ಭಾರತದ ಮೊಟ್ಟಮೊದಲ ನೈಟ್ ರೇಸ್: ಚೆನ್ನೈನಲ್ಲಿ ಫಾರ್ಮುಲಾ ಸ್ಟ್ರೀಟ್ ಸರ್ಕ್ಯೂಟ್ ಪ್ರಾರಂಭ
Formula Racing Circuit launched: ತಮಿಳುನಾಡಿನ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರ ಉಪಸ್ಥಿತಿಯಲ್ಲಿ, ಇಸ್ಲೆಂಡ್ ಮೈದಾನದ ಸುತ್ತಲಿನ 3.5 ಕಿಮೀ ಉದ್ದದ ಸರ್ಕ್ಯೂಟ್ ರಸ್ತೆಯನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಒಮ್ಮೆ ಸಿದ್ಧವಾದರೆ, ಭಾರತದಲ್ಲೇ ಅತಿ ಉದ್ದದ ಸ್ಟ್ರೀಟ್ ಸರ್ಕ್ಯೂಟ್ ಆಗಲಿದೆ.
ಹೈದರಾಬಾದ್ನಲ್ಲಿ ಭಾರತದ ಮೊದಲ ಇಂಡಿಯನ್ ಫಾರ್ಮುಲಾ ಇ ಚಾಂಪಿಯನ್‌ಶಿಪ್ ಅನ್ನು ಯಶಸ್ವಿಯಾಗಿ ನಡೆಸಿದ ನಂತರ, ಇದೀಗ ಇಂಡಿಯನ್ ರೇಸಿಂಗ್ ಲೀಗ್ ತಮಿಳುನಾಡಿನ ಕ್ರೀಡಾ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ಚೆನ್ನೈ ಸ್ಟ್ರೀಟ್ ಸರ್ಕ್ಯೂಟ್ ಅನ್ನು ಪ್ರಾರಂಭಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಲು ಸಿದ್ಧವಾಗಿದೆ. ಮೋಟಾರ್‌ಸ್ಪೋರ್ಟ್‌ಗಳಿಗೆ ದೊಡ್ಡ ಕೊಡುಗೆಯಾಗಿ, ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್, ತಮಿಳುನಾಡಿನ ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ, ಈ ವರ್ಷದ ಕೊನೆಯಲ್ಲಿ ಭಾರತದ ಮೊಟ್ಟಮೊದಲ ರಾತ್ರಿ ರಸ್ತೆ ರೇಸ್ ಅನ್ನು ನಡೆಸುವ ಯೋಜನೆಗಾಗಿ ಚೆನ್ನೈ ಫಾರ್ಮುಲಾ ಸ್ಟ್ರೀಟ್ ಸರ್ಕ್ಯೂಟ್ (Formula Racing Circuit) ಅನ್ನು ಪ್ರಾರಂಭಿಸಲಾಗಿದೆ.
ತಮಿಳುನಾಡಿನ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರ ಉಪಸ್ಥಿತಿಯಲ್ಲಿ, ಇಸ್ಲೆಂಡ್ ಮೈದಾನದ ಸುತ್ತಲಿನ 3.5 ಕಿಮೀ ಉದ್ದದ ಸರ್ಕ್ಯೂಟ್ ರಸ್ತೆಯನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಒಮ್ಮೆ ಸಿದ್ಧವಾದರೆ, ಭಾರತದಲ್ಲೇ ಅತಿ ಉದ್ದದ ಸ್ಟ್ರೀಟ್ ಸರ್ಕ್ಯೂಟ್ ಆಗಲಿದೆ. ಈ ಟ್ರ್ಯಾಕ್ ಡಿಸೆಂಬರ್ 9 ಮತ್ತು 10 ರಂದು ಇಂಡಿಯನ್ ರೇಸಿಂಗ್ ಲೀಗ್ ಮತ್ತು F4 ಇಂಡಿಯನ್ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಲಿದೆ.
ಭಾರತ-ಐರ್ಲೆಂಡ್ ಮೊದಲ ಟಿ20 ಪಂದ್ಯ ನಡೆಯಲಿರುವ ಡಬ್ಲಿನ್ ಪಿಚ್ ಹೇಗಿದೆ?: ಯಾರಿಗೆ ಸಹಕಾರಿ?
ತಮಿಳುನಾಡಿನ ಹೃದಯಭಾಗದಲ್ಲಿರುವ ಐಲ್ಯಾಂಡ್ ಮೈದಾನದ ಸುತ್ತಲೂ ಇರುವ 3.5-ಕಿಮೀ ಲೇಔಟ್ ಏಷ್ಯಾದಲ್ಲಿ ಮೊಟ್ಟಮೊದಲ ರಾತ್ರಿ ರೇಸ್ ಅನ್ನು ಆಯೋಜಿಸಲಾಗಿದೆ. ಚೆನ್ನೈ ಫಾರ್ಮುಲಾ ರೇಸಿಂಗ್ ಸರ್ಕ್ಯೂಟ್ F4 ಇಂಡಿಯನ್ ಚಾಂಪಿಯನ್‌ಶಿಪ್ ಮತ್ತು ಇಂಡಿಯನ್ ರೇಸಿಂಗ್ ಲೀಗ್‌ನ ಕೊನೆಯ ಹಂತವನ್ನು ಡಿಸೆಂಬರ್ 9 ಮತ್ತು 10 ರಂದು ಈ ವರ್ಷದ ಕೊನೆಯಲ್ಲಿ ಆಯೋಜಿಸಲಾಗುತ್ತಿದೆ. ಇದರಲ್ಲಿ ಭಾರತ ಮತ್ತು ವಿದೇಶದ ಚಾಲಕರು ಭಾಗವಹಿಸಲಿದ್ದಾರೆ. ಕಳೆದ ವರ್ಷ ಐಆರ್‌ಎಲ್‌ನಲ್ಲಿದ್ದಂತೆ ಆರು ಮಹಿಳಾ ಚಾಲಕರು ಕೂಡ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಸರ್ಕಾರವು ಈ ಯೋಜನೆಗಾಗಿ 42 ಕೋಟಿ ರೂ. ಗಳನ್ನು ಮತ್ತು SDAT ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC) ಮತ್ತು ಚೆನ್ನೈ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿ (CMDA) ಅನ್ನು RPPL ನೊಂದಿಗೆ ಸಹಕರಿಸಲು ನಿಯೋಜಿಸಿದೆ. ಈ ವರ್ಷದ ಆರಂಭದಲ್ಲಿ ಎಫ್‌ಐಎ ಫಾರ್ಮುಲಾ ಇ ಚಾಂಪಿಯನ್ಶಿಪ್ಗೆ ಹೈದರಾಬಾದ್ ಆತಿಥ್ಯ ವಹಿಸಿತ್ತು. ಇದೀಗ ಭಾರತದ ಎರಡನೇ ಸ್ಟ್ರೀಟ್ ಸರ್ಕ್ಯೂಟ್ ತಯಾರಾಗುತ್ತಿದೆ.
“ನಾವು ಈ ತಿಂಗಳೊಳಗೆ ಮೊದಲ ಹಂತದ ಕೆಲಸವನ್ನು ಪ್ರಾರಂಭಿಸುತ್ತೇವೆ ಮತ್ತು ಸೆಪ್ಟೆಂಬರ್ ಅಂತ್ಯದ ವೇಳೆಗೆ ಎಲ್ಲ ಪೂರ್ಣ ತಯಾರಿ ಮಾಡಿಕೊಳ್ಳುತ್ತೇವೆ. ರೇಸ್‌ಗೆ ಎರಡೂವರೆ ತಿಂಗಳ ಮೊದಲು ನೆಲದ ಮೇಲೆ ಲೈಟ್ ಅಳವಡಿಸುವ ಕೆಲಸ ಮಾಡಲು ಪ್ರಾರಂಭಿಸುತ್ತೇವೆ. ಜೊತೆಗೆ ಈವೆಂಟ್‌ಗೆ ಒಂದೂವರೆ ತಿಂಗಳ ಮೊದಲು ಸುರಕ್ಷತೆ ಬಗ್ಗೆ ಪರೀಕ್ಷಿಸುತ್ತೇವೆ,” ಎಂದು ಆರ್‌ಪಿಪಿಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:14 pm, Fri, 18 August 23