ಈ ಐದು ಸಂಗತಿಗಳು ಕಂಡುಬಂದರೆ ಜೀವನ ಕೊನೆಯ ಘಳಿಗೆಯಲ್ಲಿದೆ ಎಂದರ್ಥ- ಗರುಡ ಪುರಾಣ

Garuda Purana: ಯಾವುದೇ ವ್ಯಕ್ತಿ ತನ್ನ ಜೀವನದ ಕೊನೆಯ ಕ್ಷಣಗಳಲ್ಲಿ ಭಯಾನಕ ಕಪ್ಪು ಮನುಷ್ಯನನ್ನು ನೋಡುತ್ತಾನೆ. ಅವನು ವಾಸ್ತವವಾಗಿ ಯಮ. ಯಮಧರ್ಮರಾಜ ವ್ಯಕ್ತಿಯ ಆತ್ಮವನ್ನು ತನ್ನೊಂದಿಗೆ ತೆಗೆದುಕೊಳ್ಳಲು ಬಂದಿದ್ದಾನೆ ಎಂದು ಭಾವಿಸಬೇಕು.

Important Highlight‌
ಈ ಐದು ಸಂಗತಿಗಳು ಕಂಡುಬಂದರೆ ಜೀವನ ಕೊನೆಯ ಘಳಿಗೆಯಲ್ಲಿದೆ ಎಂದರ್ಥ- ಗರುಡ ಪುರಾಣ
ಗರುಡ ಪುರಾಣ
Follow us
ಸಾಧು ಶ್ರೀನಾಥ್​
|

Updated on: Aug 05, 2023 | 2:52 PM

ಗರುಡ ಪುರಾಣವು ವ್ಯಕ್ತಿಯು ತನ್ನ ಜೀವನದ ಅಂತ್ಯವನ್ನು ಅಂದರೆ ಮರಣವನ್ನು ತಲುಪಿದಾಗ ನಿಖರವಾಗಿ ಏನನ್ನು ಅರಿತುಕೊಳ್ಳುತ್ತಾನೆ ಎಂಬುದರ ಕುರಿತು ವಿವರಗಳನ್ನು ನೀಡುತ್ತದೆ. ಒಬ್ಬ ವ್ಯಕ್ತಿಯ ಜೀವನದ ಕೊನೆಯ ಕ್ಷಣಗಳು (Death) ಹೇಗೆ ತೆರೆದುಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. ಹುಟ್ಟು ಸಾವು ಮೊದಲೇ ಗೊತ್ತಾಗುವುದಿಲ್ಲ. ಮನುಷ್ಯ ಇವರೆಡರ ಮೇಲೂ ಮೇಲುಗೈ ಸಾಧಿಸಲು ಸಾಧ್ಯವೇ ಇಲ್ಲ. ಹುಟ್ಟುವ ಪ್ರತಿಯೊಂದು ಜೀವಿಗೂ ಸಾವು ಅನಿವಾರ್ಯ.. ಸಾವಿನಿಂದ ಯಾರೂ ಪಾರಾಗಲು ಸಾಧ್ಯವಿಲ್ಲ ಎಂಬುದು ಬೆಲೆ ಕಟ್ಟಲಾಗದ ಸತ್ಯ. ಜನನ ಮತ್ತು ಮರಣದ ಚಕ್ರದ ಬಗ್ಗೆ ಗರುಡ ಪುರಾಣದಲ್ಲಿ (Garuda Purana) ಅನೇಕ ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ (spiritual).

ಗರುಡ ಪುರಾಣವು ವ್ಯಕ್ತಿಯು ತನ್ನ ಜೀವನದ ಅಂತ್ಯವನ್ನು ತಲುಪಿದಾಗ ಅಂದರೆ ಅವನು ಸಾವಿನ ಅಂಚಿನಲ್ಲಿರುವಾಗ ನಿಖರವಾಗಿ ಏನನ್ನು ಅರಿತುಕೊಳ್ಳುತ್ತಾನೆ ಎಂಬುದರ ಕುರಿತು ವಿವರಗಳನ್ನು ನೀಡುತ್ತದೆ. ಒಬ್ಬ ವ್ಯಕ್ತಿಯ ಜೀವನದ ಕೊನೆಯ ಕ್ಷಣಗಳು ಹೇಗೆ ತೆರೆದುಕೊಳ್ಳುತ್ತವೆ ಎಂಬುದನ್ನು ಕಂಡುಕೊಳ್ಳೋಣ.

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಕೊನೆಯ ಉಸಿರನ್ನು ತೆಗೆದುಕೊಂಡಾಗ, ಅವನು ತನ್ನ ಸುತ್ತಲಿನ ಪೂರ್ವಜರನ್ನು ನೋಡಲು ಪ್ರಾರಂಭಿಸುತ್ತಾನೆ. ಅವನು ಜಗತ್ತನ್ನು ತೊರೆದವರ ಆತ್ಮಗಳನ್ನು ನೋಡುತ್ತಾನೆ. ಆಗ ಅವನ ಜನರು ಅವನನ್ನು ಕರೆಯುತ್ತಿದ್ದಾರೆ ಎಂದು ಅವನಿಗೆ ಅನಿಸುತ್ತದೆ. ಸಾವಿನ ಸಮೀಪದಲ್ಲಿರುವವರು ಮಾತ್ರ ತಮ್ಮ ಪೂರ್ವಜರನ್ನು ನೋಡಬಹುದು ಎಂದು ನಂಬಲಾಗಿದೆ. ಅಷ್ಟೇ ಅಲ್ಲ.. ಸಾವಿನ ಅಂಚಿನಲ್ಲಿರುವ ವ್ಯಕ್ತಿಯ ಮೂಲಕ ಪೂರ್ವಜರು ತಮ್ಮ ಕೊನೆಯ ಆಸೆಯನ್ನು ಕುಟುಂಬಕ್ಕೆ ತಿಳಿಸಬಹುದು.

ಗರುಡ ಪುರಾಣದ ಪ್ರಕಾರ ಯಾವುದೇ ವ್ಯಕ್ತಿಗೆ ಅವರ ಕೊನೆಯುಸಿರಿನ ಸಮಯದಲ್ಲಿ ಒಂದು ನಿಗೂಢ ಬಾಗಿಲು ತೆರೆದುಕೊಳ್ಲುವುದು ಕಾಣುತ್ತದೆ. ಆ ಬಾಗಿಲಿನಿಂದ ತೀವ್ರವಾದ ಬೆಳಕಿನ ಕಿರಣಗಳು ಹೊರಹೊಮ್ಮುತ್ತವೆ ಎಂದು ನಂಬಲಾಗಿದೆ. ಕೆಲವರು ಬಾಗಿಲಿನಿಂದ ಪ್ರಕಾಶಮಾನವಾದ ಬೆಳಕಿನ ರೇಖೆಗಳನ್ನು ನೋಡುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ರೋಗಿಯು ತಾನು ತೀವ್ರವಾಗಿ ಅಸ್ವಸ್ಥಗೊಂಡು ಸಾಯುವ ಮೊದಲು ಅಂತಹ ದೃಶ್ಯವನ್ನು ನೋಡಿದ್ದೇನೆ ಎಂದು ಹೇಳಿದರೆ, ಅವನು ಬೇಗನೆ ಅವರನ್ನು ಬಿಟ್ಟು ಹೋಗುತ್ತಾನೆ ಎಂದು ಕುಟುಂಬವು ಅರಿತುಕೊಳ್ಳಬೇಕು.

ಅವನು ತನ್ನ ಜೀವನದ ಕೊನೆಯ ಕ್ಷಣಗಳಲ್ಲಿ ಭಯಾನಕವಾಗಿರುವ ಕಪ್ಪು ಮನುಷ್ಯನನ್ನು ನೋಡುತ್ತಾನೆ. ಅವನು ವಾಸ್ತವವಾಗಿ ಯಮ. ಯಮಧರ್ಮರಾಜ ವ್ಯಕ್ತಿಯ ಆತ್ಮವನ್ನು ತನ್ನೊಂದಿಗೆ ತೆಗೆದುಕೊಳ್ಳಲು ಬಂದಿದ್ದಾನೆ ಎಂದು ಭಾವಿಸಬೇಕು. ಒಬ್ಬ ವ್ಯಕ್ತಿಯು ಯಮ ದೇವತೆಗಳಿಂದ ಸುತ್ತುವರೆದಿರುವಂತೆ ಭಾವಿಸಿದರೆ, ಅವನು ತನ್ನ ಕೊನೆಯ ಉಸಿರನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಹೇಳಲಾಗುತ್ತದೆ. ಇದು ಸಂಭವಿಸಿದಾಗ. ಸುತ್ತಲಿನ ಪರಿಸರವೂ ಪ್ರತಿಕೂಲವಾಗುತ್ತದೆ.

ಸಾವು ಯಾವಾಗ ಬರುತ್ತದೆ ಎಂದು ನೆರಳು ಕೂಡ ಹೇಳುತ್ತದೆ ಎಂದು ನಂಬಲಾಗಿದೆ. ಮನುಷ್ಯನ ಜೀವಿತಾವಧಿಯ ಕೊನೆಯ ಹಂತದಲ್ಲಿ ನೀರು, ಕನ್ನಡಿ ಅಥವಾ ಎಣ್ಣೆಯಲ್ಲಿ ತನ್ನ ಪ್ರತಿಬಿಂಬ ಅಥವಾ ನೆರಳನ್ನು ನೋಡಲು ಸಾಧ್ಯವಿಲ್ಲ. ಇದು ಸಂಭವಿಸಿದಲ್ಲಿ, ಸಾವು ಸನ್ನಿಹಿತವಾಗಿದೆ ಎಂದೇ ಅರ್ಥಮಾಡಿಕೊಳ್ಳಬೇಕು.

ಮನುಷ್ಯನ ಅಂತ್ಯ ಸಮೀಪಿಸುತ್ತಿರುವಾಗ, ಅವನು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಅವನಿಗೆ ಥಟ್ಟನೆ ನೆನಪಿಗೆ ಬರುತ್ತವೆ. ಕೊನೆಯ ಕ್ಷಣಗಳಲ್ಲಿ, ಅವನು ತನ್ನ ಕುಟುಂಬ ಸದಸ್ಯರಿಗೆ ತನ್ನ ಆಸೆಗಳನ್ನು ಹೇಳಲು ಬಯಸುತ್ತಾನೆ. ಜೀವನದಲ್ಲಿ ಯಾರೊಂದಿಗೂ ಹಂಚಿಕೊಳ್ಳದ ವಿಷಯಗಳನ್ನು ವ್ಯಕ್ತಿಯೊಬ್ಬರು ಯಾರಿಗಾದರೂ ಹೇಳಿದಾಗ ತಾಳ್ಮೆಯಿಂದ ಆಲಿಸಿ ಮತ್ತು ಅವರ ಕೊನೆಯ ಆಸೆಯನ್ನು ಪೂರೈಸಿಕೊಳ್ಳಿ ಎಂದು ಅದು ಹೇಳುತ್ತದೆ.

ಗರುಡ ಪುರಾಣ ಕುರಿತಾದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು