ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ: ಏರ್ಟೆಲ್ ಆಫರ್​ಗೆ ದಂಗಾದ ಜಿಯೋ

|

Updated on: Aug 15, 2023 | 12:54 PM

Airtel Rs 99 plan: ಏರ್ಟೆಲ್ ತನ್ನ 99 ರೂ. ಯೋಜನೆಯನ್ನು ಈ ಹಿಂದೆ ಕೂಡ ಬಿಡುಗಡೆ ಮಾಡಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಇದನ್ನು ನಿಲ್ಲಿಸಲಾಯಿತು. ಇದೀಗ ಈ ಹೊಸ ಯೋಜನೆಯು ಪುನಃ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಪರಿಚಯಿಸಲಾದ 99 ರೂ. ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಆಫರ್ ನೀಡಲಾಗಿದೆ.

ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ: ಏರ್ಟೆಲ್ ಆಫರ್​ಗೆ ದಂಗಾದ ಜಿಯೋ
Airtel
Follow us on

ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ (Bhatri Airtel) ಇತ್ತೀಚಿನ ತಿಂಗಳುಗಳಲ್ಲಿ ತನ್ನ ರೀಚಾರ್ಜ್ ಯೋಜನೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತಿದೆ. ಕೆಲವು ಪ್ಲಾನ್​ಗಳನ್ನು ಸ್ಥಗಿತಗೊಳಿಸುವುದರಿಂದ ಹಿಡಿದು ಹೊಸದನ್ನು ಪರಿಚಯಿಸುವವರೆಗೆ, ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಸದ್ಯ ಹೊಸ ಬೆಳವಣಿಗೆಯಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗೆ ನೂತನವಾದ ಡೇಟಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಇದು ಅನಿಯಮಿತ ಇಂಟರ್ನೆಟ್ ಪ್ರಯೋಜನವನ್ನು ನೀಡುತ್ತದೆ. ಏರ್ಟೆಲ್​ನ ಈ ಆಫರ್ ಕಂಡು ಇತರೆ ಟೆಲಿಕಾಂ ಕಂಪನಿಗಳು ದಂಗಾಗಿವೆ.

”ಏರ್ಟೆಲ್ ಹೊಸದಾಗಿ 99 ರೂಪಾಯಿಯ ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರಿಗೆ ಕೈಗೆಟುಕುವ ದರಕ್ಕೆ ಡೇಟಾ ಪ್ರಯೋಜನ ನೀಡುವುದು ನಮ್ಮ ಗುರಿಯಾಗಿದೆ,” ಎಂದು ಏರ್ಟೆಲ್ ಹೇಳಿದೆ.

ಏರ್ಟೆಲ್ 99 ರೂ. ಡೇಟಾ ಪ್ಯಾಕ್ ವಿವರಗಳು:

ಏರ್ಟೆಲ್ ತನ್ನ 99 ರೂ. ಯೋಜನೆಯನ್ನು ಈ ಹಿಂದೆ ಕೂಡ ಬಿಡುಗಡೆ ಮಾಡಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಇದನ್ನು ನಿಲ್ಲಿಸಲಾಯಿತು. ಇದೀಗ ಈ ಹೊಸ ಯೋಜನೆಯು ಪುನಃ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಪರಿಚಯಿಸಲಾದ 99 ರೂ. ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಅನ್ನು ಆಡ್-ಆನ್ ಪ್ಲಾನ್‌ನಂತೆ ನೀಡಲಾಗಿದ್ದು, ಬಳಕೆದಾರರು ತಮ್ಮ ದೈನಂದಿನ ಹೈ-ಸ್ಪೀಡ್ ಡೇಟಾ ಮಿತಿಯನ್ನು ಮುಗಿದ ನಂತರ ಬಳಸಬಹುದಾಗಿದೆ. ಈ ಯೋಜನೆಯು ಬಳಕೆದಾರರಿಗೆ 1 ದಿನದ ಮಾನ್ಯತೆಯ ಅವಧಿಗೆ ಅನಿಯಮಿತ ಡೇಟಾ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ
Google Pixel 7 Pro: ಪ್ರೊ ಕ್ಯಾಮೆರಾ ರೇಂಜ್​ನ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್​ಫೋನ್
ಕೇವಲ 8,999 ರೂ.: ಹೊಸ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ ಮೋಟೋ E13 ಫೋನ್
Jio Independence Day Offer: ರಿಲಯನ್ಸ್ ಜಿಯೋ ವಿಶೇಷ ರೀಚಾರ್ಜ್ ಆಫರ್ ಇಲ್ಲಿದೆ..
ಅಮೆಜಾನ್​ನಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್​ಫೋನ್ ಯಾವುದು ಗೊತ್ತೇ?: ರಿವೀಲ್ ಆಗಿದೆ ನೋಡಿ

108MP ಕ್ಯಾಮೆರಾ, 67W ಫಾಸ್ಟ್ ಚಾರ್ಜರ್: ರಿಯಲ್ ಮಿ 11 ಫೀಚರ್ಸ್ ಬಹಿರಂಗ ಪಡಿಸಿದ ಕಂಪನಿ

ಆದರೆ, ಈ ಯೋಜನೆಯನ್ನು ನ್ಯಾಯಯುತ ಬಳಕೆಯ ನೀತಿ (FPU) 30GB ಗೆ ನಿರ್ಬಂಧಿಸುವ ಪ್ಲ್ಯಾನ್‌ಗೆ ಅನ್ವಯಿಸಲಾಗಿದೆ. ಅಂದರೆ 30GB ಹೆಚ್ಚಿನ ವೇಗದ ಡೇಟಾದ ನಂತರ, ಏರ್ಟೆಲ್ ಬಳಕೆದಾರರು 64Kbps ನಲ್ಲಿ ಅನಿಯಮಿತ ಡೇಟಾವನ್ನು ಬಳಸುವುದನ್ನು ಮುಂದುವರಿಸಬಹುದು. ಹೆಚ್ಚುವರಿಯಾಗಿ, ಇದು ಡೇಟಾ ಪ್ಯಾಕ್ ಆಗಿರುವುದರಿಂದ, ಅದರ ಪ್ರಯೋಜನಗಳನ್ನು ಬಳಸಲು ನಿಮಗೆ ಸಕ್ರಿಯ ಮೂಲ ಯೋಜನೆ ಅಗತ್ಯವಿರುತ್ತದೆ.

ಏರ್ಟೆಲ್ 5G ಪ್ಲಸ್ ಹೊಂದಿರುವ ಪ್ರದೇಶಗಳಲ್ಲಿ, ಅನ್‌ಲಿಮಿಟೆಡ್ 5G ಬೆನಿಫಿಟ್ ಮತ್ತು ಏರ್ಟೆಲ್ ಟ್ರೂಲಿ ಅನ್ಲಿಮಿಟೆಡ್ ಪ್ಲಾನ್ ಹೊಂದಿರುವ ಬಳಕೆದಾರರು ಯಾವುದೇ ದೈನಂದಿನ ಮಿತಿಗಳಿಲ್ಲದೆ ಈ ಅನಿಯಮಿತ 5G ಡೇಟಾವನ್ನು ಆನಂದಿಸಬಹುದು. ಆದಾಗ್ಯೂ, 5G ಅಲ್ಲದ ಪ್ರದೇಶಗಳಲ್ಲಿ, ಹೊಸ ರೂ. 99 ಡೇಟಾ ಪ್ಯಾಕ್ 4G ಹ್ಯಾಂಡ್‌ಸೆಟ್ ಬಳಸುವವರಿಗೆ ಉತ್ತಮ ಆಯ್ಕೆಯಾಗಿದೆ.

ಇನ್ನು ಭಾರತದ ಮತ್ತೊಂದು ಪ್ರಮುಖ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ವಿ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ವಿಶೇಷ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ಘೋಷಿಸಿದೆ. ರೂ. 199 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಎಲ್ಲಾ ಅನಿಯಮಿತ ಡೇಟಾ ರೀಚಾರ್ಜ್‌ಗಳಿಗೆ 50 GB ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ನೀಡುತ್ತಿದೆ. ಆಗಸ್ಟ್ 18 ರವರೆಗೆ ಇದು ಚಾಲ್ತಿಯಲ್ಲಿರಲಿದೆ. ಹೆಚ್ಚುವರಿಯಾಗಿ, ವೊಡಾಫೋನ್ ಐಡಿಯಾ ಗ್ರಾಹಕರು ರೂ. 1,449 ಮೌಲ್ಯದ ರೀಚಾರ್ಜ್ ಪ್ಯಾಕ್‌ಗಳಲ್ಲಿ 50 ರೂ. ಗಳ ರಿಯಾಯಿತಿಗಳನ್ನು ಪಡೆಯಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Tue, 15 August 23