ಹಬ್ಬಗಳ ರಾಜ ದೀಪಾವಳಿಯಲ್ಲಿ ರಾಜ್ಯದ ಒಂದಲ್ಲಾ ಒಂದು ಭಾಗದಲ್ಲಿ ಹಲವು ರೀತಿಯ ವಿಶಿಷ್ಟ ಆಚರಣೆಗಳು ಕಾಣಸಿಗುತ್ತವೆ. ಇಂದು ದೀಪಾವಳಿಯ ನರಕ ಚತುರ್ದಶಿ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಅಭ್ಯಂಗ ಸ್ನಾನ ಮಾಡುವ ಪದ್ಧತಿಯಿದೆ. ಕೊಬ್ಬರಿ ಎಣ್ಣೆಯನ್ನು ಕಿವಿಗೆ, ಮೈಗೆ ಹಚ್ಚಿಕೊಂಡು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವ ಈ ಸಂಪ್ರದಾಯಕ್ಕೆ ವೈದ್ಯಕೀಯ, ಪೌರಾಣಿಕ ಹಿನ್ನೆಲೆಯೂ ಇದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗವನ್ನು ತಡೆಯುವ ಶಕ್ತಿಯೂ ಅಭ್ಯಂಜನ (ಅಭ್ಯಂಗ) ಸ್ನಾನಕ್ಕಿದೆ.
ಅಭ್ಯಂಜನ ಸ್ನಾನದ ಪೌರಾಣಿಕ ಹಿನ್ನೆಲೆಯೇನು?
ಆಯುರ್ವೇದದಲ್ಲೂ ಇದೆ ಮಹತ್ವ
ಅಭ್ಯಂಜನ ಸ್ನಾನಕ್ಕೆ ಆಯುರ್ವೇದ ತುಂಬಾ ಮಹತ್ವ ನೀಡುತ್ತದೆ. ಇದು ಶರದ್ ಋತು ಮುಗಿದು ಹೇಮಂತ ಋತುವಿಗೆ ಪ್ರವೇಶಿಸುವ ಕಾಲ. ಈಕಾಲದಲ್ಲಿ ಬೀಸುವ ತಂಪು ಗಾಳಿ ದೇಹವನ್ನು ಒಣಗಿಸುತ್ತದೆ. ದೇಹ ಹಸಿಹಸಿಯಾಗಿರಲು ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಕೊಳ್ಳಬೇಕು ಎನ್ನುತ್ತದೆ ಪುರಾತನ ವೈದ್ಯ ಪದ್ಧತಿ.
ಎಣ್ಣೆ ಸ್ನಾನ ದಿನಚರಿಯಾಗಲಿ..
ಕಣ್ಣಿಗೂ ಒಳ್ಳೆಯದು ಕೊಬ್ಬರಿ ಎಣ್ಣೆ
ಈ ಸಂದರ್ಭಗಳಲ್ಲಿ ಅಭ್ಯಂಜನ ವರ್ಜ್ಯ..
ಗಂಟಲು ನೋವು,ಜ್ವರ, ಕಫ ಇದ್ದರೆ ಅಭ್ಯಂಜನ ಮಾಡಬೇಡಿ.
ಅಜೀರ್ಣ ಕಾಡುತ್ತಿದ್ದರೆ ದೂರವಿರಿ.
ತಿಂಡಿ, ಊಟ ನಂತರ ಅಭ್ಯಂಗ ಸ್ನಾನ ಮಾಡಬೇಡಿ.
“ಎಷ್ಟೋ ಜನ ಇಂದು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ನಿದ್ರಿಸುವ ಮುನ್ನ ತಲೆಗೆ ಕೊಬ್ಬರಿ ಅಥವಾ ಎಳ್ಳೆಣ್ಣೆ ಬಳಿದುಕೊಳ್ಳುವದರಿಂದ ಚೆನ್ನಾಗಿ ನಿದ್ರಿಸಬಹುದು. ಅಲ್ಲದೇ ಪ್ರತಿನಿತ್ಯ ಅಭ್ಯಂಜನ ಸ್ನಾನ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೊರೋನಾ ವೈರಸ್ನಂತಹ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.”
-ಸುಚೇತಾ ಮದ್ಗುಣಿ, ಆಯುರ್ವೇದ ತಜ್ಞರು
Published On - 1:57 pm, Sat, 14 November 20