ತಂದೆಗೆ ಹುದ್ದೆ ತ್ಯಾಗ ಮಾಡಿದ ಪುತ್ರ ಗಣೇಶ್: ಮಗನಿಂದಲೇ ಈ ಅಧಿಕಾರ ಸಿಕ್ಕಿದೆ ಎಂದು ಸಂತಸಗೊಂಡ ಪ್ರಕಾಶ್ ಹುಕ್ಕೇರಿ

| Updated By: ರಮೇಶ್ ಬಿ. ಜವಳಗೇರಾ

Updated on: Aug 15, 2023 | 12:29 PM

ಶಾಸಕ ಗಣೇಶ್ ಹುಕ್ಕೇರಿ ಅವರು ತಂದೆ ಪ್ರಕಾಶ್ ಹುಕ್ಕೇರಿಗಾಗಿ ಹುದ್ದೆ ತ್ಯಾಗ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ಹುಕ್ಕೇರಿ ಸಂತಸಗೊಂಡಿದ್ದು, ಮಗನಿಂದಲೇ ಈ ಅಧಿಕಾರ ಸಿಕ್ಕಿದೆ ಎಂದು ಹೇಳಿದ್ದಾರೆ.

ತಂದೆಗೆ ಹುದ್ದೆ ತ್ಯಾಗ ಮಾಡಿದ ಪುತ್ರ ಗಣೇಶ್: ಮಗನಿಂದಲೇ ಈ ಅಧಿಕಾರ ಸಿಕ್ಕಿದೆ ಎಂದು ಸಂತಸಗೊಂಡ ಪ್ರಕಾಶ್ ಹುಕ್ಕೇರಿ
ಪ್ರಕಾಶ್ ಹುಕ್ಕೇರಿ
Follow us on

ಬೆಳಗಾವಿ, (ಆಗಸ್ಟ್ 15): ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ (prakash hukkeri) ಅವರನ್ನು ದೆಹಲಿಯ ಕರ್ನಾಟಕದ ಪ್ರತಿನಿಧಿ-2 ಆಗಿ ನೇಮಕ ಮಾಡಲಾಗಿದೆ. ಪ್ರಕಾಶ್ ಹುಕ್ಕೇರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನದೊಂದಿಗೆ ನೇಮಕ ಮಾಡಲಾಗಿದೆ.  ಮುಂಬರು ಲೋಕಸಭಾ ಚುನಾವಣೆ ದೃಷ್ಟಿಯಿಂದ ಪ್ರಕಾಶ್ ಹುಕ್ಕೇರಿ ಅಥವಾ ಪುತ್ರ ಗಣೇಶ್ ಹುಕ್ಕೇರಿ ಇವರಿಬ್ಬರಲ್ಲಿ ಒಬ್ಬರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆದಿದ್ದವು. ಆದ್ರೆ, ಗಣೇಶ್ ಹುಕ್ಕೇರಿ ಅವರು ತಮ್ಮ ತಂದೆಗೆ ಕೊಟ್ಟ ಸ್ಥಾನಮಾನ ನೀಡಿರೆ ಓಕೆ ಎಂಂದು ನಾಯಕರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪುತ್ರನಿಗೆ ಬಿಟ್ಟು ತಂದೆಗೆ ಈ ಸ್ಥಾನಮಾನ ನೀಡಲಾಗಿದೆ. ಇನ್ನು ದೆಹಲಿಯ ಕರ್ನಾಟಕ ಪ್ರತಿನಿಧಿಯಾಗಿ ನೇಮಿಸಿದ್ದಕ್ಕೆ ಪ್ರಕಾಶ್ ಹುಕ್ಕೇರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಗನಿಂದಲೇ ಈ ಅಧಿಕಾರ ಸಿಕ್ಕಿದೆ ಎಂದ ಸಂತಸ ವ್ಯಕ್ತಪಡಿಸಿದರು.

ಒಳ್ಳೆಯ ಸ್ಥಾನಮಾನ ಸಿಕ್ಕಿದ್ದು, ಅವಕಾಶ ಮಾಡಿಕೊಟ್ಟ ನಾಯಕರಿಗೆ ಅಭಿನಂದನೆ. ನಾನು 8 ಬಾರಿ ಆಯ್ಕೆಯಾದರೂ ಎಂದೂ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ನಾನೇನೂ ಸಚಿವ ಸ್ಥಾನ ಬೇಡಿಲ್ಲ. ಈಗಲೂ ಇದೊಂದು ವಿಶೇಷ ಪ್ರಕರಣ ಅಂತಾ ತಿಳಿದಿದ್ದೇನೆ. ತಂದೆಯಾದವ ಮಗನಿಗೆ ಅಧಿಕಾರ ನೀಡುವ ವ್ಯವಸ್ಥೆ ಇದೆ. ಆದ್ರೆ ಮಗ ಇವತ್ತು ಅಪ್ಪನಿಗೆ ಅಧಿಕಾರ ಕೊಡುವ ವ್ಯವಸ್ಥೆ ಮಾಡಿದ್ದಾನೆ. ಇದೊಂದು ವಿಶೇಷ ಅಂತಾ ನಾನು ತಿಳಿದುಕೊಂಡಿದ್ದೇನೆ ಎಂದರು.

ಇದನ್ನೂ ಓದಿ: ದೆಹಲಿಯ ಕರ್ನಾಟಕ ಪ್ರತಿನಿಧಿ ಆಗಿ ಪ್ರಕಾಶ್ ಹುಕ್ಕೇರಿ ನೇಮಕ: ಸಂಪುಟ ದರ್ಜೆ ಸಚಿವ ಸ್ಥಾನಮಾನ

ಗಣೇಶ ಹುಕ್ಕೇರಿ ದೆಹಲಿಗೆ ಹೋಗಿ, ಸಿಎಂ, ಡಿಸಿಎಂಗೆ ಭೇಟಿ ಮಾಡಿ ತನ್ನ ಬದಲಾಗಿ ನನಗೆ ಸ್ಥಾನ ಮಾನ ನೀಡುವಂತೆ ಮನವಿ ಮಾಡಿದ್ದಾರೆ. ಅದರ ಫಲವಾಗಿ ಇವತ್ತು ಸ್ಥಾನಮಾನ ಸಿಕ್ಕಿದೆ . ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಿಗೆ ಇರುವ ಸಮಸ್ಯೆ ಬಗೆಹರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುವೆ ಎಂದು ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:28 pm, Tue, 15 August 23