ಸೆಮಿಫೈನಲ್​ಗೆ ನ್ಯೂಜಿಲೆಂಡ್- ಇಂಗ್ಲೆಂಡ್‌; ವಿಶ್ವಕಪ್​ನಿಂದ ಆಸ್ಟ್ರೇಲಿಯಾ ಔಟ್! ಫೈನಲ್ ಪಾಯಿಂಟ್ ಪಟ್ಟಿ ಹೀಗಿದೆ

| Updated By: ಪೃಥ್ವಿಶಂಕರ

Updated on: Nov 05, 2022 | 5:46 PM

T20 world cup points table 2022: ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ 89 ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆದುದರಿಂದಲೇ ಅವರಿಗೆ ಕೇವಲ 7 ಅಂಕ ಗಳಿಸಲು ಸಾಧ್ಯವಾಯಿತು.

ಸೆಮಿಫೈನಲ್​ಗೆ ನ್ಯೂಜಿಲೆಂಡ್- ಇಂಗ್ಲೆಂಡ್‌; ವಿಶ್ವಕಪ್​ನಿಂದ ಆಸ್ಟ್ರೇಲಿಯಾ ಔಟ್! ಫೈನಲ್ ಪಾಯಿಂಟ್ ಪಟ್ಟಿ ಹೀಗಿದೆ
ಇಂಗ್ಲೆಂಡ್ ತಂಡ
Follow us on

ಗುರುವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಮಣಿಸಿದ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ 2022 ರಲ್ಲಿ (T20 world cup 2022) ಸೆಮಿಫೈನಲ್ ತಲುಪಿದ ಮೊದಲ ತಂಡ ಎನಿಸಿಕೊಂಡರೆ, ಶನಿವಾರ ಅದೇ ಗುಂಪಿನಿಂದ ಶ್ರೀಲಂಕಾವನ್ನು ಸೋಲಿಸಿದ ಇಂಗ್ಲೆಂಡ್ (England defeated Sri Lanka) ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಈ ಮೂಲಕ ಮೊದಲ ಗುಂಪಿನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ತಲುಪಿವೆ. ಆದ್ದರಿಂದ ಆತಿಥೇಯ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ (Australia) ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ.

ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದ ಇಂಗ್ಲೆಂಡ್ ತಂಡ ಈಗ ಪಾಯಿಂಟ್​ ಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಸೆಮಿಫೈನಲ್ ಟಿಕೆಟ್ ಖಚಿತ ಪಡಿಸಿಕೊಂಡಿದೆ. ಸಿಡ್ನಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಪಂದ್ಯ ಗೆದ್ದು ಆಸ್ಟ್ರೇಲಿಯಾದ ಪಯಣಕ್ಕೆ ಅಂತ್ಯ ಹಾಡಿತು. ಪಾಥುಮ್ ನಿಸಂಕಾ ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 141 ರನ್ ಗಳಿಸಿತು. ಇಂಗ್ಲೆಂಡ್ ಈ ಗುರಿಯನ್ನು ಎರಡು ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು. ತಂಡದ ಪರವಾಗಿ ಬೆನ್ ಸ್ಟೋಕ್ಸ್ ಅಜೇಯ 42 ಮತ್ತು ಅಲೆಕ್ಸ್ ಹೇಲ್ಸ್ 47 ರನ್ ಗಳಿಸಿದರು.

ಇದನ್ನೂ ಓದಿ: ENG vs SL: ಟಿ20 ವಿಶ್ವಕಪ್‌ನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಔಟ್! ಸೇಮಿಸ್​ಗೆ ಇಂಗ್ಲೆಂಡ್

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್

ನ್ಯೂಜಿಲೆಂಡ್ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಗುಂಪಿನಲ್ಲಿ ಮೊದಲ ಸ್ಥಾನ ಗಳಿಸಿದೆ. ಕಿವೀಸ್ ಪಡೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮುಗ್ಗರಿಸಿದರೆ, ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ +2.113 ನೆಟ್​ ರನ್ ರೇಟ್ ಹಾಗೂ ಏಳು ಪಾಯಿಂಟ್‌ಗಳೊಂದಿಗೆ ಸೆಮಿಫೈನಲ್‌ ತಲುಪಿದೆ . ಇಂಗ್ಲೆಂಡ್ ತಂಡ ಶನಿವಾರ ನಡೆಯಬೇಕಿದ್ದ ಪಂದ್ಯಕ್ಕೂ ಮೊದಲು ತನ್ನ ಖಾತೆಯಲ್ಲಿ ಐದು ಅಂಕಗಳನ್ನು ಹೊಂದಿತ್ತು. ಆದರೆ ಶ್ರೀಲಂಕಾವನ್ನು ಸೋಲಿಸಿದ ನಂತರ ಅದಕ್ಕೆ ಎರಡು ಅಂಕಗಳು ಲಭಿಸಿವೆ. ಇದರೊಂದಿಗೆ ಆಂಗ್ಲರು ಒಟ್ಟು 7 ಅಂಕಗಳನ್ನು ಸಂಪಾದಿಸಿದ್ದಾರೆ. ಆಸ್ಟ್ರೇಲಿಯಾ ಕೂಡ ಏಳು ಅಂಕಗಳನ್ನು ಹೊಂದಿದೆ. ಆದರೆ ಅದರ ನೆಟ್ ರನ್ ರೇಟ್ ಇಂಗ್ಲೆಂಡ್‌ಗಿಂತ ಕಡಿಮೆಯಿದೆ. ಇದರಿಂದಾಗಿ ಹಾಲಿ ಚಾಂಪಿಯನ್​ಗಳು ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.

ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ಔಟ್

ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ 89 ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆದುದರಿಂದಲೇ ಅವರಿಗೆ ಕೇವಲ 7 ಅಂಕ ಗಳಿಸಲು ಸಾಧ್ಯವಾಯಿತು. ಏಷ್ಯನ್ ಚಾಂಪಿಯನ್ ಶ್ರೀಲಂಕಾ ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿತು. ಅರ್ಹತಾ ಪಂದ್ಯಗಳನ್ನು ಆಡುವ ಮೂಲಕ ಸೂಪರ್ 12 ಗೆ ಎಂಟ್ರಿಕೊಟ್ಟಿದ್ದ ಐರ್ಲೆಂಡ್, ಈ ಸುತ್ತಿನಲ್ಲಿ ಆಡಿದ ಐದರಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದು ಪಾಯಿಂಟ್​ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿತು. ಮತ್ತೊಂದೆಡೆ, ಅಫ್ಘಾನಿಸ್ತಾನದ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾದರಿಂದ ಅದು ಎರಡು ಅಂಕಗಳನ್ನು ಪಡೆದುಕೊಂಡಿತು. ಇದರ ಹೊರತಾಗಿ ಅಫ್ಘಾನ್ ತಂಡಕ್ಕೆ ಯಾವುದೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ತಂಡ

ಅಂಕ
ನ್ಯೂಜಿಲೆಂಡ್

7 (+2.113 NRR)

ಇಂಗ್ಲೆಂಡ್

7 (+0.473 NRR)
ಆಸ್ಟ್ರೇಲಿಯಾ

7 (-0.173 NRR)

ಶ್ರೀಲಂಕಾ

4 (-0.422 NRR)
ಐರ್ಲೆಂಡ್

3 (-1.615 NRR)

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Sat, 5 November 22