Asian Games Football: ಏಷ್ಯನ್ ಗೇಮ್ಸ್​ಗೆ ಭಾರತ ಫುಟ್ಬಾಲ್ ತಂಡ ಪ್ರಕಟ; ಸುನಿಲ್ ಛೆಟ್ರಿಗೆ ತಂಡದಲ್ಲಿ ಸ್ಥಾನ..!

Asian Games Football: ಸೆಪ್ಟಂಬರ್ 23ರಿಂದ ಆರಂಭವಾಗಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ 22 ಸದಸ್ಯರ ಫುಟ್ಬಾಲ್ ತಂಡವನ್ನು ಪ್ರಕಟಿಸಿದೆ.

Important Highlight‌
Asian Games Football: ಏಷ್ಯನ್ ಗೇಮ್ಸ್​ಗೆ ಭಾರತ ಫುಟ್ಬಾಲ್ ತಂಡ ಪ್ರಕಟ; ಸುನಿಲ್ ಛೆಟ್ರಿಗೆ ತಂಡದಲ್ಲಿ ಸ್ಥಾನ..!
ಭಾರತ ಫುಟ್ಬಾಲ್ ತಂಡ
Follow us
ಪೃಥ್ವಿಶಂಕರ
|

Updated on:Aug 02, 2023 | 12:18 PM

ಸೆಪ್ಟಂಬರ್ 23ರಿಂದ ಆರಂಭವಾಗಲಿರುವ ಏಷ್ಯನ್ ಕ್ರೀಡಾಕೂಟಕ್ಕೆ (Asian Games 2023) ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ 22 ಸದಸ್ಯರ ಫುಟ್ಬಾಲ್ ತಂಡವನ್ನು ಪ್ರಕಟಿಸಿದೆ. ಹಿರಿಯ ಆಟಗಾರರಾದ ಸುನಿಲ್ ಛೆಟ್ರಿ, ಸಂದೇಶ್ ಜಿಂಗನ್ ಮತ್ತು ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು (Sunil Chhetri, Sandesh Jhingan and Goalkeeper Gurpreet Singh Sandhu) ಅವರು ಕ್ರೀಡಾಕೂಟಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದು, ಫುಟ್ಬಾಲ್ ಅಭಿಮಾನಿಗಳ ಆತಂಕಕ್ಕೆ ತೆರೆ ಬಿದ್ದಿದೆ. ವಾಸ್ತವವಾಗಿ ಪಂದ್ಯಾವಳಿಯ ನಿಯಮಗಳ ಪ್ರಕಾರ, 23 ವರ್ಷದೊಳಗಿನ ಆಟಗಾರರು ಈ ಕ್ರೀಡಾಕೂಟದಲ್ಲಿ ಆಡಲು ಅರ್ಹರು. ಹೀಗಾಗಿ ಆರಂಭದಲ್ಲಿ ಈ ಮೂವರ ಹೆಸರನ್ನು ಪಂದ್ಯಾವಳಿಗೆ ಆಯ್ಕೆ ಮಾಡಿರಲಿಲ್ಲ. ಅಲ್ಲದೆ ಈ ಮೂವರನ್ನೂ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲು ಅವಕಾಶ ನೀಡಬೇಕೆಂದು ಅನುಮತಿ ಪತ್ರಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದರು. ಇದೀಗ 23 ವರ್ಷ ಮೀರಿದ ಮೂರು ಫುಟ್ಬಾಲ್ ಆಟಗಾರರನ್ನು ತಂಡದಲ್ಲಿ ಇರಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ 23 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಸುನಿಲ್ ಛೆಟ್ರಿ, ಸಂದೇಶ್ ಜಿಂಗನ್ ಮತ್ತು ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಭಾರತ ಫುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನ

ವಾಸ್ತವವಾಗಿ ಈ ಹಿಂದೆ, ಟೀಂ ಇಂಡಿಯಾ ಈ ಈವೆಂಟ್‌ಗೆ ಅರ್ಹತೆ ಪಡೆದಿರಲಿಲ್ಲ. ಆದರೆ ಮುಖ್ಯ ಕೋಚ್ ಸ್ಟಿಮ್ಯಾಕ್ ಸೇರಿದಂತೆ ಹಲವರ ವಿನಂತಿಗಳ ನಂತರ, ಭಾರತ ಸರ್ಕಾರವು ಪುರುಷರ ಮತ್ತು ಮಹಿಳಾ ತಂಡಕ್ಕೆ ಕ್ರೀಡಾಕೂಟಕ್ಕೆ ಭಾಗವಹಿಸಲು ಸಾಧ್ಯವಾಗುವಂತೆ ನಿಯಮಗಳನ್ನು ಬದಲಿಸಿತ್ತು. ಹೀಗಾಗಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಫುಟ್ಬಾಲ್ ಇವೆಂಟ್‌ನಲ್ಲಿ ಟೀಮ್ ಇಂಡಿಯಾ ಭಾಗವಹಿಸುತ್ತಿದೆ. ಆದಾಗ್ಯೂ, ತಂಡವು ಹೊಸದಿಲ್ಲಿ 1951 ಮತ್ತು ಜಕಾರ್ತ 1962 ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕವನ್ನು ಗೆದ್ದಿದೆ. 1970 ರಲ್ಲಿ, ಬ್ಯಾಂಕಾಕ್ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಸಹ ಗೆದ್ದುಕೊಂಡಿತು. ಭಾರತ ಪುರುಷರ ಫುಟ್ಬಾಲ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವುದು ಇದು 16ನೇ ಬಾರಿ.

Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಫುಟ್ಬಾಲ್ ತಂಡ; ಗ್ರೀನ್ ಸಿಗ್ನಲ್ ನೀಡಿದ ಕ್ರೀಡಾ ಸಚಿವಾಲಯ

ಎ ಗುಂಪಿನಲ್ಲಿ ಭಾರತ

ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 23 ಪುರುಷ ಫುಟ್ಬಾಲ್ ತಂಡಗಳು ಭಾಗವಹಿಸಲಿವೆ. ಈ 23 ತಂಡಗಳನ್ನು ಆರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಐದು ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳನ್ನು ಇರಿಸಲಾಗಿದ್ದು, ಒಂದು ಗುಂಪಿನಲ್ಲಿ ಮಾತ್ರ ಮೂರು ತಂಡಗಳಿವೆ. ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆತಿಥೇಯ ಚೀನಾ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕೂಡ ಇದೇ ಗುಂಪಿನಲ್ಲಿವೆ.

ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತ ಪುರುಷರ ಫುಟ್ಬಾಲ್ ತಂಡ:

ಗೋಲ್‌ಕೀಪರ್- ಗುರುಪ್ರೀತ್ ಸಿಂಗ್ ಸಂಧು, ಗುರ್ಮೀತ್ ಸಿಂಗ್, ಧೀರಜ್ ಸಿಂಗ್,

ಡಿಫೆಂಡರ್ಸ್- ಸಂದೇಶ್ ಜಿಂಗನ್, ಅನ್ವರ್ ಅಲಿ, ನರೇಂದ್ರ ಗೆಹ್ಲೋಟ್, ಲಾಲ್ಚುಂಗ್‌ನುಂಗಾ, ಆಕಾಶ್ ಮಿಶ್ರಾ, ರೋಷನ್ ಸಿಂಗ್, ಆಶಿಶ್ ರೈ,

ಮಿಡ್‌ಫೀಲ್ಡರ್ಸ್- ಜಾಕ್ಸನ್ ಸಿಂಗ್, ಸುರೇಶ್ ಸಿಂಗ್ , ಅಪುಯಾ ರಾಲ್ಟೆ, ಅಮರ್ಜೀತ್ ಸಿಂಗ್, ರಾಹುಲ್ ಕೆಪಿ, ನೌರೆಮ್ ಮಹೇಶ್,

ಫಾರ್ವರ್ಡ್- ಶಿವ ಶಕ್ತಿ ನಾರಾಯಣ್, ರಹೀಮ್ ಅಲಿ, ಅನಿಕೇತ್ ಯಾದವ್, ವಿಕ್ರಮ್ ಪ್ರತಾಪ್ ಸಿಂಗ್, ರೋಹಿತ್ ದಾನು, ಸುನಿಲ್ ಛೆಟ್ರಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Wed, 2 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು