ವಿಜಯಪುರ: ಬಿಜೆಪಿಯಿಂದ 13-14 ಮಾಜಿ ಶಾಸಕರು ಕಾಂಗ್ರೆಸ್​ಗೆ ಬರುತ್ತಾರೆ: ವಿನಯ್​ ಕುಲಕರ್ಣಿ

| Updated By: ವಿವೇಕ ಬಿರಾದಾರ

Updated on: Aug 19, 2023 | 2:47 PM

ಕಾಂಗ್ರೆಸ್​-ಜೆಡಿಎಸ್​ ಸಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದ 17 ಜನ ಶಾಸಕರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಮಾತನಾಡಿ ಬಿಜೆಪಿಯಲ್ಲಿನ ಹಲವು ನಾಯಕರು ಬೇಜಾರಿನಲ್ಲಿ ಇರುವುದು ನಿಜ. 13 ರಿಂದ 14 ಬಿಜೆಪಿ ಮಾಜಿ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಹೇಳಿದರು.

ವಿಜಯಪುರ: ಬಿಜೆಪಿಯಿಂದ 13-14 ಮಾಜಿ ಶಾಸಕರು ಕಾಂಗ್ರೆಸ್​ಗೆ ಬರುತ್ತಾರೆ: ವಿನಯ್​ ಕುಲಕರ್ಣಿ
ಶಾಸಕ ವಿನಯ್​ ಕುಲಕರ್ಣಿ
Follow us on

ವಿಜಯಪುರ: ಕಾಂಗ್ರೆಸ್​-ಜೆಡಿಎಸ್​ ಸಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದ 17 ಜನ ಶಾಸಕರು ಮತ್ತೆ ಕಾಂಗ್ರೆಸ್ (Congress) ಸೇರಲಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ (Vinay Kulakarni) ಮಾತನಾಡಿ ಬಿಜೆಪಿಯಲ್ಲಿನ (BJP) ಹಲವು ನಾಯಕರು ಬೇಜಾರಿನಲ್ಲಿ ಇರುವುದು ನಿಜ. ಹಾಲಿ ಶಾಸಕರ ಜೊತೆಗೆ, ಕೆಲ ಮಾಜಿ ಶಾಸಕರು ಅಸಮಧಾನಗೊಂಡಿದ್ದಾರೆ. ಕಳೆದ ಬಾರಿ ಸೋತ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಸಾಕಷ್ಟು ಮಂದಿ ಬಿಜೆಪಿಯಿಂದ ಬರುವ ಸಂಭವಿದೆ. 13 ರಿಂದ 14 ಬಿಜೆಪಿ ಮಾಜಿ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ. ಹಾಲಿ ಶಾಸಕರ ಬಗ್ಗೆ ಮಾಹಿತಿ ನನಗೆ ಇಲ್ಲ ಎಂದು ಹೇಳಿದರು.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಮಾಡಿದ ಅವರು ಸೋತ ಮಾಜಿ ಶಾಸಕರು ನಮ್ಮ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮೆಚ್ಚಿಕೊಂಡು ಹಲವರು ಬರುತ್ತಿದ್ದಾರೆ. ಕಾಂಗ್ರೆಸ್ ಸೇರಲು ತುದಿಗಾಲು ಮೇಲೆ ನಿಂತಿದ್ದಾರೆ. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾಂಗ್ರೆಸ್​ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ನಾವೇನು ಅವರಿಗೆ ಎದುರಾಳಿ ಅಲ್ಲ, ಮುನೇನಕೊಪ್ಪ ಅವರಿಗೆ ರಾಜಕೀಯದಲ್ಲಿ ಅನುಭವ ಇದೆ. ಮುನೇನಕೊಪ್ಪ ಬಹಳಷ್ಟು ಅನುಭವಸ್ಥರು ಇದ್ದಾರೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ನತ್ತ ಮುಖ ಮಾಡಿದ್ರಾ ಶಾಸಕ ಎಸ್​ಟಿ ಸೋಮಶೇಖರ್? ಕಟೀಲ್, ಸಿಟಿ ರವಿ ಮೇಲಿಂದ ಮೇಲೆ ಕಾಲ್

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯರನ್ನು ಇಳಿಸಲು ಡಿಕೆ ಶಿವಕುಮಾರ್​ ಕುತಂತ್ರ ಮಾಡುತ್ತಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಸಿದ್ಧರಾಮಯ್ಯ ಅವರನ್ನು ಯಾರೂ ವೀಕ್ ಮಾಡಲು ಆಗಲ್ಲ. ಅವರು ವೀಕ್ ಆಗಲ್ಲ, ಸಿದ್ಧರಾಮಯ್ಯ ಅವರು ಗಟ್ಟಿ ಇದ್ದಾರೆ, ಗಟ್ಟಿಯಾಗೆ ಇರುತ್ತಾರೆ. ಡಿಕೆ ಶಿವಕುಮಾರ್​​ ಅವರು ಸಿದ್ಧರಾಮಯ್ಯ ಅವರನ್ನು ಇಳಿಸಲು ಯಾರ ಬಳಿಯೂ ಹೋಗಿಲ್ಲ. ಇದು ಸುಳ್ಳು ಹೇಳಿಕೆ ಎಂದು ಟಾಂಗ್ ಕೊಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ