ವಿಜಯಪುರ,(ಆಗಸ್ಟ್ 18): ಸಿದ್ಧರಾಮಯ್ಯನವರನ್ನು (Siddaramaiah) ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ( DK Shivakumar) ರಾಜ್ಯದ ಸೂಪರ್ ಸಿಎಂ ಆಗಲಿದ್ದಾರೆ. ದೆಹಲಿಯಲ್ಲಿ ಡಿಕೆ ಶಿವಕುಮಾರ್ ಯಾರ್ಯಾರ ಮನೆಗೆ ತೆರಳಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯಿದೆ. ಸಿದ್ದರಾಮಯ್ಯರವರನ್ನು ಇಳಿಸುವುದಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ಎಲ್ಲಾ ಮಾಹಿತಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಇಂದು (ಆಗಸ್ಟ್ 18) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳಿಗೆ ಮಾತ್ರ ಎಲ್ಲಾ ಇಲಾಖೆಗಳ ಸಭೆಯನ್ನು ಕರೆಯಲು ಅವಕಾಶವಿರುತ್ತದೆ, ಉಪ ಮುಖ್ಯಮಂತ್ರಿಗೆ ಆ ಅಧಿಕಾರವಿರುವುದಿಲ್ಲ. ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಸುಮ್ಮನೆ ಕುಳಿತಿದ್ದಾರಷ್ಟೇ ಅವರದ್ದೇನು ನಡೆಯುವುದಿಲ್ಲ ಎಂದಿದ್ದಾರೆ. ಆದ್ರೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯರವರಿಗೇ ಹೆಚ್ಚಿನ ಶಾಸಕರ ಬೆಂಬಲವಿದೆ. ಆದ್ರೆ, ಡಿಕೆ ಶಿವಕುಮಾರ್ಗೆ ಶಾಸಕ ಬೆಂಬಲವಿರುವುದು ಕೇವಲ 15 ಮಾತ್ರ. ಪಕ್ಷದಲ್ಲಿ ಸಿದ್ದರಾಮಯ್ಯರವರ ವರ್ಚಸ್ಸನ್ನು ಕಡಿಮೆ ಮಾಡುವ ಉದ್ದೇಶದಿಂದ ಪಕ್ಷಾಂತರದ ಹೊಸ ಗೇಮ್ ಆಡುತ್ತಿದ್ದಾರೆ, ಇದು ಸಿಎಂ ಪಟ್ಟವೇರಲು ಡಿಕೆ ಶಿವಕುಮಾರ್ ಪ್ಲಾನ್ ಎಂದು ಪಕ್ಷಾಂತರಕ್ಕೆ ಹೊಸ ತಿರುವನ್ನು ನೀಡಿದ್ದಾರೆ.
ಇದನ್ನೂ ಓದಿ: ಆಪರೇಷನ್ ಹಸ್ತ: ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಡಿಕೆ ಶಿವಕುಮಾರ್
ಸಿದ್ದರಾಮಯ್ಯ ವಿರುದ್ದ ಇರುವ ಶಾಸಕರನ್ನ ಪಕ್ಷಕ್ಕೆ ವಾಪಸ್ ಕರೆಸಿ ತಮ್ಮ ಶಾಸಕಾಂಗ ಬೆಂಬಲವನ್ನ 30 ರಿಂದ 40 ಹೆಚ್ಚಿಸುವ ಗುರಿ ಹೊಂದಿದ್ದಾರೆ. ಈ ಬೆಳವಣಿಗೆಯ ಕುರಿತು ಸಿದ್ದರಾಮಯ್ಯರವರಿಗೆ ನೋವಿದೆ. ಆದರೆ ಯಾವುದೇ ಕಾರಣಕ್ಕೂ ಅವರು ಸಿಎಂ ಹುದ್ದೆಯನ್ನು ಬಿಟ್ಟುಕೊಡುವುದಿಲ್ಲ. 5 ವರ್ಷದ ಸರ್ಕಾರವಾಗಲಿ 5 ತಿಂಗಳ ಸರ್ಕಾರವಾಗಲಿ ಸಿದ್ದರಾಮಯ್ಯರವರೇ ಕೊನೆಯ ಮುಖ್ಯಮಂತ್ರಿಯಾಗಿರುತ್ತಾರೆ. ಭವಿಷ್ಯದಲ್ಲಿ ಡಿಕೆ ಶಿವಕುಮಾರ್ ರವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಭಾಗ್ಯವಿಲ್ಲ ಎಂದು ಭವಿಷ್ಯ ನುಡಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ