ಕೇವಲ 11,999 ರೂ.: ಭಾರತದಲ್ಲೀಗ ಮಾರಾಟ ಕಾಣುತ್ತಿದೆ ಟೆಕ್ನೋ ಪೋವಾ 5, ಪೋವಾ 5 ಪ್ರೊ ಸ್ಮಾರ್ಟ್​ಫೋನ್

|

Updated on: Aug 22, 2023 | 3:12 PM

Tecno POVA 5 Pro, POVA 5 First Sale: ಪೋವಾ 5 ಮತ್ತು ಟೆಕ್ನೋ ಪೋವಾ 5 ಪ್ರೊ ಈ ಎರಡೂ ಫೋನ್‌ಗಳು ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿದೆ. ಟೆಕ್ನೋ ಪೋವಾ 5 ಅಂಬರ್ ಗೋಲ್ಡ್, ಹರಿಕನ್ ಬ್ಲೂ ಮತ್ತು ಮೆಚಾ ಬ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಬರುತ್ತದೆ.

1 / 8
ಪ್ರಸಿದ್ಧ ಟೆಕ್ನೋ ಕಂಪನಿ ಇತ್ತೀಚೆಗಷ್ಟೆ ಭಾರತದಲ್ಲಿ ಟೆಕ್ನೋ ಪೋವಾ 5 ಮತ್ತು ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್​ಫೋನ್​ಗಳನ್ನು ಅನಾವರಣ ಮಾಡಿತ್ತು. ಈ ಫೋನ್ ಬಜೆಟ್ ಬೆಲೆಯದ್ದಾಗಿದ್ದರೂ ಆಕರ್ಷಕ ಪ್ರೊಸೆಸರ್, ಡಿಸ್ ಪ್ಲೇ, ಬ್ಯಾಟರಿ ಆಯ್ಕೆ ನೀಡಲಾಗಿದೆ. ಇಂದಿನಿಂದ ಈ ಎರಡೂ ಸ್ಮಾರ್ಟ್​ಫೋನ್ ದೇಶದಲ್ಲಿ ಮಾರಾಟ ಕಾಣುತ್ತಿದೆ.

2 / 8
ಟೆಕ್ನೋ ಪೋವಾ 5 ಸ್ಮಾರ್ಟ್​ಫೋನ್ ದೇಶದಲ್ಲಿ ಸದ್ಯಕ್ಕೆ ಕೇವಲ ಒಂದು ಆಯ್ಕೆಯಲ್ಲಷ್ಟೆ ಖರೀದಿಗೆ ಸಿಗುತ್ತಿದೆ. ಇದರ 8 GB RAM ಮತ್ತು 128 GB ಸಂಗ್ರಹಣೆಗೆ 11,999 ರೂ. ಇದೆ. ಟೆಕ್ನೋ ಪೋವಾ 5 ಪ್ರೊ ಎರಡು ಆಯ್ಕೆಗಳಲ್ಲಿದೆ. ಇದರ 8 GB RAM + 128 GB ಸಂಗ್ರಹಣೆಗೆ 14,999 ರೂ. ಇದ್ದರೆ, 8 GB RAM + 256 GB ಸ್ಟೋರೇಜ್ ಸಾಮರ್ಥ್ಯಕ್ಕೆ 15,999 ರೂ. ನಿಗದಿಮಾಡಲಾಗಿದೆ.

3 / 8
ಈ ಎರಡೂ ಫೋನ್‌ಗಳು ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿದೆ. ಟೆಕ್ನೋ ಪೋವಾ 5 ಅಂಬರ್ ಗೋಲ್ಡ್, ಹರಿಕನ್ ಬ್ಲೂ ಮತ್ತು ಮೆಚಾ ಬ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಬರುತ್ತದೆ. ಟೆಕ್ನೋ ಪೋವಾ 5 ಪ್ರೊ ಅನ್ನು ಡಾರ್ಕ್ ಇಲ್ಯೂಷನ್ ಮತ್ತು ಫ್ಯಾಂಟಸಿ ಸಿಲ್ವರ್‌ ಬಣ್ಣಗಳಲ್ಲಿ ಖರೀದಿಸಬಹುದು.

4 / 8
ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್​ಫೋನ್​ಗಳನ್ನು ವಿನಿಮಯ ಮಾಡಿಕೊಂಡರೆ 1,000 ರೂ. ಗಳ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಇದರ ಜೊತೆಗೆ 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಯನ್ನು ಸಹ ಪಡೆಯಬಹುದು.

5 / 8
ಟೆಕ್ನೋ ಪೋವಾ 5 ಸರಣಿಯು 6.78-ಇಂಚಿನ ಪೂರ್ಣ-HD+ ಡಿಸ್ ಪ್ಲೇಗಳೊಂದಿಗೆ 120Hz ರಿಫ್ರೆಶ್ ದರ ಮತ್ತು 240Hz ಟಚ್ ಮಾದರಿ ದರದೊಂದಿಗೆ ಬರುತ್ತದೆ. ಟೆಕ್ನೋ ಪೋವಾ 5 ಅದರ ಹಿಂದಿನ ಮಾದರಿಯಂತೆ, ಮೀಡಿಯಾಟೆಕ್ ಹಿಲಿಯೊ G99 SoC ನಿಂದ ಚಾಲಿತವಾಗಿದೆ. ಅದೇ ಟೆಕ್ನೋ ಪೋವಾ 5 ಪ್ರೊ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನ್‌ಗಳು ಆಂಡ್ರಾಯ್ಡ್ 13-ಆಧಾರಿತ HiOS ಮೂಲಕ ರನ್ ಆಗುತ್ತದೆ.

6 / 8
ಕ್ಯಾಮೆರಾ ವಿಚಾರಕ್ಕೆ ಬಂದರೆ, ಟೆಕ್ನೋ ಪೋವಾ 5 ಸರಣಿಯ ಬೇಸ್ ಮತ್ತು ಪ್ರೊ ಮಾದರಿಗಳ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು AI ಲೆನ್ಸ್ ಜೊತೆಗೆ LED ಫ್ಲ್ಯಾಶ್ ಘಟಕವನ್ನು ಒಳಗೊಂಡಿವೆ. ಪೊವಾ 5 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಂವೇದಕವನ್ನು ಹೊಂದಿದೆ, ಆದರೆ ಟೆಕ್ನೋ ಪೊವಾ 5 ಪ್ರೊನಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.

7 / 8
ಈ ಫೋನ್‌ಗಳು 4G VoLTE, WiFi, ಬ್ಲೂಟೂತ್ 5.0, GPS, USB ಟೈಪ್-C ಮತ್ತು NFC ಸಂಪರ್ಕವನ್ನು ಬೆಂಬಲಿಸುತ್ತವೆ. ಅವು 3.5 ಎಂಎಂ ಆಡಿಯೋ ಜಾಕ್‌ನೊಂದಿಗೆ ಬರುತ್ತವೆ. ಪೊವಾ 5 ಪ್ರೊ 5G ಸಂಪರ್ಕವನ್ನು ಬೆಂಬಲಿಸುತ್ತದೆ ಮತ್ತು ಹಿಂಬದಿಯ ಪ್ಯಾನೆಲ್‌ನಲ್ಲಿ LED ಲೈಟ್​ನೊಂದಿಗೆ ಆರ್ಕ್ ಇಂಟರ್ಫೇಸ್ ಅನ್ನು ಹೊಂದಿದೆ. ಭದ್ರತೆಗಾಗಿ, ಎರಡೂ ಸ್ಮಾರ್ಟ್​ಫೋನ್​ಗಳನ್ನು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ನೀಡಲಾಗಿದೆ.

8 / 8
ಟೆಕ್ನೋ ಪೋವಾ 5 ಫೋನಿನಲ್ಲಿ ದೀರ್ಘ ಸಮಯ ಬಾಳಿಕೆ ಬರುವ ದೊಡ್ಡ 6,000mAh ಬ್ಯಾಟರಿಯನ್ನು ಹೊಂದಿದೆ. ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅದೇ ಟೆಕ್ನೋ ಪೋವಾ 5 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಮತ್ತು 68W ವೇಗದ ಚಾರ್ಜಿಂಗ್ ಆಯ್ಕೆ ನೀಡಲಾಗಿದೆ.