T20 World Cup: ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಚುಟುಕು ಕ್ರಿಕೆಟ್ ಕದನ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳಿಗೆ ಅವಕಾಶ ನೀಡಲು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಮುಂದಾಗಿದೆ. ಅದರಂತೆ 2024 ರ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಇದರಲ್ಲಿ 12 ತಂಡಗಳು ನೇರ ಅರ್ಹತೆ ಪಡೆದರೆ, 8 ತಂಡಗಳು ಅರ್ಹತಾ ಸುತ್ತಿನ ಮೂಲಕ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲಿದೆ. ವಿಶೇಷ ಎಂದರೆ ನೇರ ಅರ್ಹತೆಯ ಮೂಲಕ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಈಗಾಗಲೇ ಟಿ20 ವಿಶ್ವಕಪ್ 2024 ರಲ್ಲಿ ಸ್ಥಾನ ಪಡೆದಿದೆ. ಐಸಿಸಿ ನಿಯಮದ ಪ್ರಕಾರ ಟೂರ್ನಿಗೆ ಆತಿಥ್ಯವಹಿಸುವ ದೇಶಗಳಿಗೆ ನೇರ ಅವಕಾಶ ದೊರೆಯಲಿದೆ. ಅದರಂತೆ 2024 ರಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಜಂಟಿಯಾಗಿ ಆಯೋಜಿಸಲಾಗುತ್ತಿದೆ. ಹೀಗಾಗಿ ಈ ಎರಡು ದೇಶಗಳು ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಉಳಿದ 10 ತಂಡಗಳಿಗೆ ಟಾಪ್ 10 ಟಿ20 ರ್ಯಾಂಕಿಂಗ್ ಆಧಾರದಲ್ಲಿ ಅವಕಾಶ ದೊರೆಯಲಿದೆ.
ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಟಾಪ್-8 ತಂಡಗಳಿಗೂ ನೇರ ಪ್ರವೇಶ ನೀಡಲಾಗಿದೆ. ಉಳಿದ 8 ಸ್ಥಾನಗಳಿಗೆ ಅರ್ಹತಾ ಪಂದ್ಯಗಳು ನಡೆಯಲಿವೆ. ಅಂದರೆ ಈ ಬಾರಿ ಎಂದಿನಂತೆ ಒಟ್ಟು 16 ತಂಡಗಳು ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿದೆ. ಆ ಬಳಿಕ ಸೂಪರ್ 12 ಪಂದ್ಯಗಳು ನಡೆಯಲಿದೆ.
ಅರ್ಹತಾ ಸ್ಪರ್ಧೆಯಲ್ಲಿ 66 ದೇಶಗಳು:
2024 ರ ಟಿ20 ವಿಶ್ವಕಪ್ಗಾಗಿ ಒಟ್ಟು 66 ದೇಶದ ತಂಡಗಳು ಅರ್ಹತಾ ಸ್ಪರ್ಧೆಯಲ್ಲಿದೆ. ಇದರಲ್ಲಿ ಆಫ್ರಿಕಾದ 14 ತಂಡಗಳು, ಅಮೆರಿಕದ 8 ತಂಡಗಳು, ಏಷ್ಯಾದ 9 ತಂಡಗಳು, ಇಎಪಿಯ 7 ತಂಡಗಳು ಮತ್ತು ಯುರೋಪ್‌ನ 28 ತಂಡಗಳು ಸೇರಿವೆ. ಈ ಪಂದ್ಯಗಳು 2 ವರ್ಷಗಳ ಕಾಲ ನಡೆಯಲಿವೆ. ಹಂಗೇರಿ, ರೊಮೇನಿಯಾ ಮತ್ತು ಸರ್ಬಿಯಾ ಮೊದಲ ಬಾರಿಗೆ ಈವೆಂಟ್‌ಗೆ ಪ್ರವೇಶಿಸುವ ಅವಕಾಶವನ್ನು ಪಡೆಯುತ್ತಿವೆ.
ಐಸಿಸಿ ಟೂರ್ನಿಯಲ್ಲಿ ದಾಖಲೆ ಸಂಖ್ಯೆಯ ತಂಡಗಳು ಭಾಗವಹಿಸುವುದನ್ನು ನೋಡಲು ನಮಗೆ ಸಂತೋಷವಾಗುತ್ತಿದೆ. ಯುರೋಪ್‌ನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. T20 ಸ್ವರೂಪವು ಆಟದ ವಿಕಾಸವನ್ನು ಮುಂದುವರೆಸಿದೆ ಮತ್ತು ಮುಂದಿನ 2 ವರ್ಷಗಳಲ್ಲಿ ಮೊದಲ ಬಾರಿಗೆ ಐಸಿಸಿ ಟೂರ್ನಿಗಳಲ್ಲಿ ಹೊಸ ತಂಡಗಳು ಆಡುವುದನ್ನು ನಾವು ನೋಡುತ್ತೇವೆ ಎಂದು ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದ್ದಾರೆ.
7 ವಿಶ್ವಕಪ್ 6 ತಂಡಗಳು ಚಾಂಪಿಯನ್ಸ್:
2007 ರಲ್ಲಿ ಟಿ20 ವಿಶ್ವಕಪ್ ಆರಂಭವಾಗಿತ್ತು. ಇದುವರೆಗೆ 7 ಬಾರಿ ಚುಟುಕು ಕ್ರಿಕೆಟ್ ಕದನವನ್ನು ಆಯೋಜಿಸಲಾಗಿದ್ದು, 6 ತಂಡಗಳು ಚಾಂಪಿಯನ್ ಆಗಿವೆ. ವೆಸ್ಟ್ ಇಂಡೀಸ್ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರೆ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಲಾ ಒಂದು ಬಾರಿ ಟ್ರೋಫಿಯನ್ನು ವಶಪಡಿಸಿಕೊಂಡಿವೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವುದು 8ನೇ ಟಿ20 ವಿಶ್ವಕಪ್ ಹಾಗೂ ಅಮೆರಿಕ-ವೆಸ್ಟ್ ಇಂಡೀಸ್ ಆಯೋಜಿಸಲಿರುವ 9ನೇ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ.
ಟಿ20 ವಿಶ್ವಕಪ್ 2022ರ ಗ್ರೂಪ್ ಮತ್ತು ಭಾರತ ತಂಡದ ವೇಳಾಪಟ್ಟಿ:
ಸೂಪರ್ 12 ಗ್ರೂಪ್:
ಟೀಮ್ ಇಂಡಿಯಾದ ಪಂದ್ಯಗಳ ವೇಳಾಪಟ್ಟಿ:
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.