Copyright Explainer: ಕೃತಿಸ್ವಾಮ್ಯ ಕಾಯ್ದೆ ಉಲ್ಲಂಘಿಸಿದ ಕಾಂಗ್ರೆಸ್ ಟ್ವಿಟರ್​ ಖಾತೆಗೆ ನಿರ್ಬಂಧ; ಇಲ್ಲಿದೆ ಕಾಪಿರೈಟ್ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ

ಕೃತಿಸ್ವಾಮ್ಯ ಕಾಯ್ದೆಯು ಯಾವೆಲ್ಲಾ ಅಂಶಗಳನ್ನು ಒಳಗೊಳ್ಳುತ್ತದೆ? ಯಾವ ಸಂದರ್ಭದಲ್ಲಿ ಕೃತಿಸ್ವಾಮ್ಯದ ಉಲ್ಲಂಘನೆಯಾಗುತ್ತದೆ? ಯಾವ ರೀತಿಯ ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Important Highlight‌
Copyright Explainer: ಕೃತಿಸ್ವಾಮ್ಯ ಕಾಯ್ದೆ ಉಲ್ಲಂಘಿಸಿದ ಕಾಂಗ್ರೆಸ್ ಟ್ವಿಟರ್​ ಖಾತೆಗೆ ನಿರ್ಬಂಧ; ಇಲ್ಲಿದೆ ಕಾಪಿರೈಟ್ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ
ರಾಹುಲ್ ಗಾಂಧಿಯನ್ನು ಕಾಪಿರೈಟ್ ಪ್ರಕರಣದಲ್ಲಿ ಪ್ರತಿವಾದಿಯಾಗಿಸಲಾಗಿದೆ.
Follow us
TV9 Digital Desk
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 08, 2022 | 2:15 PM

ರಾಹುಲ್ ಗಾಂಧಿ (Rahul Gandhi) ನಡೆಸಿದ ಭಾರತ್ ಜೋಡೋ ಯಾತ್ರೆಯ (Bharth Jodo Yatra) ವಿಡಿಯೊಗೆ ಕೆಜಿಎಫ್ (KGF 2) ಸಿನಿಮಾದ ಹಾಡು ಬಳಸಿದ ಕಾರಣಕ್ಕೆ ಬೆಂಗಳೂರಿನ ನ್ಯಾಯಾಲಯವು ಕಾಂಗ್ರೆಸ್​ ಪಕ್ಷದ ಭಾರತ್ ಜೋಡೋ ಟ್ವಿಟರ್ ಅಕೌಂಟ್ ನಿರ್ಬಂಧಿಸಲು ಆದೇಶ ನೀಡಿದೆ. ದೇಶದ ಗಮನ ಸೆಳೆದ ಈ ಪ್ರಕರಣವು ಮತ್ತೆ ‘ಕೃತಿಸ್ವಾಮ್ಯ ಕಾಯ್ದೆ’ಯ (Copy Righat Act) ಬಗ್ಗೆ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿದೆ. ಕೃತಿಸ್ವಾಮ್ಯ ಕಾಯ್ದೆಯು ಯಾವೆಲ್ಲಾ ಅಂಶಗಳನ್ನು ಒಳಗೊಳ್ಳುತ್ತದೆ? ಯಾವ ಸಂದರ್ಭದಲ್ಲಿ ಕೃತಿಸ್ವಾಮ್ಯದ ಉಲ್ಲಂಘನೆಯಾಗುತ್ತದೆ? ಯಾವ ರೀತಿಯ ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ನ್ಯಾಯಾಲಯ ಏನು ಹೇಳಿತು?

ಬೆಂಗಳೂರಿನ 85ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲತಾಕುಮಾರಿ ಅವರು ಎಂಆರ್​ಟಿ ಮ್ಯೂಸಿಕ್ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ನಂತರ ಕೃತಿಸ್ವಾಮ್ಯ ಕಾಯ್ದೆ ಉಲ್ಲೇಖಿಸಿ ಆದೇಶ ನೀಡಿದರು. ಎಂಆರ್​ಟಿ ಕಂಪನಿಯು ಕೆಜಿಎಫ್-2 ಸಿನಿಮಾದ ಕಾಪಿರೈಟ್ ಹೊಂದಿದೆ.

‘ಅರ್ಜಿದಾರರು ಸಲ್ಲಿಸಿದ ಎರಡು ಸಿಡಿಗಳನ್ನು ಪರಿಶೀಲಿಸಿದೆವು. ಕಾಂಗ್ರೆಸ್ ಪಕ್ಷ, ಸುಪ್ರಿಯಾ ಶ್ರೀನಾಥೆ ಮತ್ತು ರಾಹುಲ್​ ಗಾಂಧಿ ಅವರ ವಿರುದ್ಧ ಸಲ್ಲಿಸಿದ್ದ ದೂರಿನ ಅನ್ವಯ ಈ ಪರಿಶೀಲನೆ ನಡೆಯಿತು. ಈ ವೇಳೆ ಅರ್ಜಿದಾರರು ಹೊಂದಿದ್ದ ಕೃತಿಸ್ವಾಮ್ಯವನ್ನು ಉಲ್ಲಂಘಿಸಿರುವುದು ಮನವರಿಕೆಯಾಯಿತು. ಅನಧಿಕೃತವಾಗಿ ಮತ್ತು ಅಕ್ರಮವಾಗಿ ಕೆಜಿಎಫ್-2 ಸಿನಿಮಾದ ಹಾಡು ಹಾಗೂ ಸಂಗೀತವನ್ನು ಬಳಸಲಾಗಿದೆ. ಹಾಡು, ಸಂಗೀತಕ್ಕೆ ತಮ್ಮ ಲೊಗೊ ಹಾಗೂ ವಿಡಿಯೊವನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಐಟಿ ಕಾಯ್ದೆಯ 79ನೇ ಸೆಕ್ಷನ್​ನ ಉಲ್ಲಂಘನೆಯಾಗಿದೆ. ಈ ಪ್ರಕರಣದ 4ನೇ ಪ್ರತಿವಾದಿಯಾಗಿರುವ ಟ್ವಿಟರ್ ಕಂಪನಿಯು ತಕ್ಷಣ ಈ ವಿಡಿಯೊವನ್ನು ತೆಗೆದುಹಾಕಬೇಕು. ಕಾಂಗ್ರೆಸ್ ಪಕ್ಷ ಹಾಗೂ ಭಾರತ್ ಜೋಡೊ ಅಕೌಂಟ್​ಗಳನ್ನು ನಿರ್ಬಂಧಿಸಬೇಕು’ ಎಂದು ನ್ಯಾಯಾಯವು ಆದೇಶಿಸಿತ್ತು.

ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಪ್ರತಿವಾದಿಗಳು (ಕಾಂಗ್ರೆಸ್ ಮತ್ತು ಇತರರು) ತಪ್ಪು ಮಾಡಿದಂತೆ ಕಂಡುಬರುತ್ತದೆ. ಇದು ದೃಢಪಟ್ಟರೆ ಅರ್ಜಿದಾರರಿಗೆ ಹಾನಿಯುಂಟಾಗಿರುವುದು ಹಾಗೂ ನಕಲು ಮಾಡಿರುವುದು ಸಾಬೀತಾಗುತ್ತದೆ ಎಂದು ನ್ಯಾಯಾಲಯವು ಹೇಳಿತ್ತು. ಪ್ರತಿವಾದಿಗಳ ಅನುಪಸ್ಥಿತಿಯಲ್ಲಿಯೇ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿ, ವಿಚಾರಣೆ ಮುಂದೂಡಿತ್ತು.

ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಎಂಆರ್​ಟಿ ಮ್ಯೂಸಿಕ್ ಪರ ವಕೀಲ ನರಸಿಂಹನ್ ಸಂಪತ್, ‘ಭಾರತ ರಾಷ್ಟ್ರೀಯ ಕಾಂಗ್ರೆಸ್​ ಮತ್ತು ಪಕ್ಷದ ಪ್ರತಿನಿಧಿಗಳಾಗಿ ಅದರ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ನಾಯಕರಾದ ಸುಪ್ರಿಯಾ ಶ್ರೀನಾಥೆ ಹಾಗೂ ರಾಹುಲ್ ಗಾಂಧಿ ಅವರನ್ನು ಪ್ರತಿವಾದಿಗಳಾಗಿ ಕೃತಿಸ್ವಾಮ್ಯ ಉಲ್ಲಂಘನೆಯ ಅರ್ಜಿ ಸಲ್ಲಿಸಲಾಗಿತ್ತು’ ಎಂದು ತಿಳಿಸಿದ್ದರು.

ಕೃತಿಸ್ವಾಮ್ಯ (ಕಾಪಿರೈಟ್) ಎಂದರೆ ಏನು?

ಯಾವುದೇ ಕೃತಿ, ಉತ್ಪನ್ನಗಳ ಮೂಲ ನಿರ್ಮಾತೃ, ಲೇಖಕರ ಪರಿಶ್ರಮಕ್ಕೆ ಮನ್ನಣೆ ಒದಗಿಸುವ ಉದ್ದೇಶದಿಂದ ಜಾರಿಗೆ ತಂದ ಕಾನೂನು. ಇದರಲ್ಲಿ ಮೂಲ ವಿಚಾರಗಳಿಗಿಂತಲೂ ಅವುಗಳ ವೈಚಾರಿಕ ಅಭಿವ್ಯಕ್ತಿಯನ್ನು ಸಂರಕ್ಷಿಸಲು ಹೆಚ್ಚು ಒತ್ತು ನೀಡಲಾಗಿದೆ (Copyright law protects expressions of ideas rather than ideas themselves). ಇದರಲ್ಲಿ ಮೂಲ ನಿರ್ಮಾತೃ ಅಥವಾ ಲೇಖಕರ ಕೃತಿಗಳು ಎಂದರೆ ಅದು ಕಂಪ್ಯೂಟರ್ ಪ್ರೋಗ್ರಾಮ್, ದತ್ತಾಂಶಗಳ ವಿಶ್ಲೇಷಣೆ, ಕೋಡ್​ಗಳು, ಯೋಜನೆಗಳು ಸೇರಿದಂತೆ ಬಹುದೊಡ್ಡ ಪಟ್ಟಿ ಸೇರುತ್ತದೆ. ನಾಟಕ, ಸಿನಿಮಾ, ಸಂಗೀತ ಮತ್ತು ಇತರ ಸೃಜನಶೀಲ ಅಭಿವ್ಯಕ್ತಿಯನ್ನೂ ಇದು ಒಳಗೊಳ್ಳುತ್ತದೆ. ಈ ಕುರಿತು ಕೃತಿಸ್ವಾಮ್ಯ ಕಾಯ್ದೆ, 1975ರ 13ನೇ ಸೆಕ್ಷನ್ ವಿಸ್ತೃತ ವಿವರಣೆ ಒದಗಿಸುತ್ತದೆ.

ಯಾವೆಲ್ಲಾ ಹಕ್ಕುಗಳನ್ನು ಇದು ಒಳಗೊಳ್ಳುತ್ತದೆ?

ಕೃತಿಸ್ವಾಮ್ಯ ಹೊಂದಿರುವವರಿಗೆ ಯಾವೆಲ್ಲಾ ಹಕ್ಕು ಇರುತ್ತದೆ ಎನ್ನುವುದನ್ನು ಇದೇ ಕಾಯ್ದೆಯ 14ನೇ ಸೆಕ್ಷನ್ ವಿವರಿಸುತ್ತದೆ. ಇದರಲ್ಲಿ ಅಳವಡಿಕೆಯ ಹಕ್ಕು (ರೈಟ್ ಟು ಅಡಾಪ್ಟ್), ಮರುಸೃಷ್ಟಿಯ ಹಕ್ಕು (ರೈಟ್​ ಟು ರಿಪ್ರೊಡ್ಯೂಸ್), ಪ್ರಕಟಿಸುವ ಹಕ್ಕು (ರೈಟ್​ ಟು ಪಬ್ಲಿಷ್), ಅನುವಾದಿಸುವ ಹಕ್ಕು (ರೈಟ್​ ಟು ಟ್ರಾನ್ಸ್​ಲೇಟ್), ಸಾರ್ವಜನಿಕರಿಗೆ ತಿಳಿಸುವ ಹಕ್ಕು (ರೈಟ್​ ಟು ಕಮ್ಯುನಿಕೇಟ್​ ಟು ದಿ ಪಬ್ಲಿಕ್) ಸೇರಿರುತ್ತದೆ.

ಕೃತಿಸ್ವಾಮ್ಯ ಕಾಯ್ದೆಯ ಅಡಿಯಲ್ಲಿ ಲೇಖಕ ಅಥವಾ ಕ್ರಿಯೇಟರ್ ಯಾವುದೇ ಕೃತಿಯ ಮೊದಲ ಹಕ್ಕುದಾರನಾಗಿರುತ್ತಾನೆ. ಕೆಲವೊಮ್ಮೆ ಉದ್ಯೋಗಿಗಳು ಸಹ ಹಕ್ಕುಸ್ವಾಮ್ಯ ಪಡೆಯುತ್ತಾರೆ. ಆದರೆ ಇದು ಸಂದರ್ಭ ಮತ್ತು ಉದ್ಯೋಗ ನೀತಿಯನ್ನು ಅವಲಂಬಿಸಿರುತ್ತದೆ.

ಐಟಿ ಕಾಯ್ದೆ ಎಲ್ಲಿ ಅನ್ವಯವಾಗುತ್ತದೆ?

ಮಾಹಿತಿ ತಂತ್ರಜ್ಞಾನದ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದ ‘ಮಾಹಿತಿ ತಂತ್ರಜ್ಞಾನ ಕಾಯ್ದೆ, 2000’ (Information Technology Act of 2000) ಸೆಕ್ಷನ್ 79ರ ಅನ್ವಯ ಯಾವುದೇ ಮೂರನೇ ವ್ಯಕ್ತಿ ಮಾಡಿದ ಪೋಸ್ಟ್​ಗೆ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ಹೊಣೆಯಾಗಿಸುವಂತಿಲ್ಲ. ಸಾಮಾಜಿಕ ಮಾಧ್ಯಮ ಕಂಪನಿಗಳು ಇಂಥ ಮೆಸೇಜ್​ಗಳನ್ನು ಉದ್ದೇಶಪೂರ್ವಕವಾಗಿ ಪ್ರಸಾರ ಮಾಡದಿದ್ದರೆ, ಮಾರ್ಪಡಿಸದಿದ್ದರೆ ಮಾತ್ರ ಈ ವಿನಾಯ್ತಿಯು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಅನ್ವಯವಾಗುತ್ತದೆ.

ಒಂದು ವೇಳೆ ಸಮರ್ಪಕ ಮಾಹಿತಿ ಲಭ್ಯವಾದ ನಂತರವೂ, ಆಕ್ಷೇಪಗಳು ಸರಿಯಾದ ಕ್ರಮದಲ್ಲಿ ದಾಖಲಾದ ನಂತರವೂ, ಸರ್ಕಾರ ಅಥವಾ ನ್ಯಾಯಾಲಯಗಳು ಸೂಚಿಸಿದ ನಂತರವೂ ಕ್ರಮ ಜರುಗಿಸದಿದ್ದರೆ ಈ ಕಂಪನಿಗಳಿಗೆ ಕಾನೂನು ನೀಡಿರುವ ವಿನಾಯ್ತಿಯು ಅನ್ವಯ ಆಗುವುದಿಲ್ಲ ಎಂದು ಕಾಯ್ದೆಯು ಸ್ಪಷ್ಟಪಡಿಸುತ್ತದೆ. ಅಂಥ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ವಿಚಾರಣೆ ಎದುರಿಸಬೇಕಾಗುತ್ತದೆ.

Published On - 1:39 pm, Tue, 8 November 22

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು