ಯುಎಇನಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 2ನೇ ಸೀಸನ್ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕಣಕ್ಕಿಳಿಯುವುದು ಖಚಿತವಾಗಿದೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ವಾರ್ನರ್ ಐಎಲ್ಟಿ ಲೀಗ್ನಲ್ಲಿ ದುಬೈ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಈ ತಂಡ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಒಡೆತನದಲ್ಲಿದೆ. ಹೀಗಾಗಿಯೇ ಹೊಸ ಲೀಗ್ನಲ್ಲಿ ಆಡಲು ವಾರ್ನರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇನ್ನು ಡೇವಿಡ್ ವಾರ್ನರ್ ಜೊತೆಗೆ ದುಬೈ ಕ್ಯಾಪಿಟಲ್ಸ್ ಒಂದಷ್ಟು ಹೊಸ ಆಟಗಾರರೊಂದಿಗೆ ಕೂಡ ಒಪ್ಪಂದ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ ಶ್ರೀಲಂಕಾ ತಂಡದ ನಾಯಕ ದಸುನ್ ಶಾನ, ಅಫ್ಘಾನಿಸ್ತಾನದ ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಝ್, ಇಂಗ್ಲೆಂಡ್ ವೇಗಿ ಮಾರ್ಕ್ ವುಡ್, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಯಾಮ್ ಬಿಲ್ಲಿಂಗ್ಸ್, ಆಸ್ಟ್ರೇಲಿಯಾ ಆಂಡ್ರ್ಯೂ ಟೈಯಂತಹ ಸ್ಟಾರ್ ಆಟಗಾರರಿದ್ದಾರೆ.
ಹೀಗಾಗಿ ಈ ಬಾರಿ ದುಬೈ ಕ್ಯಾಪಿಟಲ್ಸ್ ತಂಡ ಮತ್ತಷ್ಟು ಬಲಿಷ್ಠತೆಯೊಮದಿಗೆ ಕಣಕ್ಕಿಳಿಯುವುದು ಖಚಿತ ಎನ್ನಬಹುದು. ಏಕೆಂದರೆ ವೆಸ್ಟ್ ಇಂಡೀಸ್ನ ಸ್ಪೋಟಕ ದಾಂಡಿಗ ರೋವ್ಮನ್ ಪೊವೆಲ್, ಝಿಂಬಾಬ್ವೆಯ ಸಿಕಂದರ್ ರಾಝ, ಇಂಗ್ಲೆಂಡ್ನ ಜೋ ರೂಟ್, ಶ್ರೀಲಂಕಾದ ದುಷ್ಮಂತ ಚಮೀರಾ ಈಗಾಗಲೇ ತಂಡದಲ್ಲಿದ್ದಾರೆ.
ಇದೀಗ ಡೇವಿಡ್ ವಾರ್ನರ್ ಸೇರಿದಂತೆ ಪ್ರಮುಖ ಆಟಗಾರರು ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದು, ಹೀಗಾಗಿ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 2ನೇ ಸೀಸನ್ನಲ್ಲಿ ದುಬೈ ತಂಡದಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ದುಬೈ ಕ್ಯಾಪಿಟಲ್ಸ್ ತಂಡದ ಹೊಸ ಆಯ್ಕೆ: ದಸುನ್ ಶಾನಕ, ಡೇವಿಡ್ ವಾರ್ನರ್, ಮಾರ್ಕ್ ವುಡ್, ಮ್ಯಾಕ್ಸ್ ಹೋಲ್ಡನ್, ಮೊಹಮ್ಮದ್ ಮೊಹ್ಸಿನ್, ರಹಮಾನುಲ್ಲಾ ಗುರ್ಬಾಜ್, ನುವಾನ್ ತುಷಾರ, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಸದೀರ ಸಮರವಿಕ್ರಮ ಮತ್ತು ಸ್ಯಾಮ್ ಬಿಲ್ಲಿಂಗ್ಸ್.
ದುಬೈ ಕ್ಯಾಪಿಟಲ್ಸ್ ರಿಟೈನ್ ಮಾಡಿಕೊಂಡ ಆಟಗಾರರು: ದುಷ್ಮಂತ ಚಮೀರಾ, ಜೋ ರೂಟ್, ರಾಜಾ ಅಕಿಫ್, ರೋವ್ಮನ್ ಪೊವೆಲ್ ಮತ್ತು ಸಿಕಂದರ್ ರಾಝ.
ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 2ನೇ ಸೀಸನ್ ಜನವರಿ 13 ರಿಂದ ಶುರುವಾಗಲಿದ್ದು, ಪೆಬ್ರವರಿ 12 ಕ್ಕೆ ಕೊನೆಗೊಳ್ಳಲಿದೆ. ಆರು ಫ್ರಾಂಚೈಸಿಗಳ ನಡುವಣ ಈ ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ.
ಇದನ್ನೂ ಓದಿ: David Warner: ಹೊಸ ವಿಶ್ವ ದಾಖಲೆ ನಿರ್ಮಿಸಿದ ಡೇವಿಡ್ ವಾರ್ನರ್