ನಿನ್ನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ: ಪ್ರಜ್ಞಾನಂದನಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ
R Praggnanandhaa: ಅಝರ್ಬೈಜಾನ್ನಲ್ಲಿ ನಡೆದ ಚೆಸ್ ವಿಶ್ವಕಪ್ನ ಫೈನಲ್‌ನಲ್ಲಿ ವಿಶ್ವದ ನಂಬರ್ ಒನ್ ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಆರ್. ಪ್ರಜ್ಞಾನಂದ ಸೋಲನುಭವಿಸಿದ್ದರು. ಈ ಸೋಲಿನ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಯುವ ಚೆಸ್ ಪಟುವನ್ನು ಹುರಿದುಂಬಿಸಿದ್ದಾರೆ.
ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ವಿರೋಚಿತ ಸೋಲುಂಡಿದ್ದ ಆರ್. ಪ್ರಜ್ಞಾನಂದ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ, ನಿನ್ನ ಸಾಧನೆಯ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ. ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಎಂದು ಶುಭ ಹಾರೈಸಿದ್ದಾರೆ.
ಅಝರ್ಬೈಜಾನ್ನಲ್ಲಿ ನಡೆದ ಚೆಸ್ ವಿಶ್ವಕಪ್ನ ಫೈನಲ್‌ನಲ್ಲಿ ವಿಶ್ವದ ನಂಬರ್ ಒನ್ ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಆರ್. ಪ್ರಜ್ಞಾನಂದ ಸೋಲನುಭವಿಸಿದ್ದರು. ಈ ಸೋಲಿನ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಯುವ ಚೆಸ್ ಪಟುವನ್ನು ಹುರಿದುಂಬಿಸಿದ್ದಾರೆ.
FIDE ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಪ್ರಜ್ಞಾನಂದನ ಬಗ್ಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ! ಅವರು ತಮ್ಮ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸಿ ಫೈನಲ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಅವರಿಗೆ ಕಠಿಣ ಪೈಪೋಟಿ ನೀಡಿದರು. ಇದೇನು ಸಣ್ಣ ಸಾಧನೆಯಲ್ಲ. ಪ್ರಜ್ಞಾನಂದ ಅವರ ಮುಂಬರುವ ಪಂದ್ಯಾವಳಿಗಳಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
We are proud of Praggnanandhaa for his remarkable performance at the FIDE World Cup! He showcased his exceptional skills and gave a tough fight to the formidable Magnus Carlsen in the finals. This is no small feat. Wishing him the very best for his upcoming tournaments. pic.twitter.com/KXYcFRGYTO
— Narendra Modi (@narendramodi) August 24, 2023
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, FIDE ವಿಶ್ವಕಪ್ 2023 ರಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ್ದಕ್ಕಾಗಿ ಯುವ ಮತ್ತು ಸೂಪರ್ ಪ್ರತಿಭಾವಂತ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಅವರಿಗೆ ಅನೇಕ ಅಭಿನಂದನೆಗಳು. ನೀವು ವಿಶ್ವಕಪ್‌ಗೆ ಅರ್ಹತೆ ಗಳಿಸಿದ ಅತ್ಯಂತ ಕಿರಿಯ ಆಟಗಾರನಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದೀರಿ. ನಿಮ್ಮ ಅದ್ಭುತ ಸಾಧನೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನು ತುಂಬಾ ಹೆಮ್ಮೆಪಡುತ್ತಾನೆ. ನಿಮ್ಮ ಸಾಧನೆಯು ಉದಯೋನ್ಮುಖ ಚೆಸ್ ಆಟಗಾರರಿಗೆ ಸ್ಫೂರ್ತಿಯಾಗಿದೆ. ನೀವು ಮತ್ತಷ್ಟು ಶಕ್ತಿಯೊಂದಿಗೆ ಬೆಳೆಯುತ್ತಿರಲಿ. ಅಲ್ಲದೆ ನಿಮ್ಮ ಭವಿಷ್ಯವು ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
Many congratulations to the young and super talented grandmaster, R Praggnanandhaa for finishing as the runner up in the FIDE World Cup 2023.
Every Indian is extremely proud of your incredible feat as you have created history by becoming the youngest ever player to qualify for… pic.twitter.com/p0AASJJhOT
— Mallikarjun Kharge (@kharge) August 24, 2023
ಹಾಗೆಯೇ ಪ್ರಜ್ಞಾನಂದ ಅವರ ಈ ಸಾಧನೆಗೆ ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚುಗೆ ಸೂಚಿಸಿದ್ದು, ಅದ್ಭುತ ಪಂದ್ಯಾವಳಿಗೆ ಅಭಿನಂದನೆಗಳು ಪ್ರಜ್ಞಾನಂದ. ನಿಮ್ಮ ಕನಸುಗಳನ್ನು ಬೆನ್ನಟ್ಟುತ್ತಿರಿ ಮತ್ತು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.
Congratulations on an incredible tournament, @rpragchess! Keep chasing your dreams and making India proud. ♟️🇮🇳 #FIDEWorldCup
— Sachin Tendulkar (@sachin_rt) August 24, 2023
ಮೈಸೂರು-ಕೊಡಗು ಸಂಸದರಾಗಿರುವ ಪ್ರತಾಪ್ ಸಿಂಹ ಕೂಡ ಯುವ ಚೆಸ್ ತಾರೆಯನ್ನು ಅಭಿನಂದಿಸಿದ್ದು, ನೀವು ಚೆನ್ನಾಗಿ ಆಡಿದ್ದೀರಿ…ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಟ್ಟೀಟ್ ಮಾಡಿದ್ದಾರೆ.
R Praggnanandhaa, You did well champ. India is proud of you 🇮🇳#ChessWorldCup2023#Praggnanandhaa#WorldChessChampionship#Praggnanandhaa pic.twitter.com/VetBOVKfbO
— Pratap Simha (@mepratap) August 24, 2023
ಒಟ್ಟಿನಲ್ಲಿ ಫೈನಲ್ ಸೋಲಿನ ಹೊರತಾಗಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ ಆರ್. ಪ್ರಜ್ಞಾನಂದ ಅವರ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.