Updated on: Oct 21, 2022 | 8:39 PM
ಪುನೀತ್ ರಾಜ್ಕುಮಾರ್ ಜೊತೆ ‘ರಾಜಕುಮಾರ’ ಹಾಗೂ ‘ಜೇಮ್ಸ್’ ಸಿನಿಮಾಗಳಲ್ಲಿ ನಟಿಸಿದ್ದ ಪ್ರಿಯಾ ಆನಂದ್ ಅವರು ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ.
ಸುಧಾಮೂರ್ತಿ ಅವರ ಬಗ್ಗೆ ಪುನೀತ್ ರಾಜ್ಕುಮಾರ್ ಅವರಿಗೆ ಅಪಾರ ಗೌರವ ಇತ್ತು. ಆ ಘಟನೆಗಳನ್ನು ‘ಪುನೀತ ಪರ್ವ’ ವೇದಿಕೆ ಮೇಲೆ ಸುಧಾಮೂರ್ತಿ ನೆನಪಿಸಿಕೊಂಡರು.
ಬಹುಭಾಷಾ ನಟ ಶರತ್ ಕುಮಾರ್ ಅವರಿಗೂ ಪುನೀತ್ ರಾಜ್ಕುಮಾರ್ ಜೊತೆ ಒಡನಾಟ ಇತ್ತು. ಅಪ್ಪು ಬಗ್ಗೆ ಅವರು ಕೂಡ ವೇದಿಕೆಯ ಮೇಲೆ ಪ್ರೀತಿಯ ಮಾತುಗಳನ್ನು ಆಡಿದರು. ಹಾಡಿನ ಮೂಲಕ ನಮನ ಸಲ್ಲಿಸಿದರು.
ಗಾಯಕ ವಿಜಯ್ ಪ್ರಕಾಶ್ ಅವರು ವೇದಿಕೆಯಲ್ಲಿ ಪುನೀತ್ ನೆನಪಿನಲ್ಲಿ ಕವಿತೆ ಓದಿದರು. ಬಳಿಕ ‘ಬೊಂಬೆ ಹೇಳುತೈತೆ..’ ಗೀತೆಯನ್ನು ಹಾಡಿ ಎಲ್ಲರನ್ನೂ ರಂಜಿಸಿದರು.
ಡಾ. ರಾಜ್ ಕುಟುಂಬದ ಎಲ್ಲರೂ ಸೇರಿ ‘ಪುನೀತ ಪರ್ವ’ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ ಎಲ್ಲರೂ ಇದರಲ್ಲಿ ಭಾಗಿ ಆಗಿದ್ದಾರೆ.
ಧ್ರುವ ಸರ್ಜಾ, ರಾಜ್ ಬಿ. ಶೆಟ್ಟಿ, ದುನಿಯಾ ವಿಜಯ್ ಮುಂತಾದ ಕಲಾವಿದರು ಕೂಡ ಪುನೀತ್ ರಾಜ್ಕುಮಾರ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು. ಮಾತನಾಡುತ್ತ ದುನಿಯಾ ವಿಜಯ್ ಭಾವುಕರಾದರು.