Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!

| Updated By: Zahir Yusuf

Updated on: Jul 09, 2022 | 1:54 PM

Cricket Records: ಕ್ರಿಕೆಟ್​ ಇತಿಹಾಸದ ಕೆಲವೊಂದು ದಾಖಲೆಗಳು ಹಾಗೆಯೇ ಉಳಿದಿವೆ. ಈ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ ಎನ್ನಲಾಗುತ್ತದೆ. ಅಂತಹ ಕೆಲ ದಾಖಲೆಗಳ ಮಾಹಿತಿ ಈ ಕೆಳಗಿನಂತಿವೆ.

Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
ಸಾಂದರ್ಭಿಕ ಚಿತ್ರ
Follow us on

ಕ್ರಿಕೆಟ್​ನಲ್ಲಿ ದಾಖಲೆಗಳು ಇರುವುದೇ ಮುರಿಯಲು ಎಂಬ ಮಾತಿದೆ…ಒಂದೊಂದು ಪಂದ್ಯದಲ್ಲೂ ಒಂದೊಂದು ದಾಖಲೆಗಳು ಕೂಡ ನಿರ್ಮಾಣವಾಗುತ್ತಿದೆ. ಅದರಲ್ಲೂ ಟಿ20 ಕ್ರಿಕೆಟ್ ಬಂದ ಮೇಲೆ ದಾಖಲೆಗಳ ಮೇಲೆ ದಾಖಲೆಗಳು ಸೃಷ್ಟಿಯಾಗುತ್ತಿದೆ. ಇದಾಗ್ಯೂ ಕ್ರಿಕೆಟ್​ ಇತಿಹಾಸದ ಕೆಲವೊಂದು ದಾಖಲೆಗಳು ಹಾಗೆಯೇ ಉಳಿದಿವೆ. ಈ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ ಎನ್ನಲಾಗುತ್ತದೆ. ಅಂತಹ ಕೆಲ ಅಪರೂಪದ ವಿಶ್ವ ದಾಖಲೆಗಳ ಮಾಹಿತಿ ಈ ಕೆಳಗಿನಂತಿವೆ.

ಏಕದಿನ ಬೌಲಿಂಗ್ ದಾಖಲೆ: ಏಕದಿನ ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್​ನ ಫಿಲ್ ಸಿಮನ್ಸ್ ನಿರ್ಮಿಸಿದ ವಿಶ್ವ ದಾಖಲೆಯೊಂದು ದಶಕಗಳು ಕಳೆದರೂ ಹಾಗೆಯೇ ಉಳಿದಿದೆ. ಹೌದು, 1992 ರಲ್ಲಿ ಸಿಮನ್ಸ್ ಪಾಕಿಸ್ತಾನ್​ ವಿರುದ್ದದ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಿದ್ದರು. ವಿಶೇಷ ಎಂದರೆ ಈ ವೇಳೆ ನೀಡಿದ್ದು ಕೇವಲ 3 ರನ್​ ಮಾತ್ರ. ಇನ್ನು ಪಡೆದಿದ್ದು 4 ವಿಕೆಟ್​ಗಳನ್ನು. ಅಂದರೆ ಒಟ್ಟು 10 ಓವರ್​ಗಳಲ್ಲಿ ಫಿಲ್ ಸಿಮನ್ಸ್ 8 ಓವರ್​ ಮೇಡನ್ ಮಾಡಿದ್ದರು ಎಂದರೆ ನಂಬಲೇಬೇಕು. ಈ ದಾಖಲೆಯನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂಬ ಮಾತಿದೆ.

ಹಿರಿಯ ಟೆಸ್ಟ್ ಕ್ರಿಕೆಟಿಗ: ಯಾವುದೇ ಆಟಗಾರನ ವೃತ್ತಿಜೀವನವು 40 ರ ಅಸುಪಾಸಿನಲ್ಲಿ ಮುಕ್ತಾಯವಾಗುತ್ತದೆ. 41 ಅಥವಾ 42 ವರ್ಷ ವಯಸ್ಸಿನವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದು ಕನಸಿನ ಮಾತು. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ ಪರ 52 ವರ್ಷದ ಆಟಗಾರರೊಬ್ಬರು ಬ್ಯಾಟ್​ ಬೀಸಿದ್ದರು ಎಂದರೆ ನಂಬಲೇಬೇಕು. ಹೌದು, ವಿಲ್ಫ್ರೆಡ್ ರೋಡ್ಸ್ ಅವರು 52 ವರ್ಷ ಮತ್ತು 165 ದಿನಗಳ ವಯಸ್ಸಿನಲ್ಲಿ ಇಂಗ್ಲೆಂಡ್ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇಂಗ್ಲೆಂಡ್‌ನ ದಿಗ್ಗಜ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿರುವ ವಿಲ್ಫ್ರೆಡ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4204 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಇದನ್ನೂ ಓದಿ
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

ಅತೀ ಹೆಚ್ಚು ವಿಕೆಟ್: ಚಮಿಂಡ ವಾಸ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 8 ವಿಕೆಟ್ ಪಡೆದ ವಿಶ್ವದ ಏಕೈಕ ಬೌಲರ್ ಎಂಬ ದಾಖಲೆ ವಾಸ್ ಹೆಸರಿನಲ್ಲಿದೆ. 2001 ರಲ್ಲಿ ಜಿಂಬಾಬ್ವೆ ವಿರುದ್ಧ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಾಧನೆ ಕೂಡ ಸೇರಿತ್ತು. ಈ ದಾಖಲೆಯನ್ನು ಮುರಿಯುವ ಅವಕಾಶವಿದ್ದರೂ, ಕಳೆದ ಎರಡು ದಶಕಗಳಿಂದ ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.

ಕಡಿಮೆ ಅವಧಿಯ ಟೆಸ್ಟ್​ ಪಂದ್ಯ: ಟೆಸ್ಟ್ ಪಂದ್ಯವನ್ನು ಗರಿಷ್ಠ 5 ದಿನಗಳವರೆಗೆ ಆಡಲಾಗುತ್ತದೆ. ಆದರೆ ಕೇವಲ 5 ಗಂಟೆಯಲ್ಲೇ ಒಂದು ಟೆಸ್ಟ್ ಪಂದ್ಯ ಮುಗಿದಿತ್ತು ಎಂದರೆ ಅಚ್ಚರಿಪಡಲೇಬೇಕು. 1932 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಪಂದ್ಯವಾಗಿದೆ. ಈ ಪಂದ್ಯ ಕೇವಲ 5 ಗಂಟೆ 53 ನಿಮಿಷಗಳಲ್ಲಿ ಮುಗಿದಿತ್ತು. ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 36 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 45 ರನ್ ಗಳಿಸಿತು. ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್ ಗಳಿಸಿತು. ಅಲ್ಲದೆ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 72 ರನ್‌ಗಳಿಂದ ಗೆದ್ದುಕೊಂಡಿದ್ದು ಇತಿಹಾಸ.