ಫಿಫಾ ಮಹಿಳಾ ವಿಶ್ವಕಪ್ 2023 ರ (Fifa Women World Cup 2023) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 3 ಗೋಲುಗಳನ್ನು ದಾಖಲಿಸುವ ಮೂಲಕ ಇಂಗ್ಲೆಂಡ್ (Australia vs England) ಮಹಿಳಾ ಫುಟ್ಬಾಲ್ ತಂಡವು ಮೊದಲ ಬಾರಿಗೆ ಫಿಫಾ ವಿಶ್ವಕಪ್‌ನ ಫೈನಲ್ ತಲುಪಿದೆ. ಇತ್ತ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ವಿರುದ್ಧ 1-3 ಅಂತರದಲ್ಲಿ ಸೋಲನುಭವಿಸಿ ಫೈನಲ್ ರೇಸ್ನಿಂದ ಹೊರಬಿದ್ದಿದೆ. ಈ ಉಭಯ ತಂಡಗಳ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆದ ಮೊದಲನೇ ಸೆಮಿ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಮಹಿಳಾ ಫುಟ್ಬಾಲ್ ತಂಡವು ಸ್ವೀಡನ್ ವಿರುದ್ಧ 2-1 ಅಂತರದ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದೆ. ಹೀಗಾಗಿ ಸ್ಪೇನ್ ಹಾಗೂ ಇಂಗ್ಲೆಂಡ್ (Spain vs England) ನಡುವೆ ಫೈನಲ್ ಫೈಟ್ ನಡೆಯಲ್ಲಿದೆ.
ಇನ್ನು ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯದ ಮೊದಲಾರ್ಧದಲ್ಲಿ ಇಂಗ್ಲೆಂಡ್ ಪರ ಎಲಾ 36ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 63ನೇ ನಿಮಿಷದಲ್ಲಿ ಆಸ್ಟ್ರೇಲಿಯದ ಸ್ಯಾಮ್ ಕೈರ್ ಗೋಲು ಗಳಿಸುವ ಮೂಲಕ ಸ್ಕೋರ್ ಅನ್ನು ಸಮಗೊಳಿಸಿದರು. ಆದರೆ ಇಂಗ್ಲೆಂಡ್ ಮಹಿಳಾ ತಂಡ ಪಂದ್ಯದ 71 ಮತ್ತು 86ನೇ ನಿಮಿಷದಲ್ಲಿ ಅದ್ಭುತ ಗೋಲು ಬಾರಿಸುವ ಮೂಲಕ ಫೈನಲ್ ಪ್ರವೇಶಿಸಿತು.
‘ಭಾರತದಲ್ಲಿ ಫಿಫಾ ವಿಶ್ವಕಪ್, ನಮ್ಮ ತಂಡವೂ ಅಖಾಡಕ್ಕೆ’; ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
32 ವರ್ಷಗಳ ಹಿಂದೆ ಅಂದರೆ 1991 ರಲ್ಲಿ ಆರಂಭವಾದ ಫಿಫಾ ಮಹಿಳಾ ವಿಶ್ವಕಪ್‌ನಲ್ಲಿ ಅಮೆರಿಕ ತಂಡ ನಾಲ್ಕು ಬಾರಿ ವಿಶ್ವಕಪ್ ಗೆದ್ದುಕೊಂಡಿದೆ. ಆದರೆ ಅಮೇರಿಕಾ ಈ ಬಾರಿ ಸೆಮಿ ಫೈನಲ್ ಕೂಡ ತಲುಪಲಿಲ್ಲ. ಹೀಗಾಗಿ ಈ ವರ್ಷ, ಮಹಿಳಾ ವಿಶ್ವಕಪ್‌ನಲ್ಲಿ ಹೊಸ ಚಾಂಪಿಯನ್ ತಂಡ ಸಿಗಲಿದೆ.
🇦🇺 @KatrinaGorry, centurion. ✨@TheMatildas | #FIFAWWC pic.twitter.com/DtD89jY3xZ
— FIFA Women’s World Cup (@FIFAWWC) August 16, 2023
Tooney magic. 💫@EllaToone99 | #FIFAWWC
— FIFA Women’s World Cup (@FIFAWWC) August 16, 2023
#ENG with the advantage at the break! #BeyondGreatness | #FIFAWWC
— FIFA Women’s World Cup (@FIFAWWC) August 16, 2023
ಮೂರನೇ ಸ್ಥಾನದ ಪಂದ್ಯ ಆಗಸ್ಟ್ 19ರಂದು ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಈ ಪಂದ್ಯ ಆಸ್ಟ್ರೇಲಿಯಾ ಮತ್ತು ಸ್ವೀಡನ್ ನಡುವೆ ನಡೆಯಲಿದೆ. ಫೈನಲ್ ಪಂದ್ಯ ಆಗಸ್ಟ್ 20 ರಂದು ಮಧ್ಯಾಹ್ನ 3.30 ಕ್ಕೆ ಆರಂಭವಾಗಲಿದೆ. ಸ್ಪೇನ್ ಮತ್ತು ಇಂಗ್ಲೆಂಡ್ ಮಹಿಳಾ ಫುಟ್ಬಾಲ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲ್ಲಿದೆ. ಈ ಪಂದ್ಯದಲ್ಲಿ ಯಾರೇ ಗೆದ್ದರು ಮೊದಲನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ದಾಖಲೆ ಬರೆಯಲ್ಲಿದ್ದಾರೆ.
ಈಡನ್ ಪಾರ್ಕ್‌ನಲ್ಲಿ ಸ್ಪೇನ್ ಮತ್ತು ಸ್ವೀಡನ್ ಮಹಿಳಾ ಫುಟ್‌ಬಾಲ್ ತಂಡದ ನಡುವಿನ ಸೆಮಿಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ 80 ಮತ್ತು 90 ನಿಮಿಷಗಳ ನಡುವೆ ಗೋಲುಗಳನ್ನು ದಾಖಲಿಸಿದ ಸ್ಪೇನ್‌ನ ಮಹಿಳಾ ಫುಟ್ಬಾಲ್ ತಂಡವು ಸ್ವೀಡನ್ ವಿರುದ್ಧ 2-1 ಅಂತರದ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದೆ.
ನೆದರ್ಲೆಂಡ್ಸ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಗೋಲು ಗಳಿಸಿದ ಸಲ್ಮಾ ಪೆರಾಲುಲ್ಲೊ 81ನೇ ನಿಮಿಷದಲ್ಲಿ ಆರಂಭಿಕ ಗೋಲು ಗಳಿಸಿ ಸ್ಪೇನ್‌ಗೆ ಮುನ್ನಡೆ ತಂದುಕೊಟ್ಟರು. 88ನೇ ನಿಮಿಷದಲ್ಲಿ ಸ್ವೀಡನ್ ಆಟಗಾರ್ತಿ ಗೋಲು ಬಾರಿಸಿ 1-1 ರಿಂದ ಸಮಬಲ ಸಾಧಿಸಿದರು. ಆದರೆ ಅಂತಿಮವಾಗಿ 90ನೇ ನಿಮಿಷದಲ್ಲಿ ಓಲ್ಗಾ ಕಾರ್ಮೊ ಗಳಿಸಿದ ಗೋಲು ಸೆಮಿಫೈನಲ್‌ನಲ್ಲಿ ಸ್ಪೇನ್‌ಗೆ 2-1 ಅಂತರದ ಜಯ ತಂದುಕೊಟ್ಟಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ