R Praggnanandhaa: ಇತಿಹಾಸ ಸೃಷ್ಟಿಸಲು ತಯಾರಾದ ಪ್ರಜ್ಞಾನಂದ: ಚೆಸ್​ ವಿಶ್ವಕಪ್ ಫೈನಲ್ ಯಾವಾಗ?, ಎಷ್ಟು ಗಂಟೆಗೆ?

|

Updated on: Aug 22, 2023 | 11:17 AM

When and Where 2023 FIDE World Cup Final: ಇಂದು ನಡೆಯಲಿರುವ ಚೆಸ್​ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ರಜ್ಞಾನಂದ ಅವರು ಐದು ಬಾರಿ ಪ್ರಶಸ್ತಿ ವಿಜೇತ ವಿಶ್ವ ನಂಬರ್ 1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಎದುರಿಸಲಿದ್ದಾರೆ. ಇವರಿಬ್ಬರು ಈ ಹಿಂದೆ ಕೆಲ ಬಾರಿ ಮುಖಾಮುಖಿ ಆಗಿದ್ದಾರೆ.

R Praggnanandhaa: ಇತಿಹಾಸ ಸೃಷ್ಟಿಸಲು ತಯಾರಾದ ಪ್ರಜ್ಞಾನಂದ: ಚೆಸ್​ ವಿಶ್ವಕಪ್ ಫೈನಲ್ ಯಾವಾಗ?, ಎಷ್ಟು ಗಂಟೆಗೆ?
Praggnanandhaa-Carlsen
Follow us on

ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್‌ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸೋಮವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವದ ನಂಬರ್ 3ನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರನ್ನು ಬಗ್ಗುಬಡಿದ 18 ವರ್ಷದ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಗ್ನಾನಂದ (R Praggnanandhaa) ಫೈನಲ್​ಗೆ ಪ್ರವೇಶಿಸಿದ್ದಾರೆ. ಈ ಟೂರ್ನಮೆಂಟ್‌ನಲ್ಲಿ ಫೈನಲ್ ತಲುಪಿದ ಅತ್ಯಂತ ಕಿರಿಯ ಆಟಗಾರ ಪ್ರಜ್ಞಾನಂದ ಆಗಿದ್ದಾರೆ. ಇದೀಗ ಇಂಡಿಯನ್ ಗ್ರ್ಯಾಂಡ್ ಮಾಸ್ಟರ್ ಇತಿಹಾಸ ಸೃಷ್ಟಿಸಲು ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಹಾಗಾದರೆ ಚೆಸ್​ ವಿಶ್ವಕಪ್ ಫೈನಲ್ ಯಾವಾಗ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ.

ಚೆಸ್​ ವಿಶ್ವಕಪ್ ಫೈನಲ್ ಪಂದ್ಯ ಯಾವಾಗ ನಡೆಯಲಿದೆ?

ಚೆಸ್​ ವಿಶ್ವಕಪ್ ಫೈನಲ್ ಪಂದ್ಯ ಇಂದು (ಆಗಸ್ಟ್ 22) ಆಯೋಜಿಸಲಾಗಿದೆ.

ಇದನ್ನೂ ಓದಿ
ಆಯ್ಕೆಯಾಗಿದ್ರೂ ರಾಹುಲ್ ಆಡಲ್ಲ: ಏಷ್ಯಾಕಪ್ ಟೂರ್ನಿಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ
ಭಾರತ- ಐರ್ಲೆಂಡ್ ತೃತೀಯ ಟಿ20 ಪಂದ್ಯ ಯಾವಾಗ?, ಎಷ್ಟು ಗಂಟೆಗೆ?
ವಿಶ್ವಕಪ್ ತಂಡದ ಬಾಗಿಲು ಮುಚ್ಚಿಲ್ಲ: ರೋಹಿತ್ ಶರ್ಮಾ ಸಂದೇಶ
ಅಲ್ಕರಾಝ್ ವಿರುದ್ಧ ಸೋಲಿನ ಸೇಡು ತೀರಿಸಿಕೊಂಡ ಜೊಕೊವಿಚ್

ಚೆಸ್​ ವಿಶ್ವಕಪ್ ಫೈನಲ್ ಪಂದ್ಯ ಎಷ್ಟು ಗಂಟೆಗೆ ಶುರುವಾಗಲಿದೆ?

ಚೆಸ್​ ವಿಶ್ವಕಪ್ ಫೈನಲ್ ಪಂದ್ಯ ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 7 ಗಂಟೆಗೆಗ ಆರಂಭವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಹೆ 4:30ಕ್ಕೆ ಶುರುವಾಗಲಿದೆ.

ದುಬೈ ಕ್ಯಾಪಿಟಲ್ಸ್​ ತಂಡಕ್ಕೆ ಡೇವಿಡ್ ವಾರ್ನರ್ ಎಂಟ್ರಿ

ಚೆಸ್​ ವಿಶ್ವಕಪ್ ಫೈನಲ್ ಪಂದ್ಯ ನೇರಪ್ರಸಾರ ವೀಕ್ಷಿಸುವುದು ಹೇಗೆ?

ಚೆಸ್​ ವಿಶ್ವಕಪ್ ಫೈನಲ್ ಪಂದ್ಯದ ನೇರಪ್ರಸಾರವನ್ನು FIDE World Cup chess24 ಯೂಟ್ಯೂಬ್ ಚಾನೆಲ್​ನಲ್ಲಿ ವೀಕ್ಷಿಸಬಹುದು.

ಪ್ರಜ್ಞಾನಂದಗೆ ಫೈನಲ್​ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್‌ ಎದುರಾಳಿ:

ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಜ್ಞಾನಂದ ಅವರು ಐದು ಬಾರಿ ಪ್ರಶಸ್ತಿ ವಿಜೇತ ವಿಶ್ವ ನಂಬರ್ 1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಎದುರಿಸಲಿದ್ದಾರೆ. ಇವರಿಬ್ಬರು ಈ ಹಿಂದೆ ಕೆಲ ಬಾರಿ ಮುಖಾಮುಖಿ ಆಗಿದ್ದಾರೆ. ಹಿಂದಿನ ಮುಖಾಮುಖಿಗಳಲ್ಲಿ ಕಾರ್ಲ್‌ಸೆನ್ ಅವರನ್ನು ವಿಭಿನ್ನ ಸ್ವರೂಪದಲ್ಲಿ ಪ್ರಜ್ಞಾನಂದ ಅವರು ಐದು ಬಾರಿ ಸೋಲಿಸಿದ ದಾಖಲೆ ಹೊಂದಿದ್ದಾರೆ.

ಸೆಮಿ ಫೈನಲ್​ನಲ್ಲಿ ಗೆಲುವು ಸಾಧಿಸುವ ಮೂಲಕ, ಪ್ರಜ್ಞಾನಂದ ಅವರು 2024 ರಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ನಲ್ಲಿ ಆಡಲು ಅರ್ಹತೆ ಪಡೆದಿದ್ದಾರೆ. ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ ಅಥವಾ FIDE ನಿಯಮಗಳ ಪ್ರಕಾರ, ವಿಶ್ವಕಪ್‌ನಲ್ಲಿ ಅಗ್ರ ಮೂರು ಆಟಗಾರರು ಈ ಪಂದ್ಯಾವಳಿಗೆ ಅರ್ಹತೆ ಪಡೆಯುತ್ತಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:16 am, Tue, 22 August 23