Virat Kohli: ವಿರಾಟ್ ಕೊಹ್ಲಿ ದಾಖಲೆಯ ಶತಕ ಸಿಡಿಸುವ ಮುನ್ನ ಕ್ರೀಸ್​ನಲ್ಲಿ ಏನು ಮಾಡಿದ್ರು ನೋಡಿ

| Updated By: Vinay Bhat

Updated on: Sep 10, 2022 | 9:44 AM

Asia Cup 2022: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ ಅಂಚಿನಲ್ಲಿ ಇರುವಾಗ ಯಾವುದೆ ಒತ್ತಡವಿಲ್ಲದೆ ಕ್ರೀಸ್​ನಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

Virat Kohli: ವಿರಾಟ್ ಕೊಹ್ಲಿ ದಾಖಲೆಯ ಶತಕ ಸಿಡಿಸುವ ಮುನ್ನ ಕ್ರೀಸ್​ನಲ್ಲಿ ಏನು ಮಾಡಿದ್ರು ನೋಡಿ
Virat Kohli Century
Follow us on

ಹದಿನೈದನೆ ಆವೃತ್ತಿಯ ಏಷ್ಯಾಕಪ್​ನಿಂದ (Asia Cup 2022) ಭಾರತ ಹೊರಬಿದ್ದಾಗಿದೆ. ಇದೀಗ ತವರಿಗೆ ಹೊರಟಿರುವ ಟೀಮ್ ಇಂಡಿಯಾ (Team India) ಮುಂದಿನ ಸರಣಿಗೆ ಸಜ್ಜಾಗಬೇಕಿದೆ. ಏಷ್ಯಾಕಪ್​ನ ಸೂಪರ್ 4 ಹಂತದಲ್ಲಿ ಮೊದಲ ಎರಡು ಪಂದ್ಯ ಸೋತ ಪರಿಣಾಮ ರೋಹಿತ್ ಪಡೆ ಫೈನಲ್​ಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಭಾರತ ಏಷ್ಯಾಕಪ್ ಎತ್ತಿ ಹಿಡಿಯಲು ವಿಫಲವಾಯಿತು ಎಂಬ ದುಃಖದ ನಡುವೆ ಅಭಿಮಾನಿಗಳನ್ನು ನಿರಾಳಗೊಳಿಸಿದ್ದು ವಿರಾಟ್ ಕೊಹ್ಲಿಯ (Virat Kohli) ಶತಕ. 1021 ದಿನಗಳ ಬಳಿಕ ಕೊಹ್ಲಿ ಬ್ಯಾಟ್​ನಿಂದ ಕೊನೆಗೂ ಸೆಂಚುರಿಯೊಂದು ಮೂಡಿಬಂತು. ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್​ಗೂ ಮುನ್ನ ಭಾರತಕ್ಕೆ ಸಿಕ್ಕ ಸಂತಸದ ಸುದ್ದಿ ಇದಾಗಿದೆ. ಕೇವಲ 61 ಎಸೆತಗಳಲ್ಲಿ 12 ಬೌಂಡರಿ, 6 ಅಮೋಘ ಸಿಕ್ಸರ್​ನೊಂದಿಗೆ 200 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ ಅಜೇಯ 122 ರನ್ ಚಚ್ಚಿದರು.

ಇದೀಗ ಕೊಹ್ಲಿ ಶತಕದ ಅಂಚಿನಲ್ಲಿ ಇರುವಾಗ ಯಾವುದೆ ಒತ್ತಡವಿಲ್ಲದೆ ಕ್ರೀಸ್​ನಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. 90ರ ಗಡಿಯಲ್ಲಿದ್ದ ಕೊಹ್ಲಿ 17ನೇ ಓವರ್​ ನಡೆಯುತ್ತಿರುವಾಗ ಸ್ಟೇಡಿಯಂನಲ್ಲಿ ಡಿಜೆ ಪ್ಲೇ ಮಾಡಲಾಗಿದೆ. ಈ ಸಂದರ್ಭ ಕ್ರೀಸ್​ನಲ್ಲಿ ಬ್ಯಾಟಿಂಗ್​ಗೆ ತಯಾರಾಗುವ ಮುನ್ನ ಕೊಹ್ಲಿ ನೃತ್ಯ ಮಾಡುವುದು ಕಂಡುಬಂದಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ಇದನ್ನೂ ಓದಿ
SL vs PAK: ಏಷ್ಯಾಕಪ್ ಫೈನಲ್​ಗೂ ಮುನ್ನ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಶ್ರೀಲಂಕಾ
Aaron Finch retires: ಕಳಪೆ ಫಾರ್ಮ್: ಏಕದಿನ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಆ್ಯರೋನ್ ಫಿಂಚ್
Asia Cup 2022: ಏಷ್ಯಾಕಪ್‌ನಲ್ಲಿ ಭಾರತದ ಕಳಪೆ ಪ್ರದರ್ಶನ; ಟಿ20 ಕ್ರಿಕೆಟ್​ನಲ್ಲಿ ಲೆಜೆಂಡರಿ ಸ್ಪಿನ್ನರ್ ಯುಗಾಂತ್ಯ?
1 ಕೋಟಿ ರೂ. ಕೊಟ್ಟರು ಕೊಹ್ಲಿ ನೀಡಿದ ಉಡುಗೂರೆಯನ್ನು ಮಾರುವುದಿಲ್ಲ ಎಂದ ಪಾಕಿಸ್ತಾನಿ ಅಭಿಮಾನಿ..!

 

ಕೊಹ್ಲಿ ಸಿಕ್ಸ್ ಸಿಡಿಸಿ ಶತಕ ಬಾರಿಸುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಎದ್ದು ನಿಂತು ಗೌರವ ಸೂಚಿಸಿತು. ಇನ್ನಿಂಗ್ಸ್​ ಮುಗಿಸಿ ಪೆವಿಲಿಯನ್​ಗೆ ಬಂದಾಗ ಬೌಂಡರಿ ಲೈನ್ ಬಳಿಕ ಭಾರತೀಯ ಆಟಗಾರರು ಕೊಹ್ಲಿಗೆ ಶುಭಾಷಯ ತಿಳಿಸಲು ಕಾದುಕುಳಿತಿದ್ದರು. ಅದರಲ್ಲೂ ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿ ಆಗಮಿಸುತ್ತಿದ್ದಂತೆ ನಗುತ್ತಾ ಕೈಕೊಟ್ಟು ತಬ್ಬಿಕೊಂಡು ವಿಶ್ ಮಾಡಿ ಸಂಭ್ರಮ ಹಂಚಿಕೊಂಡರು.

ಇನ್ನು ವಿರಾಟ್ ಕೊಹ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ ವಿಚಾರದಲ್ಲಿ ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊಹ್ಲಿ 522 ಇನ್ನಿಂಗ್ಸ್‌ಗಳಲ್ಲಿ 71 ಶತಕಗಳನ್ನು ಪೂರ್ಣಗೊಳಿಸಿದರೆ ಪಾಂಟಿಂಗ್ ಇದಕ್ಕಾಗಿ 668 ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇನ್ನು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ ಗಳಿಸಿದ್ದ 118 ರನ್ ದಾಖಲೆಯಾಗಿತ್ತು. ಅಂತೆಯೆ ಅಂತರರಾಷ್ಟ್ರೀಯ ಟಿ20ಯಲ್ಲಿ ಶತಕ ಸಿಡಿಸಿದ ಅತಿ ಹಿರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

Published On - 9:44 am, Sat, 10 September 22