Mahatma Gandhi Death Anniversary: ಮಹಾತ್ಮ ಗಾಂಧಿ ಕುರಿತು ನಿಮಗೆ ತಿಳಿಯದ ಸಂಗತಿ, ಸ್ಪೂರ್ತಿದಾಯಕ ಸಂದೇಶಗಳು
ಇಂದು (ಜ.30) ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 75ನೇ ಪುಣ್ಯಸ್ಮರಣೆ. ಮಹಾತ್ಮ ಗಾಂಧಿ ಅವರ ಬಗ್ಗೆ ನಿಮಗೆ ತಿಳಿಯದ ಕೆಲವು ಸಂಗತಿಗಳು ಇಲ್ಲಿವೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ (Mahatma gandhi death) ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮುಂಚುವಳಿ ನಾಯಕರಲ್ಲಿ ಇವರು ಒಬ್ಬರು. ಗಾಂಧಿ ಅವರು ಅಕ್ಟೋಬರ್ 2, 1869ರಲ್ಲಿ ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದರು. ತಂದೆ ಕರಮಚಂದ್ ಗಾಂಧಿ, ತಾಯಿ ಪುತಲೀಬಾಯಿ. 13 ನೇ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ಇವರಿಗೆ ನಾಲ್ಕು ಮಕ್ಕಳು ಜನಿಸಿದರು, ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ, ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. ಮಹಾತ್ಮ ಗಾಂಧಿ ತಮ್ಮ ಜೀವನದ ಉದ್ದಕ್ಕೂ ಹೋರಾಟಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಗಾಂಧಿಯವರು ಜನವರಿ 30 1948ರಂದು ನಾಥುರಾಮ್ ಗೋಡ್ಸೆ ಗುಂಡೇಟಿನಿಂದ ನಿಧನರಾದರು.
ಗಾಂಧಿಜಿ ಕುರಿತಾದ ಆಸಕ್ತಿದಾಯಕ ಸಂಗತಿಗಳು
1. ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಅವರು ಗಾಂಧೀಜಿಗೆ ಮಹಾತ್ಮ ಎಂಬ ಬಿರುದನ್ನು ನೀಡಿದರು.
2. ರಾಷ್ಟ್ರಪಿತ ಎಂದು ಜೂನ್ 4 1944 ರಂದು ನೇತಾಜಿ ಸುಭಾಷ ಚಂದ್ರ ಬೋಸ್ ಅವರು ಸಂಭೋದಿಸಿದರು.
3. ಸಂಶೋಧಕ ಆಲ್ಬರ್ಟ್ ಐನ್‌ಸ್ಟೈನ್ ಅವರು ಬಾಪು ಅವರಿಂದ ಬಹಳ ಪ್ರಭಾವಿತರಾಗಿದ್ದರು.
4. 36ನೇ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು.
5. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು.
ಮಹಾತ್ಮ ಗಾಂಧಿಜಿ ಅವರ ಸ್ಪೂರ್ತಿದಾಯಕ ಸಂದೇಶಗಳು
1. ಮಹಾತ್ಮ ಗಾಂಧಿ ಅವರ ಮುಖ್ಯ ಸಂದೇಶ ಸತ್ಯ ಮತ್ತು ಅಹಿಂಸೆ.
2. ಯಾವುದೇ ಸಂದರ್ಭದಲ್ಲೂ ಸಶಸ್ತ್ರ ಶಕ್ತಿಗಿಂತ ನಿರಾಯುಧ ಅಹಿಂಸೆಯ ಶಕ್ತಿ ಶ್ರೇಷ್ಠವಾಗಿರುತ್ತದೆ.
3. ಕ್ರೌರ್ಯವನ್ನು ಕ್ರೌರ್ಯದಿಂದ ಉತ್ತರಿಸುವುದು ಎಂದರೆ ನಿಮ್ಮ ನೈತಿಕ ಮತ್ತು ಬೌದ್ಧಿಕ ಅವನತಿಯನ್ನು ಒಪ್ಪಿಕೊಳ್ಳುವುದು.
4. ಭಯವು ದೇಹದ ರೋಗವಲ್ಲ, ಅದು ಆತ್ಮವನ್ನು ಕೊಲ್ಲುತ್ತದೆ.
5. ನೀವು ಮಾನವೀಯತೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು. ಮಾನವೀಯತೆಯು ಸಾಗರದಂತೆ; ಸಮುದ್ರದ ಕೆಲವು ಹನಿಗಳು ಕೊಳಕಾಗಿದ್ದರೆ, ಸಾಗರವು ಕೊಳಕು ಆಗುವುದಿಲ್ಲ.
Published On - 7:12 am, Mon, 30 January 23