ. ಇವುಗಳು ಅತಿ ವೇಗದ ಸೌರ ಚಂಡಮಾರುತವಾಗಿದ್ದು, ಗಂಟೆಗೆ 1.6 ದಶಲಕ್ಷ ಕಿ.ಮೀ ವೇಗದಲ್ಲಿ ಧಾವಿಸುತ್ತಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಈ ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಿದ ದಿನ ಜಗತ್ತಿನಾದ್ಯಾಂತ ವಿದ್ಯುತ್​ ಸಮಸ್ಯೆ ಉಂಟಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೂರ್ಯನ ವಾತಾವರಣದಲ್ಲಿ ರಂಧ್ರವೊಂದು ತೆರೆಯಲ್ಪಟ್ಟಿದ್ದು, ಅದರ ಮೂಲಕವೇ ಈ ಚಂಡಮಾರುತ ಹೊರಬರುತ್ತಿದೆ ಮತ್ತು ಭೂಮಿಯತ್ತ ಬೀಸುತ್ತಿದೆ ಎಂದು ಸ್ಪೇಸ್​ ವೆದರ್​ ಡಾಟ್​ ಕಾಂ ವೆಬ್​ಸೈಟ್ ವರದಿ ಮಾಡಿದೆ. ಈ ಸೌರ ಚಂಡಮಾರುತ ಉಪಗ್ರಹಗಳ ಸಿಗ್ನಲ್​ಗಳಿಗೂ ಅಡೆತಡೆ ಉಂಟುಮಾಡಲಿದೆ. ಇದರಿಂದಾಗಿ ರೇಡಿಯೋ ಸಿಗ್ನಲ್​ಗಳು, ಸಂವಹನ ಕ್ಷೇತ್ರಕ್ಕೆ ಸಮಸ್ಯೆಯಾಗಲಿದೆ. ಹವಾಮಾನದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವೆಬ್​ಸೈಟ್​​ನಲ್ಲಿ ವರದಿಯಾಗಿದೆ. ಇಷ್ಟೇ ಅಲ್ಲದೆ, ಭೂಮಿಯ ಕಾಂತಕ್ಷೇತ್ರದ ಪ್ರಾಬಲ್ಯ ಹೆಚ್ಚಿರುವ ಬಾಹ್ಯಾಕಾಶ ಪ್ರದೇಶದ ಮೇಲೆಯೂ ಸೌರಚಂಡಮಾರುತ ಪ್ರಭಾವ ಬೀರಲಿದೆ.

ಸೂರ್ಯನಲ್ಲಿ ನಿರಂತರವಾಗಿ ರಾಸಾಯನಿಕ ಪ್ರಕ್ರಿಯೆಗಳು ಘಟಿಸುವುದರಿಂದ, ಆ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಏರುಪೇರಾದರೆ ಇಂತಹ ಸೌರ ಅಲೆಗಳು ಚಂಡಮಾರುತದ ರೂಪದಲ್ಲಿ ಏಳುತ್ತವೆ. ಈಗ ಬೀಸುತ್ತಿರುವ ಸೌರ ಚಂಡಮಾರುತದ ವೇಗ ಗಂಟೆಗೆ 1.6 ದಶಲಕ್ಷ ಕಿಮೀ ಇದೆ. ಆದರೆ ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಅಂದಾಜಿಸಿದೆ. ಇದು ಭೂಮಿಯ ಹೊರಮೈ ವಾತಾವರಣವನ್ನು ಉಷ್ಣಗೊಳಿಸಲಿದ್ದು, ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರಲಿದೆ. ಜಿಪಿಸಿಎಸ್​ ನೇವಿಗೇಶನ್​, ಮೊಬೈಲ್​ ಫೋನ್​ ನೆಟ್ವರ್ಕ್​​​, ಸೆಟಲೈಟ್ ಟಿವಿ, ವಿದ್ಯುತ್​ ಲೈನ್​​ಗಳಿಗೆ ಸಮಸ್ಯೆ ಒಡ್ಡುತ್ತದೆ ಎಂದು ಹವಾಮಾನ್ಯ ತಜ್ಞರು ಹೇಳಿದ್ದಾರೆ.

ಭೂಮಿಯ ಕಾಂತಕ್ಷೇತ್ರ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಆದರೆ ಅದರ ಮೇಲೆಯೇ ಸೌರಚಂಡಮಾರುತ ಅಪ್ಪಳಿಸುವುದರಿಂದ ತೀವ್ರ ತೊಂದರೆಯಾಗಲಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಈ ಸೌರ ಚಂಡಮಾರುತದ ಕಾರಣದಿಂದ ದೇಶದ ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸವಾಗಿರುವ ಜನರು ರಾತ್ರಿ ವೇಳೆ ಸುಂದರ ಆಕಾಶ ಬೆಳಕನ್ನು ವೀಕ್ಷಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸೌರ ಬಿರುಗಾಳಿಗಳು ಭೂಮಿಯ ವಾತಾವರಣವನ್ನು ಅಸ್ತವ್ಯಸ್ತಗೊಳಿಸುತ್ತವೆ. 1989ರ ಮಾರ್ಚ್​ನಲ್ಲಿ ಇಂಥದ್ದೇ ಒಂದು ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಿತ್ತು. ಆಗ ಕೆನಡಾದಲ್ಲಿ 9 ಗಂಟೆಗಳ ಕಾಲ ವಿದ್ಯುತ್​ ಪ್ರಸರಣದಲ್ಲಿ ಅವ್ಯವಸ್ಥೆ ಉಂಟಾಗಿತ್ತು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: Solar Storm: ಸದ್ಯದಲ್ಲೇ ಭೂಮಿಗೆ ಅಪ್ಪಳಿಸಲಿದೆ ಭೀಕರ ಸೌರ ಚಂಡಮಾರುತ; ಜಿಪಿಎಸ್​ ಸಿಗ್ನಲ್​, ಮೊಬೈಲ್​ ನೆಟ್ವರ್ಕ್​ಗಳೆಲ್ಲ ಅಸ್ತವ್ಯಸ್ತ

Published On - 11:49 am, Tue, 13 July 21

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ