ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ಸಭೆಯಲ್ಲಿ ಏನೆಲ್ಲ ಚರ್ಚೆಯಾಯ್ತು? ಸಿದ್ದರಾಮಯ್ಯ ಕೊಟ್ಟ ವಿವರ ಇಲ್ಲಿದೆ
ಕಾಂಗ್ರೆಸ್ ಹೈಕಮಾಂಡ್ ನಿನ್ನೆ (ಆಗಸ್ಟ್ 02) ನವದೆಹಲಿಯಲ್ಲಿ ಕರೆದಿದ್ದ ಸಭೆಯಲ್ಲಿ ಏನೆಲ್ಲ ಚರ್ಚೆಯಾ್ತು| ಹೈಕಮಾಂಡ್ ನಾಯಕರು ಏನೆಲ್ಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎನ್ನುವ ಬಗ್ಗೆ ಸಿದ್ದರಾಮಯ್ಯ ಮಾಧ್ಯಮಗಳಿಗೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನವದೆಹಲಿ, (ಆಗಸ್ಟ್ 02): ಗ್ಯಾರಂಟಿ ಯೋಜನೆಗಳ ಅಸ್ತ್ರಬಿಟ್ಟು ಕರ್ನಾಟಕದಲ್ಲಿ (Karnataka) ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್(Congress) ಲೋಕಸಭೆ ಚುನಾವಣೆಯಲ್ಲೂ(Loksabha Elections 2024) ಪಾರಮ್ಯ ಮೆರೆಯಲು ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದೆ. ಲೋಕಸಭೆ ಚುನಾವಣೆಗೆ ಯಾವ ರೀತಿ ರಣತಂತ್ರಗಳನ್ನು ರೂಪಿಸಬೇಕು? ಪಕ್ಷ ಸಂಘಟನೆ ಹೇಗಿರಬೇಕು? ಇತ್ಯಾದಿ ವಿಚಾರಗಳ ಕುರಿತು ನಿನ್ನೆ (ಆಗಸ್ಟ್ 02) ಹೈಕಮಾಂಡ್ ಕರೆದಿದ್ದ ಸಭೆಯಲ್ಲಿ ಚರ್ಚೆಯಾಗಿದೆ. ಇನ್ನು ಈ ಬಗ್ಗೆ ಸಿದ್ದರಾಮಯ್ಯ(Siddaramaiah) ಮಾಧ್ಯಮಗಳಿಗೆ ಪತಿಕ್ರಿಯಿಸಿದ್ದು,31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಕೆಲವು ಹಿರಿಯ ನಾಯಕರನ್ನು ನೇಮಕ ಮಾಡುತ್ತೇವೆ ಎಂದು ಸಭೆಯಲ್ಲಿ ನಡೆದ ಚರ್ಚೆಯ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಹೈಕಮಾಂಡ್ ಕರೆದಿದ್ದ ಸಭೆಯಲ್ಲಿ ಹಿರಿಯ ನಾಯಕರು ಎಲ್ಲರು ಭಾಗಿಯಾಗಿದ್ದರು. ಸಚಿವ ಸಂಪುಟದ ಎಲ್ಲ ಮಂತ್ರಿಗಳು ಭಾಗಿಯಾಗಿದ್ದು, ಲೋಕಸಭೆ ಚುನಾವಣೆ ಬಗ್ಗೆ ಚರ್ಚೆಯಾಯಿತು. ನಾವು ತೆಗೆದುಕೊಂಡ ನಿರ್ಧಾರ ಸುರ್ಜೆವಾಲ ತಿಳಿಸಿದ್ದಾರೆ. 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಕೆಲವು ಹಿರಿಯ ನಾಯಕರನ್ನು ನೇಮಕ ಮಾಡುತ್ತೇವೆ. ಹಾಗೇ ಕೆಲವು ಸಚಿವರಿಗೂ ಜವಾಬ್ದಾರಿ ನೀಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ನಮ್ಮ ಪರವಾಗಿ ವಾತಾವರಣ ಇದೆ ಎಂದು ನಾವು ಹೈ ಕಮಾಂಡ್ ಗೆ ಹೇಳಿದ್ದು, ಈ ಬಾರಿ ಕನಿಷ್ಠ 20 ಸೀಟ್ ಗೆಲ್ಲುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದೇವೆ. ನಾವು ಪಾರ್ಲಿಮೆಂಟ್ ಚುನಾವಣೆ, ಸ್ಥಳೀಯ ಸಂಸ್ಥೆಯನ್ನು ಸಹ ಗೆಲ್ಲುತ್ತೇವೆ. ಇದೆ ವಿಚಾರ ಸಭೆಯಲ್ಲಿ ಚರ್ಚೆ ಆಗಿದೆ. ಈ ವಿಚಾರ ಬಿಟ್ಟು ಬೇರೆ ಏನೂ ಆಗಿಲ್ಲ. ಈ ಮೀಟಿಂಗ್ ನ ಮುಖ್ಯ ವಿಚಾರವೇ ಲೋಕಸಭಾ ಚುನಾವಣೆ ಎಂದು ಸ್ಪಷ್ಟಪಡಿಸಿದರು.
ಯಾವುದೇ ಅಭಿವೃದ್ಧಿ ಆಗುವುದಿಲ್ಲ ಎಂದು ಮೋದಿ ಹೇಳುತ್ತಾರೆ. ಅದು ಶುದ್ಧ ಸುಳ್ಳು, ನಾವು ಎಲ್ಲವನ್ನೂ ಮಾಡುತ್ತಿದ್ದೇವೆ. ಫ್ರೀ ಕೂಡ ಕೊಡುತ್ತೇವೆ, ಅಭಿವೃದ್ಧಿ ಸಹ ಮಾಡುತ್ತೇವೆ. ಕಾಂಗ್ರೆಸ್ ಪರ ವಾತಾವರಣ ಇದೆ. ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಜೆಡಿಎಸ್ನವರು ಗ್ಯಾರಂಟಿ ಜಾರಿ ಮಾಡುವುದಕ್ಕೆ ಆಗಲ್ಲ ಎಂದು ಸುಳ್ಳು ಹೇಳಿದರು. ಮೋದಿ ಕೂಡಾ ಆರ್ಥಿಕ ದಿವಾಳಿ ಆಗುತ್ತೆ ಎಂದು ಹೇಳಿದ್ದರು. ನಾವು ಅದಾಗ್ಯೂ ಯೋಜನೆ ಜಾರಿ ಮಾಡಿ ತೋರಿಸಿದ್ದೇವೆ. ಬಜೆಟ್ ನಲ್ಲಿ ಹಣ ಮೀಸಲಿಟ್ಟಿದೆ. ನಾಲ್ಕು ಜಾರಿಯಾಗಿವೆ, ಇನ್ನೊಂದು ಶೀಘ್ರದಲ್ಲಿ ಆಗಲಿದೆ.. ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ, ಜನದ್ರೋಹದ ಕೆಲಸ ಮಾಡಿದರು. ದುಡ್ಡು ಕೊಡುತ್ತೇವೆ ಅಂದರೂ ಅಕ್ಕಿ ಕೊಡಲಿಲ್ಲ. ಇದು ಅಲ್ಲದೇ ನಾವು ಪ್ರಣಾಳಿಕೆನಲ್ಲಿ ಹೇಳಿದ 76 ಕಾರ್ಯಕ್ರಮಗಳನ್ನ ಜಾರಿಗೆ ತಂದಿದ್ದೇವೆ ಎಂದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:42 am, Thu, 3 August 23