Babar Azam: ವಿರಾಟ್ ಕೊಹ್ಲಿಯ ವಿಶ್ವದಾಖಲೆ ಮುರಿದ ಬಾಬರ್ ಅಜಾಮ್: ಈ ಸಾಧನೆ ಮಾಡಿದ ಮೊದಲ ಬ್ಯಾಟರ್

| Updated By: Vinay Bhat

Updated on: Jun 09, 2022 | 10:36 AM

PAK vs WI, 1st ODI: ಬಾಬರ್ ಅಜಾಮ್ ಕೇವಲ 107 ಎಸೆತಗಳಲ್ಲಿ 103 ರನ್ ಕಲೆಹಾಕಿದರು. ಈ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಮೂರು ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

Babar Azam: ವಿರಾಟ್ ಕೊಹ್ಲಿಯ ವಿಶ್ವದಾಖಲೆ ಮುರಿದ ಬಾಬರ್ ಅಜಾಮ್: ಈ ಸಾಧನೆ ಮಾಡಿದ ಮೊದಲ ಬ್ಯಾಟರ್
Babar Azam and Virat Kohli
Follow us on

ಪಾಕಿಸ್ತಾನ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ (Pakistan vs West Indies) ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಮುಲ್ತಾನ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. 300ಕ್ಕೂ ಅಧಿಕ ರನ್​​ಗಳ ಟಾರ್ಗೆಟ್ ಇದ್ದರೂ ಪಾಕಿಸ್ತಾನ ನಾಯಕ ಬಾಬರ್ ಅಜಾಮ್ (Babar Azam) ಅವರ ಆಕರ್ಷಕ ಶತಕ ಹಾಗೂ ಅಂತಿಮ ಹಂತದಲ್ಲಿ ಖುಷ್​ದಿಲ್ ಶಾ (Khushdil Shah) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಾಕ್ 49.2 ಓವರ್​ನಲ್ಲಿ ಗೆಲುವಿನ ನಗೆ ಬೀರಿತು. ಬಾಬರ್ ಕೇವಲ 107 ಎಸೆತಗಳಲ್ಲಿ 103 ರನ್ ಕಲೆಹಾಕಿದರು. ಈ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಮೂರು ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಬಾಬರ್ ತಮ್ಮ ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 114 ರನ್ ಹಾಗೂ ಅಜೇಯ 105 ರನ್ ಗಳಿಸಿದ್ದರು. ಇದೀಗ ವಿಂಡೀಸ್ ವಿರುದ್ಧವೂ ಶತಕ ಬಾರಿಸಿದ್ದಾರೆ.

ಬಾಬರ್ ಏಕದಿನ ಕ್ರಿಕೆಟ್​ನಲ್ಲಿ ಸತತವಾಗಿ ಮೂರು ಶತಕ ಗಳಿಸಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೇ 120, 123 ಮತ್ತು 117 ರನ್ ಗಳಿಸಿದ್ದರು. ಈ ಮೂಲಕ ಎರಡು ಬಾರಿ ಸತತವಾಗಿ ಮೂರು ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಬಾಬರ್ ಅಜಾಮ್ ಆಗಿದ್ದಾರೆ. 87 ಏಕದಿನ ಪಂದ್ಯಗಳಲ್ಲಿ ಇದು ಇವರ 17ನೇ ಏಕದಿನ ಶತಕವಾಗಿದೆ. ಇದರ ಜೊತೆಗೆ ಅತ್ಯಂತ ವೇಗವಾಗಿ 1,000 ರನ್ ಪೂರೈಸಿದ ನಾಯಕನಾಗಿದ್ದಾರೆ. 13 ಪಂದ್ಯಗಳಲ್ಲಿ ಬಾಬರ್ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ 17 ಪಂದ್ಯಗಳಲ್ಲಿ 1,000 ರನ್ ಪೂರೈಸಿದ್ದರು. ಈ ಮೂಲಕ ವಿರಾಟ್ ದಾಖಲೆಯನ್ನೂ ಅಳಿಸಿ ಹಾಕಿದ್ದಾರೆ.

IND vs SA: ದ್ರಾವಿಡ್​ಗೆ ತಲೆನೋವಾದ ರಾಹುಲ್ ಅಲಭ್ಯತೆ: ಪ್ಲೇಯಿಂಗ್ XI ನಲ್ಲಿ ದೊಡ್ಡ ಬದಲಾವಣೆ

ಇದನ್ನೂ ಓದಿ
IND vs SA: ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ: ಯಂಗ್ ಇಂಡಿಯಾ ಮೇಲೆ ಎಲ್ಲರ ಕಣ್ಣು
ಸೌತ್​ ಆಫ್ರಿಕಾ ಸರಣಿಯಿಂದ ಕೊನೇ ಕ್ಷಣದಲ್ಲಿ ಹೊರ ನಡೆದ ಕನ್ನಡಿಗ ರಾಹುಲ್​; ಪಂತ್​ಗೆ ನಾಯಕತ್ವ
IND vs SA: ಡಿಕೆ, ಪಾಂಡ್ಯ ರಿ ಎಂಟ್ರಿ: ಹೇಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
Ranji Trophy 2022: ಕೈಕೊಟ್ಟ ಬ್ಯಾಟ್ಸ್​ಮನ್​ಗಳು: ರಣಜಿ ಟೂರ್ನಿಯಿಂದ ಕರ್ನಾಟಕ ತಂಡ ಔಟ್

ಈ ಏಕದಿನ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿತು. ಆರಂಭಿಕ ಆಟಗಾರ ಶಾಯ್ ಹೋಪ್ (127 ರನ್) ಅವರ ಭರ್ಜರಿ ಶತಕ ಹಾಗೂ ಶಮ್ರಾ ಬ್ರೂಕ್ (70 ರನ್) ಅವರ ಅರ್ಧ ಶತಕದ ನೆರವಿನಿಂದ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡ ವೆಸ್ಟ್ ಇಂಡೀಸ್ 305 ರನ್‌ಗಳಿಸಿತು. ಪಾಕ್ ಪರ ಹ್ಯಾರಿಸ್ ರೌಫ್ ದುಬಾರಿಯಾದರೂ 4 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಮೊದಲ ವಿಕೆಟ್ ಶೀಘ್ರವಾಗಿ ಕಳೆದುಕೊಂಡರೂ ಎರಡನೇ ವಿಕೆಟ್‌ಗೆ ಇಮಾಮ್ ಉಲ್ ಹಕ್ ಹಾಗೂ ಬಾಬರ್ ಅಜಾಮ್ ಶತಕದ ಜೊತೆಯಾಟವಾಡಿದರು. ಇಮಾಮ್ 71 ಎಸೆತಗಳಲ್ಲಿ 65 ರನ್ ಗಳಿಸಿದರು. ನಂತರ ಬಂದ ಮೊಹಮ್ಮದ್ ರಿಜ್ವಾನ್ (59 ರನ್) ಕೂಡ ಅರ್ಧ ಶತಕ ಸಿಡಿಸಿ ಬಾಬರ್ ಜೊತೆ ಉತ್ತಮ ಜೊತೆಯಾಟ ಆಡಿದರು.

ಬಾಬರ್ ಶತಕ ಸಿಡಿಸಿ ಔಟಾದ ಬಳಿಕ ಬಳಿಕ ಅಂತಿಮ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದ ಖುಷ್​ದಿಲ್ ಶಾ ಸ್ಪೋಟಕ ಆಟ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನೂ ನಾಲ್ಕು ಎಸೆತಗಳು ಬಾಕಿಯಿರುವಂತೆ ಪಾಕಿಸ್ತಾನ ಈ ಪಂದ್ಯದಲ್ಲಿ ಗೆಲುವು ಸಾಧಿಸಿತು. ಖುಷ್​ದಿಲ್ ಕೇವಲ 23 ಎಸೆತಗಳಲ್ಲಿ  1 ಫೋರ್, 4 ಸಿಕ್ಸರ್ ಸಿಡಿಸಿ ಅಜೇಯ 41 ರನ್ ಚಚ್ಚಿದರು. ವೆಸ್ಟ್ ಇಂಡೀಸ್ ಪರ ಅಲ್ಜೆರಿ ಜೋಸೆಫ್ 2 ವಿಕೆಟ್ ಪಡೆದರು. 5 ವಿಕೆಟ್​ಗಳ ಜಯದೊಂದಿಗೆ ಪಾಕಿಸ್ತಾನ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.