FIFA Women’s World Cup 2023: ತಂಡಗಳು ತಂಗಿದ್ದ ಹೋಟೆಲ್ ಬಳಿ ಗುಂಡಿನ ದಾಳಿ! ಮೂವರ ಸಾವು

FIFA Women's World Cup 2023: ಮೊದಲ ಪಂದ್ಯಕ್ಕಾಗಿ ಆಕ್ಲೆಂಡ್​ನ ಹೋಟೆಲ್​ನಲ್ಲಿ ಮಹಿಳಾ ತಂಡಗಳು ತಂಗಿದ್ದು, ಆ ಹೋಟೆಲ್​ ಬಳಿ​ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಬಂದೂಕುಧಾರಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

Important Highlight‌
FIFA Women's World Cup 2023: ತಂಡಗಳು ತಂಗಿದ್ದ ಹೋಟೆಲ್ ಬಳಿ ಗುಂಡಿನ ದಾಳಿ! ಮೂವರ ಸಾವು
ಫಿಫಾ ವಿಶ್ವಕಪ್
Follow us
ಪೃಥ್ವಿಶಂಕರ
|

Updated on:Jul 20, 2023 | 11:41 AM

ಇಂದಿನಿಂದ ಅಂದರೆ, ಜುಲೈ 20 ರಿಂದ 32 ದೇಶಗಳ ಮಹಿಳಾ ತಂಡಗಳ ನಡುವೆ ಫಿಫಾ ವಿಶ್ವಕಪ್ (FIFA Women’s World Cup 2023) ಕದನ ಆರಂಭವಾಗಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ (Australia and New Zealand)) ಎರಡೂ ದೇಶಗಳು ಜಂಟಿಯಾಗಿ ಈ ಬಾರಿಯ ವಿಶ್ವಕಪ್​ಗೆ ಆತಿಥ್ಯವಹಿಸಿವೆ. ಟೂರ್ನಿಯ ಆರಂಭಿಕ ಪಂದ್ಯ ನ್ಯೂಜಿಲೆಂಡ್‌ನ ಆಕ್ಲೆಂಡ್ (Auckland) ನಗರದಲ್ಲಿ ನಡೆಯಲಿದ್ದು, ಉದ್ಘಾಟನಾ ಪಂದ್ಯ ಆರಂಭಕ್ಕೂ ಕೆಲವೇ ಗಂಟೆಗಳ ಮುನ್ನ ಆಕ್ಲೆಂಡ್ ನಗರದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಮೊದಲ ಪಂದ್ಯಕ್ಕಾಗಿ ಆಕ್ಲೆಂಡ್​ನ ಹೋಟೆಲ್​ನಲ್ಲಿ ಮಹಿಳಾ ತಂಡಗಳು ತಂಗಿದ್ದು, ಆ ಹೋಟೆಲ್​ ಬಳಿ​ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಬಂದೂಕುಧಾರಿ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ನಾರ್ವೆ ತಂಡಕ್ಕೆ ಆಘಾತ

ವಾಸ್ತವವಾಗಿ ಇಂದಿನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಹಾಗೂ ನಾರ್ವೆ ತಂಡಗಳು ಆಕ್ಲೆಂಡ್​ನಲ್ಲಿ ಮುಖಾಮುಖಿಯಾಗುತ್ತಿವೆ. ಹೀಗಾಗಿ ನಾರ್ವೆ ತಂಡ ಆಕ್ಲೆಂಡ್​ನಲ್ಲಿ ವಾಸ್ತವ್ಯ ಹೂಡಿದೆ. ಇದೀಗ ನಾರ್ವೆ ತಂಡ ತಂಗಿರುವ ಹೋಟೆಲ್​ನಿಂದ ಕೇವಲ 300 ಮೀಟರ್ ದೂರದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯ ಬಗ್ಗೆ ಮಾತನಾಡಿರುವ ನಾರ್ವೆ ತಂಡದ ನಾಯಕಿ ಮಾರೆನ್ ಮ್ಜೆಲ್ಡೆ, ಮೊದಲಿಗೆ ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ. ಆದರೆ ಅಂತಿಮವಾಗಿ ಟಿವಿ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡೆವು ಎಂದಿದ್ದಾರೆ. ಸದ್ಯ ಘಟನೆ ನಡೆದ ಬಳಿಕ ನಾರ್ವೆ ತಂಡವನ್ನು ಹೆಲಿಕಾಪ್ಟರ್ ಮೂಲಕ ಬೇರೆ ಹೋಟೆಲ್​ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

Women FIFA World Cup 2023: 32 ತಂಡಗಳ ನಡುವೆ ಫುಟ್ಬಾಲ್ ಕದನ; ವಿಜೇತರಿಗೆ ₹86 ಕೋಟಿ ಬಹುಮಾನ..!

ನ್ಯೂಜಿಲೆಂಡ್ ಫುಟ್ಬಾಲ್ ಹೇಳಿದ್ದೇನು?

ಘಟನೆಯ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ನ್ಯೂಜಿಲೆಂಡ್ ಫುಟ್ಬಾಲ್, ಎಲ್ಲಾ ತಂಡಗಳು ಸುರಕ್ಷಿತವಾಗಿವೆ. ಈ ಘಟನೆಗೂ ಫಿಫಾ ವಿಶ್ವಕಪ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಫಿಫಾಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಗುಂಪು ಹಂತದಲ್ಲಿ ಇಂದು ಮೊದಲ ಪಂದ್ಯ

ಮಹಿಳಾ ವಿಶ್ವಕಪ್​ನ ಗುಂಪು ಹಂತವು ಜುಲೈ 20 ರಿಂದ ಅಂದರೆ ಇಂದಿನಿಂದ ಆರಂಭವಾಗಲಿದ್ದು, ಲೀಗ್​ ಸುತ್ತಿನ ಕೊನೆಯ ಪಂದ್ಯ ಆಗಸ್ಟ್ 3 ರಂದು ನಡೆಯಲಿದೆ. ಆ ಬಳಿಕ 16ನೇ ಸುತ್ತಿನ ಪಂದ್ಯಗಳು ಆಗಸ್ಟ್ 5 ಆರಂಭವಾಗಲಿದ್ದು, ಆಗಸ್ಟ್ 8 ರವರೆಗೆ ನಡೆಯಲಿವೆ. ನಂತರ ಕ್ವಾರ್ಟರ್ ಫೈನಲ್ ಸುತ್ತು ಆರಂಭವಾಗಲಿದ್ದು, ಮೊದಲ ಮತ್ತು ಎರಡನೇ ಕ್ವಾರ್ಟರ್ ಫೈನಲ್ ಪಂದ್ಯಗಳು ಆಗಸ್ಟ್ 11 ರಂದು ಮತ್ತು ಮೂರು ಮತ್ತು ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯಗಳು ಆಗಸ್ಟ್ 12 ರಂದು ನಡೆಯಲಿವೆ. ಮೊದಲ ಸೆಮಿಫೈನಲ್ ಪಂದ್ಯ ಆಗಸ್ಟ್ 15 ರಂದು ಮತ್ತು ಎರಡನೇ ಸೆಮಿಫೈನಲ್ ಪಂದ್ಯ ಆಗಸ್ಟ್ 16 ರಂದು ನಡೆಯಲಿದೆ. ಮೂರನೇ ಸ್ಥಾನಕ್ಕಾಗಿ ಆಗಸ್ಟ್ 19 ರಂದು ಪಂದ್ಯ ನಡೆಯಲಿದೆ. ಬಳಿಕ ಫೈನಲ್ ಪಂದ್ಯ ಆಗಸ್ಟ್ 20ರಂದು ನಡೆಯಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:41 am, Thu, 20 July 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು