ವಿಜಯಪುರ: ಇನ್ನು ಆರು ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಪತನ; ಬಸನಗೌಡ ಪಾಟೀಲ್​ ಯತ್ನಾಳ್​ ಭವಿಷ್ಯ

136 ಕಾಂಗ್ರೆಸ್ ಶಾಸಕರ ಪೈಕಿ 90 ಕ್ಕೂ ಅಧಿಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇರುತ್ತದೆ ಎಂದು ಸಚಿವ ಎಂಬಿ ಪಾಟೀಲ್ ಭಾವಿಸಿದ್ದಾರೆ. ಆದರೆ ನಿಮ್ಮ ಸರ್ಕಾರ ಲೋಕಸಭಾ ಚುನಾವಣೆಯೊಳಗೆ ಅಥವಾ ಲೋಕಸಭಾ ಚುನಾವಣೆಯ ಬಳಿಕ ಪತನ‌‌ವಾಗುವುದು ಖಚಿತ. ನೀವು ಮನಗೆ ಹೋಗುವುದು ನಿಶ್ಚಿತ ಎಂದು ಬಿಜೆಪಿ ಶಾಸಕ ಬಸನಗೌಡ ಭವಿಷ್ಯ ನುಡಿದರು.

Important Highlight‌
ವಿಜಯಪುರ: ಇನ್ನು ಆರು ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಪತನ; ಬಸನಗೌಡ ಪಾಟೀಲ್​ ಯತ್ನಾಳ್​ ಭವಿಷ್ಯ
ಬಸನಗೌಡ ಪಾಟೀಲ್ ಯತ್ನಾಳ್
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ವಿವೇಕ ಬಿರಾದಾರ

Updated on:Aug 14, 2023 | 3:05 PM

ವಿಜಯಪುರ (ಆ.14): 136 ಕಾಂಗ್ರೆಸ್ (Congress)​ ಶಾಸಕರ ಪೈಕಿ 90 ಕ್ಕೂ ಅಧಿಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಇದು ಸರ್ಕಾರದ ‌ಮೂರು ತಿಂಗಳ ಹಣೆ ಬರಹ. ಈ ಆಧಾರದ ಮೇಲೆ ಆರು ತಿಂಗಳಲ್ಲಿ ಸರ್ಕಾರ ಪತನವಾಗುತ್ತದೆ. ಈ ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇರುತ್ತದೆ ಎಂದು ಸಚಿವ ಎಂಬಿ ಪಾಟೀಲ್ (MB Patil) ಭಾವಿಸಿದ್ದಾರೆ. ಆದರೆ ನಿಮ್ಮ ಸರ್ಕಾರ ಲೋಕಸಭಾ ಚುನಾವಣೆಯೊಳಗೆ ಅಥವಾ ಲೋಕಸಭಾ ಚುನಾವಣೆಯ ಬಳಿಕ ಪತನ‌‌ವಾಗುವುದು ಖಚಿತ. ನೀವು ಮನಗೆ ಹೋಗುವುದು ನಿಶ್ಚಿತ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ (Basangouda Patil Yatnal) ಭವಿಷ್ಯ ನುಡಿದರು. ವಿಜಯಪುರ ಕ್ಷೇತ್ರದ ಕಾರ್ಯಕರ್ತರಿಗೆ ನಿನ್ನೆ (ಆ.13) ರಂದು ಸಂಜೆ ಆಯೋಜಿಸಿದ್ದ ಅಭಿನಂದನಾ ಹಾಗೂ ಔತಣಕೂಟ ಸಭೆಯಲ್ಲಿ ಮಾತನಾಡಿದ ಅವರು ನಿಮ್ಮ ಉಚಿತ ಯೋಜನೆಗಳಿಗೆ ಜನರು ಉಚಿತ ಮತ ಹಾಕಿಲ್ಲ, ಆದ್ದರಿಂದ ನಿಮ್ಮ ಪತನ ಖಚಿತ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆ, ಐದು ಗ್ಯಾರಂಟಿಗಳ ಮೋಸತನ, ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಶಾಸಕರ ಅಸಮಾಧಾನ‌ಕ್ಕೆ ಕಾರಣವಾಗಿದೆ. ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಏನು ಕೇಳಿದರೂ ಗ್ಯಾರಂಟಿಗಳ ನೆಪ ಹೇಳುತ್ತಿದ್ದೀರಿ. ಹೀಗಾಗಿ ಸರ್ಕಾರ ತನ್ನಿಂದ‌‌ ತಾನೇ ಪತನವಾಗುತ್ತದೆ. ಇದಕ್ಕೆ ಬಿಜೆಪಿಯರು, ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ಪ್ರಯತ್ನ ಬೇಕಿಲ್ಲ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ವ್ಯಾಪಕವಾಗಿದೆ. ಕಾಂಗ್ರೆಸ್ ಏಜೆಂಟ್ ಕೆಂಪಣ್ಣ ಅವರನ್ನು ಬಿಟ್ಟು ಉಳಿದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳುತ್ತಿದ್ದಾರೆ. ನೀವು ಎಲ್ಲ ಗುತ್ತಿಗೆದಾರರ ಬಳಿ 15 ಪರ್ಸೆಂಟೇಜ್​ ಕಮಿಷನ್ ಕೇಳಿದ್ದೀರಿ ಎಂದು ಡಿಸಿಎಂ ಡಿಕೆ ಶಿವಕುಮಾರಗೆ ಓರ್ವ ಗುತ್ತಿಗೆದಾರ ಸವಾಲು ಹಾಕಿದ್ದಾರೆ. ನೀವೇ ನಂಬಿದ ನೊಣವಿನಕೆರೆ ಗುರುಗಳ ಹೆಸರಿನಲ್ಲಿ ಪ್ರಮಾಣ ಮಾಡಿ ಎಂದು ಸವಾಲು ಹಾಕಿದ್ದಾರೆ. ಈ ಕುರಿತು ಡಿಕೆ ಶಿವಕುಮಾರ್​ ಉತ್ತರ ಕೊಟ್ಟಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರದಿದ್ದರೆ ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಶೋಚನೀಯವಾಗಿರುತಿತ್ತು: ಬಸನಗೌಡ ಯತ್ನಾಳ್

ಈ ಹಿಂದೆ ಮಾಜಿ ಸಚಿವ ಈಶ್ವರಪ್ಪ ಅವರ ಮೇಲೆ ಇಂಥ ಆರೋಪ ಬಂದಿತ್ತು. ಆ ಆರೋಪ ಸಾಬೀತಾಗದಿದ್ದರೂ ಅವರ ರಾಜೀನಾಮೆ ತೆಗೆದುಕೊಂಡರು. ಈ ತಾಕತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಇದೆಯಾ ? ಡಿಕೆ ಶಿವಕುಮಾರ್​ ಮೇಲೆ ಗಂಭೀರ ಆರೋಪವನ್ನು ಗುತ್ತಿಗೆದಾರರು ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಡಿಕೆ ಶಿವಕುಮಾರ್​ ಅವರ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದರು.

ಬೆಂಗಳೂರು ಮಹಾನಗರದ ಮೇಲೆ ಸಿದ್ದರಾಮಯ್ಯ ಅವರ ಹಿಡಿತದಲ್ಲಿಲ್ಲ. ಬೆಂಗಳೂರಿನ ಎಲ್ಲ ಶಾಸಕರ ಬಾಯಿ ಬಂದ್​ ಮಾಡಿ ಡಿಕೆ ಶಿವಕುಮಾರ್​ ಹಗಲು ದರೋಡೆ ಮಾಡುತ್ತಿದ್ದಾರೆ. ಆರೋಪ ನಾನು ಮಾಡುತ್ತಿಲ್ಲ ಗುತ್ತಿಗೆದಾರರು ಮಾಡುತ್ತಿದ್ದಾರೆ. ಈ ವಿಚಾರದಲ್ಲಿಯೂ ಸಹ ಸಿಎಂ ಅಸಹಾಯಕತೆಯನ್ನು ತೋರಿಸುತ್ತಿದ್ದಾರೆ. ಸರ್ಕಾರದಲ್ಲಿನ ಭ್ರಷ್ಟಾಚಾರದ ಕುರಿತು ಅವರದೇ ಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಆರೋಪ ಮಾಡಿದ್ದಾರೆ ಎಂದು ತಿಳಿಸಿದರು.

ಇನ್ನು ವಿಜಯಪುರ ಮಹಾನಗರ ಪಾಲಿಕೆಗೆ ಅರ್ಹತೆ ಇಲ್ಲದ ವ್ಯಕ್ತಿಯನ್ನು ನೇಮಿಸಿದ್ದಾರೆ. ಈ ಮೂಲಕ ನಗರದಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳನ್ನು ತಡೆಯಲಾಗತ್ತಿದೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಜಿಲ್ಲೆಯಲ್ಲಿ ಕೆಟ್ಟ ಚಾಳಿಯನ್ನು ಮುಂದುವರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ಬಳಿಕ ಸಿಎಂ ಆಗಲು ಡಿಕೆ ಶಿವಕುಮಾರ್​ ರೆಡಿ

ಗ್ಯಾರಂಟಿ ಯೋಜನೆಯಿಂದಾಗಿ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಹಣ ಸಂಪಾದನೆಗಾಗಿ ಪೈಪೋಟಿ ನಡೆಸಿದ್ದಾರೆ. ಕೊನೆ ಚುನಾವಣೆ ಅಂತ ಹೇಳಿ ಸಿದ್ದರಾಮಯ್ಯ ದುಡ್ಡು ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಸಿಎಂ ಆಗಲು ಡಿಕೆ ಶಿವಕುಮಾರ್​ ಹೊರಟಿದ್ದಾರೆ. ಇವರಿಬ್ಬರ ಮಧ್ಯೆ ನಮಗೇನು ಸಿಗುತ್ತಿಲ್ಲ ಅಂತ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಈಗ ಕೇಳಬೇಡಿ ಅಂತಿದ್ದಾರೆ. ಇನ್ನು ವಿಪಕ್ಷ ಶಾಸಕರಿಗೆ ಅನುದಾನ ಕೊಡೋದು ದೂರದ ಮಾತು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Mon, 14 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು