ಅಧಿಕ ಮಾಸದಲ್ಲಿ ಬರುವ ಪರಮ/ಪುರುಷೋತ್ತಮ ಏಕಾದಶಿಯ ಪೂಜಾ ಸಮಯ? ಆಚರಣೆಗಳ ಬಗ್ಗೆ ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 11, 2023 | 5:10 AM

3 ವರ್ಷಕ್ಕೊಮ್ಮೆ ಬರುವ ಈ ದಿನದಂದು ವಿಷ್ಣುವನ್ನು ಆರಾಧನೆ ಮಾಡುವ ಮೂಲಕ, ವ್ರತಾಚರಣೆಗಳನ್ನು ಕೈಗೊಳ್ಳುವುದರಿಂದ ಕುಬೇರನ ಅನುಗ್ರಹವಾಗುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಹಿಂದೆ ಮಾಡಿದ ಪಾಪಕರ್ಮಗಳಿಂದ ಮುಕ್ತಿ ಸಿಕ್ಕಿ ಪುಣ್ಯಫಲ ಪ್ರಾಪ್ತಿಯಾಗುತ್ತದೆ.

ಅಧಿಕ ಮಾಸದಲ್ಲಿ ಬರುವ ಪರಮ/ಪುರುಷೋತ್ತಮ ಏಕಾದಶಿಯ ಪೂಜಾ ಸಮಯ? ಆಚರಣೆಗಳ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಅಧಿಕ ಮಾಸದಲ್ಲಿ ಬರುವ ಏಕಾದಶಿಯನ್ನು ಪರಮ/ಪುರುಷೋತ್ತಮ ಅಥವಾ ಕಮಲ ಏಕಾದಶಿ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಏಕಾದಶಿಯಂದು ಕೃಷ್ಣನನ್ನು ಆರಾಧಿಸುವುದು ರೂಢಿ. ಅಂತೆಯೇ 3 ವರ್ಷಕ್ಕೊಮ್ಮೆ ಬರುವ ಈ ದಿನದಂದು ವಿಷ್ಣುವನ್ನು ಆರಾಧನೆ ಮಾಡುವ ಮೂಲಕ, ವ್ರತಾಚರಣೆಗಳನ್ನು ಕೈಗೊಳ್ಳುವುದರಿಂದ ಕುಬೇರನ ಅನುಗ್ರಹವಾಗುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಹಿಂದೆ ಮಾಡಿದ ಪಾಪಕರ್ಮಗಳಿಂದ ಮುಕ್ತಿ ಸಿಕ್ಕಿ ಪುಣ್ಯಫಲ ಪ್ರಾಪ್ತಿಯಾಗುತ್ತದೆ.

ಪುರುಷೋತ್ತಮ ಏಕಾದಶಿಯ ಪೂಜಾ ಸಮಯ ಮತ್ತು ಆಚರಣೆ ಹೇಗೆ?

ಅಧಿಕ ಶ್ರಾವಣ ಮಾಸದ ಕೃಷ್ಣ ಪಕ್ಷದ ಪುರುಷೋತ್ತಮ ಏಕಾದಶಿ ಆಗಸ್ಟ್ 11 ರಂದು ಬೆಳಿಗ್ಗೆ 5 ಗಂಟೆಗೆ ಆರಂಭವಾಗಿ 12 ರ ಬೆಳಿಗ್ಗೆ 6 ಗಂಟೆಗೆ ಕೊನೆಗೊಳ್ಳಲಿದೆ. ಆದರೆ ಆಚರಣೆ ಮಾತ್ರ 12 ರಂದು ಮಾಡಬೇಕಾಗುತ್ತದೆ. ಆ ದಿನದ ಪೂಜಾ ಸಮಯ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ 9 ಗಂಟೆಗೆ ಮುಕ್ತಾಯವಾಗಲಿದೆ. ಹಾಗಾಗಿ ಆ ಸಮಯದೊಳಗೆ ಪೂಜೆ ಮಾಡಿ, ಅದೇ ದಿನ ಉಪವಾಸವನ್ನು ಮಾಡ ಬೇಕಾಗುತ್ತದೆ. ಬಳಿಕ ಆ ದಿನ ಸಂಜೆ ಅಥವಾ ಮರುದಿನ ಬೆಳಿಗ್ಗೆ ಅಂದರೆ ಭಾನುವಾರ ಉಪವಾಸವನ್ನು ಮುಕ್ತಾಯ ಮಾಡಬಹುದು. ಉಪವಾಸ ಮಾಡಲು ಸಾಧ್ಯವಾಗದಿದ್ದವರು ವಿಷ್ಣು ಪೂಜೆ ಮಾಡುವ ಮೂಲಕ ಅಥವಾ ದೇವಸ್ಥಾನಕ್ಕೆ ಹೋಗಿ ಬರುವ ಮೂಲಕ ಈ ವ್ರತಾಚರಣೆ ಮಾಡಬಹುದು. ಜೊತೆಗೆ ವಿಷ್ಣುವಿಗೆ ಪ್ರಿಯವಾದ ತುಳಸಿ ಅರ್ಚನೆ ಅಥವಾ ತುಳಸಿ ಸಮರ್ಪಣೆ ಮಾಡುವುದರಿಂದ ಅಧಿಕ ಪುಣ್ಯ ಪ್ರಾಪ್ತಿಯಾಗುವುದರ ಜೊತೆಗೆ ವಿಷ್ಣುವಿನ ಶ್ರೀರಕ್ಷೆ ಲಭಿಸುತ್ತದೆ.

ಇದನ್ನೂ ಓದಿ: ಅಧಿಕ ಶ್ರಾವಣ ಮಾಸದಲ್ಲಿ ಸೋಮವಾರದ ವ್ರತಾಚರಣೆಯ ಫಲಗಳೇನು? ಯಾವ ಮಂತ್ರವನ್ನು ಪಠಿಸಬೇಕು?

ಯಾವ ಮಂತ್ರ ಪಠಿಸಬೇಕು?

ಈ ದಿನ ವಿಷ್ಣು ಸಹಸ್ರನಾಮ ಓದುವುದರಿಂದ ಅಥವಾ ಕೇಳುವುದರಿಂದ ಉತ್ತಮ ಫಲ ಪ್ರಾಪ್ತಿಯಾಗುತ್ತದೆ. ಅಥವಾ ನೀವು ಓಂ ನಮೋ ಭಗವತೇ ವಾಸುದೇವಾಯ ಎಂಬ ಮಂತ್ರವನ್ನು ೧೦೮ ಬಾರಿ ಜಪಿಸುವುದರಿಂದ ಕೂಡ ಪುಣ್ಯ ಲಭಿಸುತ್ತದೆ. ಅಥವಾ ಓಂ ನಮೋ ನಾರಾಯಣಾಯ ನಮಃ ಎಂಬ ಮಂತ್ರ ಪಠಿಸುವುದರಿಂದಲೂ ಶುಭ ಫಲ ದೊರೆಯುತ್ತದೆ.

ಏನನ್ನು ಮಾಡಬಾರದು?

ಮನೆಯಲ್ಲಿ ಮಾಂಸಹಾರ ಸೇವನೆ ಮಾಡಬಾರದು, ಉಪವಾಸ ಆರಂಭ ಮಾಡಿ ಅರ್ಧಕ್ಕೆ ಮೊಟಕುಗೊಳಿಸಬಾರದು. ಜೊತೆಗೆ ವಿಷ್ಣುವಿಗೆ ತುಳಸಿ ಹಾಕದೇ ಪೂಜೆ ಮಾಡಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ