Women’s Day: ಪಾಕಿಸ್ತಾನದಂಥ ದೇಶದಲ್ಲೇ ಶೇ. 20ರಷ್ಟು ಮಹಿಳಾ ಸಂಸದರು; ಕರ್ನಾಟಕದಲ್ಲಿ 5 ಪ್ರತಿಶತವೂ ಇಲ್ಲ; ಇದೆಂಥ ಸ್ಥಿತಿ?

Female Politicians In Karnataka and World: ರಾಜ್ಯದ 224 ಶಾಸಕರಲ್ಲಿ ಮಹಿಳೆಯರಿರುವುದೇ 9 ಮಂದಿ. ಇನ್ನು, ಸಚಿವ ಸಂಪುಟದಲ್ಲಿ ಏಕೈಕ ಮಹಿಳೆ. ಇದು ಇವತ್ತು ನಿನ್ನೆಯ ಸ್ಥಿತಿಯಲ್ಲ. ಸಂಪುಟದಲ್ಲಿ ನಾಮಕಾವಸ್ತೆಗೆ ಒಬ್ಬ ಮಹಿಳೆಯನ್ನು ಸಚಿವ ಸ್ಥಾನದಲ್ಲಿ ಕೂರಿಸಬೇಕೆಂಬ ಧೋರಣೆ ಅಷ್ಟೇ. ಅಂತರರಾಷ್ಟ್ರೀಯ ಮಹಿಳಾ ದಿನದ ವಿಶೇಷ ಲೇಖನ ಇದು.

Important Highlight‌
Women's Day: ಪಾಕಿಸ್ತಾನದಂಥ ದೇಶದಲ್ಲೇ ಶೇ. 20ರಷ್ಟು ಮಹಿಳಾ ಸಂಸದರು; ಕರ್ನಾಟಕದಲ್ಲಿ 5 ಪ್ರತಿಶತವೂ ಇಲ್ಲ; ಇದೆಂಥ ಸ್ಥಿತಿ?
ಭಾರತದ ರಾಜಕೀಯದಲ್ಲಿ ಮಹಿಳೆಯರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 08, 2023 | 1:15 PM

ಬೆಂಗಳೂರು: ಮಾರ್ಚ್ 8, ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ (International Women’s Day). ನಾರಿಶಕ್ತಿಯನ್ನು ಆರಾಧಿಸುವ ನಾಡು ನಮ್ಮದು. ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೇ. 33ರಷ್ಟಾದರೂ ಸ್ಥಾನಗಳನ್ನು ಮೀಸಲಿರಿಸಬೇಕೆಂಬ (Reservation for Women in Parliament and Assemblies) ಆಶಯ ಇನ್ನೂ ಸಾಕಾರಗೊಂಡಿಲ್ಲ. ಮಹಿಳೆಯರಿಗೆ ಒಳ್ಳೆಯ ನೆಲವೀಡು ಎನಿಸಿರುವ ಕರುನಾಡಿನಲ್ಲಿ ಈ ವಿಚಾರದಲ್ಲಿ ಇನ್ನೂ ಅಧ್ವಾನದ ಸ್ಥಿತಿರಾಜ್ಯದ 224 ಶಾಸಕರಲ್ಲಿ ಮಹಿಳೆಯರಿರುವುದೇ 9 ಮಂದಿ. ಇನ್ನು, ಸಚಿವ ಸಂಪುಟದಲ್ಲಿ ಏಕೈಕ ಮಹಿಳೆ. ಇದು ಇವತ್ತು ನಿನ್ನೆಯ ಸ್ಥಿತಿಯಲ್ಲ. ಸಂಪುಟದಲ್ಲಿ ನಾಮಕಾವಸ್ತೆಗೆ ಒಬ್ಬ ಮಹಿಳೆಯನ್ನು ಸಚಿವ ಸ್ಥಾನದಲ್ಲಿ ಕೂರಿಸಬೇಕೆಂಬ ಧೋರಣೆ ಅಷ್ಟೇ. ಅದೂ ಇಲ್ಲ ಎಂದರೆ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಯೂ ಸೇರುವುದು ಕಷ್ಟ ಎನ್ನುವಂಥ ಸ್ಥಿತಿ.

ಇತ್ತೀಚೆಗೆ ಈಶಾನ್ಯ ಭಾರತದ ಮೂರು ರಾಜ್ಯಗಳಲ್ಲಿ ಚುನಾವಣೆಗಳಾದವು. ನಾಗಾಲೆಂಡ್​ನಲ್ಲಿ ಅದರ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆಯಾದರು. ಒಬ್ಬಾಕೆ ಸಚಿವೆಯೂ ಆಗಿದ್ದಾರೆ. ಪಕ್ಕಾ ಪುರುಷಪ್ರಧಾನ ಸಂಕೀರ್ಣ ರಾಜಕೀಯ ವ್ಯವಸ್ಥೆ ಇರುವ ನಾಗಾಲೆಂಡ್​ನಂಥ ಪುಟ್ಟ ರಾಜ್ಯದಲ್ಲಿ ಒಬ್ಬ ಮಹಿಳೆ ಸಚಿವೆಯಾದರೂ ಆಗಿದ್ದಾರೆ. ಉದಾರಿ ಎನ್ನಲಾದ ಕರ್ನಾಟಕದಂತಹ ರಾಜ್ಯಕ್ಕೆ ಆಗಿರುವುದಾದರೂ ಏನು?

ಕರ್ನಾಟಕದಲ್ಲಿ ಕೆಳಸ್ತರದ ರಾಜಕೀಯ ವ್ಯವಸ್ಥೆ, ಅಂದರೆ ಪಂಚಾಯಿತಿ ಮಟ್ಟದಲ್ಲಿ ಉತ್ತಮ ಸ್ಥಿತಿ ಇರುವುದು ಹೌದು. ಪಂಚಾಯಿತಿ ಸದಸ್ಯರಲ್ಲಿ ಅರ್ಧಕ್ಕಿಂತ ತುಸು ಹೆಚ್ಚು ಮಹಿಳೆಯರು ಇದ್ದಾರೆ. ಆದರೆ, ಇದಕ್ಕಿಂತ ಮೇಲ್ಮಟ್ಟಕ್ಕೆ ಎಷ್ಟು ಮಂದಿ ಮಹಿಳೆಯರು ಏರಲು ಸಾಧ್ಯವಾಗಿದೆ, ಸಾಧ್ಯವಾಗುತ್ತದೆ ಎಂಬುದು ಪ್ರಶ್ನೆ ಮತ್ತು ಆತಂಕ ಮೂಡಿಸುವ ಸಂಗತಿ.

ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶದ ರಾಷ್ಟ್ರೀಯ ಸಭೆಯಲ್ಲಿ (ಲೋಕಸಭೆ) ಶೇ. 20.6ರಷ್ಟು ಮಹಿಳೆಯರಿದ್ದಾರೆ. ತಾಲಿಬಾನ್ ಬರುವ ಮುನ್ನ, ಅಂದರೆ 2021ಕ್ಕೆ ಮುನ್ನ ಅಫ್ಗಾನಿಸ್ತಾನದ ಸಂಸದರ ಪೈಕಿ ಮಹಿಳೆಯರ ಸಂಖ್ಯೆ ಶೇ. 27 ಇತ್ತು ಎಂದರೆ ಯಾರಿಗಾದರೂ ಅಚ್ಚರಿ ಮೂಡಿಸುತ್ತದೆ.

ಇದನ್ನೂ ಓದಿInternational Women’s Day 2023: ಇಂದೇ ಮಹಿಳಾ ದಿನಾಚರಣೆ ಆಚರಿಸಲು ಕಾರಣವೇನು? ಈ ದಿನದ ಬಗ್ಗೆ ನಿಮಗೆಷ್ಟು ಗೊತ್ತು?

ಆಫ್ರಿಕಾದ ರುವಾಂಡದಂತಹ ದೇಶದ ಸಂಸತ್​ನಲ್ಲಿ ಶೇ. 61ರಷ್ಟು ಮಹಿಳೆಯರಿದ್ದಾರೆ. ಅಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕಾಗಿ ಶೇ. 30ರಷ್ಟು ಮೀಸಲಾತಿ ಇಟ್ಟಿದ್ದಾರಾದರೂ ಅದಕ್ಕಿಂತ ಎರಡು ಪಟ್ಟು ಹೆಚ್ಚು ಮಹಿಳೆಯರು ಅತ್ಯುನ್ನತ ಜನಪ್ರಾತಿನಿಧ್ಯತೆ ಗಿಟ್ಟಿಸಿದ್ದಾರೆ. ಪ್ರಪಂಚದಲ್ಲಿ ಅತಿ ಹೆಚ್ಚು ಪ್ರಮಾಣದ (ಪ್ರತಿಶತ ಲೆಕ್ಕದಲ್ಲಿ) ಸಂಸದರನ್ನು ಹೊಂದಿರುವ ದೇಶವೆನ್ನುವ ಕೀರ್ತಿ ರುವಾಂಡಾದ್ದು.

ಶೇಕಡಾವಾರು ಲೆಕ್ಕದಲ್ಲಿ ಹೆಚ್ಚು ಮಹಿಳಾ ಸಂಸದರಿರುವ ದೇಶಗಳು:

  1. ರುವಾಂಡಾ: ಶೇ. 61
  2. ಕ್ಯೂಬಾ: ಶೇ. 51.4
  3. ನಿಕಾರಾಗುವಾ: ಶೇ. 51.7
  4. ನ್ಯೂಜಿಲೆಂಡ್: ಶೇ. 50.4
  5. ಮೆಕ್ಸಿಕೋ: ಶೇ. 50
  6. ಯುಎಇ: ಶೇ. 50

ಇದಲ್ಲದೇ ಇನ್ನೂ ಇತರ 19 ದೇಶಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಮಹಿಳಾ ಸಂಸದರಿದ್ದಾರೆ. ಇಸ್ಲಾಮಿಕ್ ದೇಶ ಯುಎಇಯಲ್ಲಿ ಅರ್ಧದಷ್ಟು ಸಂಸದರು ಮಹಿಳೆಯರೇ ಆಗಿದ್ದಾರೆ.

ಮಹಿಳೆಯರಿಗೆ ಅಧಿಕಾರ ಸಿಕ್ಕಷ್ಟೂ ಸಿರಿಸಮೃದ್ಧಿ, ಶಾಂತಿ

ಮಹಿಳೆಯರು ಹೆಚ್ಚು ಬೆಳವಣಿಗೆ ಸಾಧಿಸಿದರೆ ಏನೆಲ್ಲಾ ಪ್ರಯೋಜನ ಎಂಬುದಕ್ಕೆ ರುವಾಂಡ ದೊಡ್ಡ ಸಾಕ್ಷಿಯಾಗಿದೆ. ತೊಂಬತ್ತರ ದಶಕದ ರುವಾಂಡಾವನ್ನು ಯಾರಾದರೂ ಸ್ಮರಿಸಿದರೆ ಮೊದಲು ನೆನಪಿಗೆ ಬರುವುದು ಅಲ್ಲಿಯ ಜನಾಂಗೀಯ ಕಲಹ, ನರಮೇಧದಂತಹ ಭೀಕರ ಘಟನೆಗಳು. ಆದರೆ, ಅಲ್ಲೀಗ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಸಂಸತ್ ಸೀಟುಗಳನ್ನು ಅಲಂಕರಿಸುತ್ತಿರುವಂತೆಯೇ ದೇಶ ಸುಭಿಕ್ಷವಾಗಿ ಮಾರ್ಪಾಡಾಗುತ್ತಿರುವುದನ್ನು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಅಲ್ಲಿಯ ಮಹಿಳಾ ರಾಜಕಾರಣಿಗಳು ಹೊಸ ಆಯಾಮವನ್ನೇ ಒದಗಿಸಿದ್ದಾರೆ. ಅತೀ ಕಡಿಮೆ ಭ್ರಷ್ಟಾಚಾರದ ದೇಶಗಳಲ್ಲಿ ರುವಾಂಡವೂ ಇದೆ. ರುವಾಂಡಾದಲ್ಲಿ ಶಾಂತಿ ನೆಲಸಿದೆ, ಅದರ ಪರಿಣಾಮ ಅಭಿವೃದ್ಧಿಯೂ ಜೊತೆಯಲ್ಲಿ ಸಾಗುತ್ತಿದೆ.

ಇದನ್ನೂ ಓದಿWomen’s Day 2023: ಮಹಿಳಾ ದಿನಾಚರಣೆ ಇತಿಹಾಸ, ಮಹತ್ವ ಹಾಗೂ ಭಾರತ ಸ್ವತಂತ್ರ ಸಂಗ್ರಾಮದ ಸುಪ್ತ ನಾಯಕಿ ನೀರಾ ಆರ್ಯ ಸಾಹಸದ ಕಥೆ

ಭಾರತಕ್ಕೇನಾಗಿದೆ?

ಭಾರತದ ಸಮಾಜದಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆ ಎಂಬುದು ಬರೀ ಹೆಸರಿಗಷ್ಟೇ ಎನ್ನುವುದಕ್ಕೆ ಯಾರೂ ಕನ್ನಡಿ ಹಿಡಿಯಬೇಕಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತವೆ. ಇನ್ನು ರಾಜಕೀಯಕ್ಕೆ ಬಂದರೆ ಇಲ್ಲಿಯ ಕಲ್ಮಶದ ವ್ಯವಸ್ಥೆಯಲ್ಲಿ ಮಹಿಳೆಯರು ಮೇಲೇರುವುದು ದುಸ್ತರವೇ ಸರಿ. ಇಂದಿರಾ ಗಾಂಧಿ, ಮಮತಾ ಬ್ಯಾನರ್ಜಿ, ಜಯಲಲಿತಾ, ಮಾಯಾವತಿ, ನಿರ್ಮಲಾ ಸೀತಾರಾಮನ್, ಸುಷ್ಮಾ ಸ್ವರಾಜ್, ಸೋನಿಯಾ ಗಾಂಧಿಯಂತಹ ಬೆರಳೆಣಿಕೆಯ ಮಹಿಳೆಯರು ಮಾತ್ರ ರಾಜಕೀಯದಲ್ಲಿ ಹಿಡಿತ ಸಾಧಿಸಿದವರು. ಅದು ತುಸು ಸಮಾಧಾನಕ್ಕೆ ಮಾತ್ರ.

ಭಾರತದ ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ ಒಟ್ಟು 4,896 ಸದಸ್ಯರಿದ್ದಾರೆ. ಇವರ ಪೈಕಿ ಮಹಿಳೆಯರು ಕೇವಲ 418 ಮಾತ್ರ. ಶೇಕಡಾವಾರು ಲೆಕ್ಕದಲ್ಲಿ ಕೇವಲ ಶೇ. 9. ಪಶ್ಚಿಮ ಬಂಗಾಳದಲ್ಲಿ 294 ಸದಸ್ಯಬಲದ ವಿಧಾನಸಭೆಯಲ್ಲಿ 34 ಶಾಸಕಿಯರಿದ್ದಾರೆ. ಶೇ. 10ಕ್ಕಿಂತ ತುಸು ಹೆಚ್ಚು. ಭಾರತದಲ್ಲಿ ಇದೇ ಅತಿಹೆಚ್ಚು. ಬಿಹಾರ, ಆಂಧ್ರಪ್ರದೇಶ, ಉತ್ತರಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಕರ್ನಾಟಕ ಮಹಿಳಾ ಪ್ರಾತಿನಿಧ್ಯದಲ್ಲಿ ಟಾಪ್-10 ಪಟ್ಟಿಗೆ ಬರುವುದೇ ಇಲ್ಲ.

ಕರ್ನಾಟಕಕ್ಕೇನಾಗಿದೆ?

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಕರ್ನಾಟಕದಲ್ಲಿ ಮಹಿಳೆಯರ ಪ್ರಾತಿನಿಧ್ಯ ತುಸು ಉತ್ತಮ ಸ್ಥಿತಿಯಲ್ಲಿತ್ತು. 1957ರ ಚುನಾವಣೆಯಲ್ಲಿ 151 ಶಾಸಕರ ಪೈಕಿ 13 ಮಂದಿ ಮಹಿಳೆಯರಿದ್ದರು. 1967ರಿಂದ ಮಹಿಳಾ ಪ್ರಾತಿನಿಧ್ಯ ಕುಸಿಯುತ್ತಲೇ ಸಾಗಿದೆ. 1972ರಲ್ಲಂತೂ ಒಬ್ಬ ಮಹಿಳೆಯೂ ಶಾಸಕಿಯಾಗಲು ಸಾಧ್ಯವಾಗಲಿಲ್ಲ. ಚುನಾವಣೆಗಳಲ್ಲಿ ನಿಲ್ಲುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿಲ್ಲ.

ಇದನ್ನೂ ಓದಿWomen Business Leaders: ಭಾರತದ ಅತಿ ಯಶಸ್ವಿ ಮಹಿಳಾ ಉದ್ಯಮಿಗಳು ಮತ್ತವರ ಶ್ರೀಮಂತಿಕೆ

ಕರುನಾಡಿನಲ್ಲಿ ಮಹಿಳೆಯರು ರಾಜಕೀಯದ ಕಲ್ಲು ಮುಳ್ಳಿನ ಹಾದಿಯಲ್ಲಿ ತೊಡರಿದರೂ ಬೇರೆ ಕ್ಷೇತ್ರಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವುದು ಸುಳ್ಳಲ್ಲ. ವೃತ್ತಿಪರ ಕ್ಷೇತ್ರಗಳಲ್ಲಿ ಈಗ ಹೆಚ್ಚೆಚ್ಚು ಮಹಿಳೆಯರು ಬೆಳೆಯುತ್ತಿದ್ದಾರೆ. ಬಹಳಷ್ಟು ಕನ್ನಡತಿಯರು ಉದ್ದಿಮೆದಾರರಾಗಿದ್ದಾರೆ. ಪರಿಸರ ರಕ್ಷಣೆ ಇತ್ಯಾದಿ ಸಾಮಾಜಿಕ ಹೋರಾಟಗಳಲ್ಲಿ ಹೆಚ್ಚು ಮಹಿಳೆಯರು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ, ರಾಜಕೀಯ ಎನ್ನುವುದು ಬಹಳಷ್ಟು ಮಹಿಳಾ ಆಕಾಂಕ್ಷಿಗಳಿಗೆ ಗಗನ ಕುಸುಮದಂತಾಗಿದೆ.

ದೇಶದ ಸಂಸತ್ ಮತ್ತು ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂಬ ಕೂಗು ಬಹಳ ವರ್ಷಗಳಿಂದ ಇದೆ. ಇದು ಶಾಸನವಾಗಿ ಜಾರಿಯಾದರೆ ಮಾತ್ರ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ವಿಧಾನಸಭೆಯ ಸೀಟುಗಳಲ್ಲಿ ಕೂರುವುದನ್ನು ನೋಡಿ ಕನ್ನಡಿಗರು ಕಣ್ತುಂಬಿಸಿಕೊಳ್ಳಬಹುದು.

(ಗಮನಿಸಿ: ಈ ಮೇಲಿನ ಲೇಖನವನ್ನು ನ್ಯೂಸ್9 ಡಿಜಿಟಲ್​ನ ಸಂಪಾದಕ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಕೆವಿ ರಮೇಶ್ ಬರೆದ ಇಂಗ್ಲೀಷ್ ಲೇಖನದಲ್ಲಿನ ಅಂಶಗಳನ್ನು ಸಂಕ್ಷೇಪಿಸಿ ಪ್ರಸ್ತುತಪಡಿಸಲಾಗಿದೆ)

ಇನ್ನಷ್ಟು ಮಹಿಳಾ ದಿನದ ಸುದ್ದಿ ಮತ್ತು ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು