ಶಿವನ ಐದು ತಲೆಗಳ ರಹಸ್ಯ, ಪಂಚ ತಲೆಯುಳ್ಳ ಶಿವನ ಬಗ್ಗೆ ನಿಮಗೆಷ್ಟು ಗೊತ್ತು?

| Updated By: ವಿವೇಕ ಬಿರಾದಾರ

Updated on: Aug 08, 2023 | 7:06 AM

ಭಗವಂತ ಪರಮೇಶ್ವರನಿಗೆ ಐದು ರೂಪದ ಮುಖಗಳಿದ್ದು, ಐದು ಕ್ರಿಯೆಗೆ ಒಳಪಟ್ಟಿದೆ. ಅವುಗಳು, ಸೃಷ್ಟಿ-ಸ್ಥಿತಿ-ಸಂಹಾರ-ಶಿರೋಧಾರ ಮತ್ತು ಅನುಗ್ರಹಗಳಿಗೆ ಸಂಬಂಧಪಟ್ಟಿದೆ.

ಶಿವನ ಐದು ತಲೆಗಳ ರಹಸ್ಯ, ಪಂಚ ತಲೆಯುಳ್ಳ ಶಿವನ ಬಗ್ಗೆ ನಿಮಗೆಷ್ಟು ಗೊತ್ತು?
ಸಾಂದರ್ಭಿಕ ಚಿತ್ರ
Follow us on

ನಮ್ಮ ಪೂರ್ವಿಕರು ಭಗವಂತನಿಗೆ ಪ್ರತಿಮೆಯ ರೂಪ ಕೊಟ್ಟರು. ಆದರೆ ಪ್ರತಿಮೆಯ ಹೊರ ರೂಪವನ್ನು ಪೂಜಿಸಿ ಎಂದು ಹೇಳಲಿಲ್ಲ. ಪ್ರತಿಮೆಯನ್ನು ನೋಡಿ ಕಣ್ತುಂಬಿಕೊಂಡು, ಮನಸ್ಸಿನಲ್ಲಿ ಆ ರೂಪವನ್ನು ನೆನೆಯುವ ಮೂಲಕ ಅದರ ತತ್ವಗಳನ್ನು ಅರ್ಥಮಾಡಿಕೊಳ್ಳಲಿ ಎಂಬುದೇ ಪೂರ್ವಿಕರ ಉದ್ದೇಶವಾಗಿತ್ತು. ತತ್ವಗಳು ನಮಗೆ ಸದಾ ಕಾಲ ನೆನಪಿರಲಿ ಎಂಬ ಕಾರಣಕ್ಕೆ ಪ್ರತಿಮೆಗಳನ್ನು ಮಾಡಿ ನಮ್ಮ ಮುಂದಿಟ್ಟಿದ್ದಾರೆ.

ಇಂಥ ಸುಂದರ ಕಲ್ಪನೆಗಳಲ್ಲಿ ಪಂಚ ಸತತ್ವವನ್ನೋಳಗೊಂಡ ಶಿವನ ಪ್ರತಿಮೆಯು ಒಂದು. ಐದು ತಲೆ ಇರುವ ಶಿವನ ಪ್ರತಿಮೆ ಇರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕಾರಣ ನಾವು ಶಿವನನ್ನು ಲಿಂಗ ರೂಪದಲ್ಲಿ ಪೂಜಿಸುತ್ತೇವೆ ಹೊರತು ಪ್ರತಿಮೆಯ ರೂಪದಲ್ಲಿ ನೋಡಿರುವುದು ಕಡಿಮೆಯೇ, ಅದರಲ್ಲೂ ಪಂಚ ಮುಖವಿರುವ ಶಿವನ ಮೂರ್ತಿಯನ್ನು ನೋಡಿರುವುದು ಅತಿ ವಿರಳ. ಭಗವಂತ ಪರಮೇಶ್ವರನಿಗೆ ಐದು ರೂಪದ ಮುಖಗಳಿದ್ದು, ಐದು ಕ್ರಿಯೆಗೆ ಒಳಪಟ್ಟಿದೆ. ಅವುಗಳು, ಸೃಷ್ಟಿ-ಸ್ಥಿತಿ-ಸಂಹಾರ-ಶಿರೋಧಾರ ಮತ್ತು ಅನುಗ್ರಹಗಳಿಗೆ ಸಂಬಂಧಪಟ್ಟಿದೆ.

ಭಗವಂತನ ರೂಪಗಳ ಐದು ಹೆಸರುಗಳು

  • ಸದ್ಯೋಜಾತ: ಶ್ವೇತವರ್ಣದ ಇವನು ಸೃಷ್ಟಿಕರ್ತ. ಇಚ್ಛಾಶಕ್ತಿ ಜ್ಞಾನಶಕ್ತಿಗೆ ಕಾರಣವಾಗಿದೆ.
  • ವಾಮದೇವ: ಸ್ಥಿತಿಗೆ ಕಾರಣ. ಇದು ಶಿವನ ಅರ್ಧಾಂಗಿ ಶಕ್ತಿಯ ಸಂಕೇತ. ಮನಸ್ಸಿನ ಆರೋಗ್ಯಕ್ಕೆ ಕಾರಣವಾಗಿದೆ.
  • ಅಘೋರ: ಬೂದು ಬಣ್ಣದ ಸಂಹಾರಕ. ಈ ಮುಖ ಜ್ಞಾನಕೋಶವನ್ನು ವೃದ್ಧಿಸುತ್ತದೆ.
  • ಶಿರೋಧಾರ: ಹಳದಿ ಬಣ್ಣದ ಇವನು ಸತ್ಪುರುಷನಾಗಿದ್ದು ಮೂಲಾಧಾರದಲ್ಲಿದೆ.
  • ಕೊನೆಯದು ನಾಲ್ಕು ತಲೆಯ ಮಧ್ಯದಲ್ಲಿರುವ ರೂಪ,’ಈಶಾನ’-ಆಕಾಶ ತತ್ವಕ್ಕೆ ಒಳಪಟ್ಟಿದೆ.

ಇದನ್ನೂ ಓದಿ: Shravan Maas 2023: ಅಧಿಕ ಶ್ರಾವಣ ಮಾಸದಲ್ಲಿ ಸೋಮವಾರದ ವ್ರತಾಚರಣೆಯ ಫಲಗಳೇನು? ಯಾವ ಮಂತ್ರವನ್ನು ಪಠಿಸಬೇಕು?

ಈ ಐದು ಶಿವನ ತಲೆಗಳು ಪಂಚತತ್ವಗಳನ್ನು ಒಳಗೊಂಡಿದೆ. ಅದು ಹೀಗಿದೆ.”ನಮಃ ಶಿವಾಯ”. ಇದು ಪಂಚಾಕ್ಷರಿ ಮಂತ್ರ. ‘ನ’ ಇದು ಸದ್ಯೋಜಾತಕ್ಕೆ ಸಂಬಂಧಪಟ್ಟಿದ್ದು ಇದನ್ನು ಪೃಥ್ವಿ ತತ್ವ ಎನ್ನುತ್ತಾರೆ. ‘ಮ’ ಇದು ವಾಮದೇವರಾಗಿ ‘ಜಲತತ್ವ’ ವಾಗಿದೆ. ಮೂರನೆಯದು ‘ಶಿ’ ಇದು ‘ಆಘೋರ’ ಇದು ‘ಸಂಹಾರವಾಗಿದ್ದು ‘ಅಗ್ನಿ ತತ್ವಕ್ಕೆ’ ಒಳ ಪಟ್ಟಿದೆ. ನಾಲ್ಕು’ವಾ’ ಇದು ಶಿರೋದಾರ, ವಾಯು ತತ್ವಕ್ಕೆ ಸಂಬಂಧಪಟ್ಟಿದೆ. ಹಾಗೂ ಕಡೆಯದು ಹಾಗೂ ಐದನೆಯದು ‘ಯ’ ಇದು ‘ಈಶಾನ’ ಆಕಾಶ ತತ್ವವಾಗಿದ್ದು ‘ಅನುಗ್ರಹಕ್ಕೆ’ ಸಂಬಂಧಪಟ್ಟಿದೆ.

ಭಗವಂತನಾದ ಪರಮೇಶ್ವರನ ಐದು ಮುಖಗಳು, ಐದು ದಿಕ್ಕಿಗೆ ಸಂಬಂಧ ಪಟ್ಟಿದೆ. ಅವುಗಳು, ಮೊದಲು ಸದ್ಯೋಜಾತ ಮುಖ ಇರುವುದು ಪಶ್ಚಿಮ ದಿಕ್ಕಿಗೆ, ವಾಮದೇವನ ಮುಖ ಉತ್ತರ ದಿಕ್ಕಿಗೆ, ದಕ್ಷಿಣ ದಿಕ್ಕಿಗೆ ಅಘೋರನ ಮುಖ, ಪೂರ್ವದಿಕ್ಕಿಗೆ ಶಿರೋಧಾರ, ಆಕಾಶ ತತ್ವ ಎಲ್ಲಾ ಕಡೆ ಇರುವ ಕಾರಣ ಈಶಾನನ ಮುಖ ಆಕಾಶ ತತ್ವದ ಕಡೆಗಿದೆ. ಅಂತಹ ಪಂಚಮುಖ ಇರುವ ಈಶ್ವರನ ಒಂದೊಂದು ಮುಖ ವರ್ಣಿಸುವುದು ಅಸಾಧ್ಯವಾದದ್ದು. ಏಕೆಂದರೆ ಅಷ್ಟು ಆಳವಾಗಿದೆ. ಸರಳವಾಗಿ ತಿಳಿಯಲು, ಈಶ್ವರ, ಐದು ರೂಪಗಳು, ಐದು ಕ್ರಿಯೆಗಳು ಐದು ತತ್ವವನ್ನು ಒಳಗೊಂಡಿದೆ, ಐದು ತತ್ವಗಳು ಐದು ದೇವರ ಹೆಸರನ್ನು ಒಳಗೊಂಡಿದೆ.

ಶಿವನ ಐದು ರೂಪವನ್ನು ಪಂಚಬ್ರಹ್ಮ ಎಂದು ಕರೆದಿದ್ದಾರೆ. ಶಿವನ ಐದು ತಲೆಗಳಿಗೆ , ಹತ್ತು ಬಾಹುಗಳಿವೆ. ಅವುಗಳಲ್ಲಿ ತ್ರಿಶೂಲ, ಖಡ್ಗ, ಪರುಶು, ಅಂಕುಶ ಪಾಷಾ, ನಾಗ, ಪಿನಾಕ, ಪಾಶುಪತಾಸ್ತ್ರ ಬ್ರಹ್ಮಾಸ್ತ್ರ ಸುದರ್ಶನ ಚಕ್ರ ವರುಣಾಸ್ತ್ರ ಇಂತಹ ಒಂದೊಂದು ಆಯುಧಗಳು ಒಂದೊಂದು ಕೈಯಲ್ಲಿದೆ. ಇದು ಮೇಲ್ನೋಟಕ್ಕೆ ಕಾಣುವ ಪಂಚಮುಖದ ಶಿವನ ಸ್ವರೂಪ. ಇದರ ಹಿಂದೆ ಭಾರತೀಯರ ವೇದಾಂತ, ಸೃಷ್ಟಿಯ ರಹಸ್ಯ , ಯೋಗಶಾಸ್ತ್ರ, ತತ್ವಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ,ಖಗೋಳಶಾಸ್ತ್ರ, ಸೇರಿದಂತೆ ಹಲವಾರು ಶಾಸ್ತ್ರಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಈ 5 ತಲೆಗಳು, ದೇಹದಲ್ಲಿರುವ ‘ಷಟ್ಚಕ್ರ’ ಪಂಚೇಂದ್ರಿಯ ಪಂಚಕೋಶ, ಮತ್ತು ಸೃಷ್ಟಿಯ ರಹಸ್ಯವನ್ನೋಳಗೊಂಡು ಪಂಚಭೂತಗಳಿಗೆ ಪ್ರತೀಕವಾಗಿದೆ.

ಇತಿಹಾಸದ ಪುಟಗಳಲ್ಲಿ ಪಂಚಬ್ರಹ್ಮನ ಆರಾಧನೆ ಕುರಿತಾದ ಹಲವು ಮಾಹಿತಿಗಳು ಸಿಗುತ್ತವೆ. ಪ್ರತಿಯೊಂದು ತಲೆಯ ಮುಖಕ್ಕೆ ಒಂದೊಂದು ಸ್ತೋತ್ರಗಳು, ಪೂಜೆ ಆರಾಧನೆ ಇದೆ. ಇವುಗಳನ್ನು ಮಾಡುವುದರಿಂದ ಗ್ರಹ ದೋಷಗಳು, ತೊಂದರೆಗಳು ಪರಿಹಾರವಾಗುತ್ತದೆ. ದೇವರ ಪ್ರತಿಮೆಗಳು ನಿಗೂಢವಾದ, ಸಾಂಕೇತಿಕ ಅರ್ಥಗಳಿಂದ ತುಂಬಿದೆ. ನಮ್ಮ ಜ್ಯೋತಿಷ್ಯರು, ಪುರೋಹಿತರು, ಪ್ರತ್ಯೇಕವಾದ ಪೂಜೆ ಮಾಡಲು, ಸ್ತೋತ್ರ, ಹೇಳಲು ಸೂಚಿಸುತ್ತಾರೆ. ಇದರಿಂದ ಹಲವು ಪೀಡೆಗಳಿಗೆ ಪರಿಹಾರ ದೊರಕುತ್ತದೆ. ಮಂಗಳಕಾರಕ ಶಿವನಿಂದ, ಎಲ್ಲವೂ ಮಂಗಳಕರವಾಗಿ ಸುಖ, ಶಾಂತಿ, ಸಮೃದ್ಧಿಗಳು ಯಥೇಚ್ಛವಾಗಿ ದೊರಕುತ್ತದೆ.

ಭವಾಯ ಚಂದ್ರಚೂಡಾಯ ನಿರ್ಗುಣಾಯ ಗುಣಾತ್ಮನೇ!

ಕಾಲಕಾಲಾಯ ರುದ್ರಾಯ ನೀಲಗ್ರೀವಾಯ ಮಂಗಲಮ್!

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:00 am, Tue, 8 August 23