ಚೆಸ್ ವಿಶ್ವಕಪ್ನಲ್ಲಿ ಫೈನಲ್ ಆಡುವ ಮೂಲಕ ಆರ್. ಪ್ರಜ್ಞಾನಂದ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ತಮ್ಮ 18ನೇ ವಯಸ್ಸಿನಲ್ಲಿ ಫೈನಲ್ಗೇರಿರುವ ಪ್ರಜ್ಞಾನಂದ ವಿಶ್ವ ಚೆಸ್ ಚಾಂಪಿಯನ್ಶಿಪ್ನ ಅಂತಿಮ ಸುತ್ತಿನಲ್ಲಿ ಕಾಣಿಸಿಕೊಂಡ ಭಾರತದ ಅತ್ಯಂತ ಕಿರಿಯ ಚೆಸ್ ಸ್ಪರ್ಧಿ ಎನಿಸಿಕೊಂಡಿದ್ದಾರೆ.
ಆರ್. ಪ್ರಜ್ಞಾನಂದ ಅಲ್ಲದೆ ಇನ್ನೂ ಅನೇಕ ಭಾರತೀಯ ಕ್ರೀಡಾತಾರೆಯರು ತಮ್ಮ ಕಿರಿವಯಸ್ಸಿನಲ್ಲೇ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪಾತಾಕೆ ಹಾರಿಸಿದ್ದರು. ಹೀಗೆ 18 ವರ್ಷಕ್ಕೂ ಮೊದಲೇ ತಮ್ಮ ಸಾಧನೆಯ ಮೂಲಕ ಸಂಚಲನ ಸೃಷ್ಟಿಸಿದ 5 ಭಾರತೀಯರು ಕಿರು ಪರಿಚಯ ಇಲ್ಲಿದೆ.
ಮನು ಭಾಕರ್: ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಶೂಟಿಂಗ್ನಲ್ಲಿ ಚಿನ್ನ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಮನು ಭಾಕರ್ ಹೆಸರಿನಲ್ಲಿದೆ. 2018 ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿ 10 ಮೀ ಏರ್ ಪಿಸ್ತೂಲ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು.
ಜೆರೆಮಿ ಲಾಲ್ರಿನ್ನುಂಗಾ: 2018 ರಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ 62 ಕೆಜಿ ವಿಭಾಗದಲ್ಲಿ ಒಟ್ಟು 274 ಕೆಜಿ (124 ಕೆಜಿ +150 ಕೆಜಿ) ತೂಕವನ್ನು ಎತ್ತುವ ಮೂಲಕ 16 ವರ್ಷದ ಜೆರೆಮಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.
ಮೆಹುಲಿ ಘೋಷ್: 2018 ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಸ್ಪರ್ಧಿಸಿದ್ದ 17 ನೇ ವಯಸ್ಸಿನ ಮೆಹುಲಿ ಘೋಷ್ 10 ಮೀ ಏರ್ ರೈಫಲ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು.
ಹಿಮಾ ದಾಸ್: 2018 ರಲ್ಲಿ ನಡೆದ ವಿಶ್ವ U20 ಚಾಂಪಿಯನ್‌ಶಿಪ್‌ನಲ್ಲಿ ಹಿಮಾ ದಾಸ್ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು. ಅಂದು 18 ವರ್ಷದವರಾಗಿದ್ದ ಹಿಮಾ ದಾಸ್ ಮಹಿಳೆಯರ 400 ಮೀಟರ್ ಓಟವನ್ನು 51.46 ಸೆಕೆಂಡ್‌ಗಳಲ್ಲಿ ಕ್ರಮಿಸಿ ಈ ಸಾಧನೆ ಮಾಡಿದ್ದರು.
ಶಫಾಲಿ ವರ್ಮಾ: 2019ರ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ವರ್ಲ್ಡ್ಕಪ್ ಆಡಿದ ಅತ್ಯಂತ ಕಿರಿಯ ಕ್ರಿಕೆಟರ್ ಎಂಬ ವಿಶ್ವ ದಾಖಲೆ ಶಫಾಲಿ ವರ್ಮಾ ನಿರ್ಮಿಸಿದ್ದಾರೆ. ತಮ್ಮ 15ನೇ ವಯಸ್ಸಿನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನ ಅಲಂಕರಿಸಿದ ಅತ್ಯಂತ ಕಿರಿಯ ಭಾರತೀಯ ಕ್ರಿಕೆಟರ್ ಎಂಬ ದಾಖಲೆ ಕೂಡ ಶಫಾಲಿ ವರ್ಮಾ ಹೆಸರಿನಲ್ಲಿದೆ.
Published On - 9:11 pm, Thu, 24 August 23