ಯುಎಸ್ಎನಲ್ಲಿ ನಡೆದ ಸಿನ್ಸನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಚ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ವಿಂಬಲ್ಡನ್ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ಗೆ ಸೋಲುಣಿಸಿ ಸರ್ಬಿಯಾ ಟೆನಿಸ್ ತಾರೆ ಈ ಸಾಧನೆ ಮಾಡಿದರು.
ವಿಂಬಲ್ಡನ್ ಟೂರ್ನಿಯಲ್ಲಿ ಜೊಕೊವಿಚ್ಗೆ ಸೋಲುಣಿಸಿ ಅಲ್ಕರಾಝ್ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇದೇ ಕಾರಣದಿಂದಾಗಿ ಸಿನ್ಸನಾಟಿ ಓಪನ್ ಫೈನಲ್ ಪಂದ್ಯವು ಎಲ್ಲಾ ಕುತೂಹಲಕ್ಕೆ ಕಾರಣವಾಗಿತ್ತು.
ಈ ಕೌತುಕದೊಂದಿಗೆ ಶುರುವಾದ ಫೈನಲ್ ಪಂದ್ಯದ ಮೊದಲ ಸುತ್ತಿನಲ್ಲಿ ರೋಚಕ ಪೈಪೋಟಿ ಕಂಡು ಬಂತು. ಇದಾಗ್ಯೂ 7-5 ಅಂತರದಿಂದ ಜಯ ಸಾಧಿಸಿದ ಅಲ್ಕರಾಝ್ ಮುನ್ನಡೆ ಕಾಯ್ದುಕೊಂಡರು.
ಆದರೆ 2ನೇ ಸುತ್ತಿನಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ ನೊವಾಕ್ ಜೊಕೊವಿಚ್ 7-6 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪಂದ್ಯವು ಮೂರನೇ ಸುತ್ತಿನತ್ತ ಸಾಗಿತು. ಅಂತಿಮ ಸುತ್ತು ಕೂಡ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು.
3 ಗಂಟೆ ಮತ್ತು 49 ನಿಮಿಷಗಳವರೆಗೆ ಸಾಗಿದ ಪಂದ್ಯದಲ್ಲಿ ಅಂತಿಮ ಸುತ್ತನ್ನು ನೊವಾಕ್ ಜೊಕೊವಿಚ್ 7-6 ಅಂತರದಿಂದ ಗೆದ್ದುಕೊಂಡರು. ಈ ಮೂಲಕ ಸಿನ್ಸನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಇದನ್ನೂ ಓದಿ: Wimbledon 2023 Final: ಜೊಕೊವಿಚ್ಗೆ ಸೋಲುಣಿಸಿ ವಿಂಬಲ್ಡನ್ ಕಿರೀಟ ಗೆದ್ದ ಅಲ್ಕರಾಝ್
ವಿಂಬಲ್ಡನ್ ಟೂರ್ನಿಯಲ್ಲಿ 20 ರ ಹರೆಯದ ಕಾರ್ಲೊಸ್ ಅಲ್ಕರಾಝ್ ವಿರುದ್ಧ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿದ್ದ ನೊವಾಕ್ ಜೊಕೊವಿಚ್ ಈ ಬಾರಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಈ ಗೆಲುವಿನ ಬೆನ್ನಲ್ಲೇ ತಮ್ಮ ಶರ್ಟ್ ಅನ್ನು ಹರಿದು ಹಾಕುವ ಮೂಲಕ ವಿಚಿತ್ರವಾಗಿ ಸಂಭ್ರಮಿಸಿದರು.
WHAT. A. VIDEO.
23 Majors, most weeks at #1, most Masters 1000s ever,
AND LOOK WHAT IT MEANS!
Djokovic, Novak, 36 years-old. pic.twitter.com/jDgZn1pRwH
— Olly 🎾🇬🇧 (@Olly_Tennis_) August 21, 2023
Amazing how much it means to Carlos Alcaraz.
At 20, he’s been YE#1 and won 2 majors. Could *easily* not be devastated by the loss.
Here he is, in a mixture of exhaustion, sadness and disbelief, before noticing the crowd and producing a beaming smile 😃 pic.twitter.com/vb2itsT133
— Olly 🎾🇬🇧 (@Olly_Tennis_) August 21, 2023
ಮತ್ತೊಂದೆಡೆ ಸೋಲಿನ ನೋವಲ್ಲಿ ಕಾರ್ಲೊಸ್ ಅಲ್ಕರಾಝ್ ಕಣ್ಣೀರು ಹಾಕುತ್ತಿರುವುದು ಕಂಡು ಬಂತು. ಒಟ್ಟಿನಲ್ಲಿ ಅಂಗಳದಲ್ಲಿ ಇದೀಗ ರಣರೋಚಕ ಕಾದಾಟದೊಂದಿಗೆ ಅಲ್ಕರಾಝ್ ಹಾಗೂ ಜೊಕೊವಿಚ್ ಟೆನಿಸ್ ಪ್ರಿಯರಿಗೆ ಮನರಂಜನೆಯ ರಸದೌತಣ ಒದಗಿಸುತ್ತಿದ್ದಾರೆ.