27 ಸಾವಿರ ರೂಪಾಯಿ ಬೆಲೆಯ ಚಪ್ಪಲಿ ಧರಿಸಿ ಸಿನಿಮಾ ಪ್ರಚಾರಕ್ಕೆ ಬಂದ ಪೂಜಾ ಹೆಗ್ಡೆ; ಫೋಟೋ ವೈರಲ್
ನಟಿ ಪೂಜಾ ಹೆಗ್ಡೆ ಅವರು ನಟನೆ, ಗ್ಲಾಮರ್ ಮಾತ್ರವಲ್ಲದೇ ತಮ್ಮ ಫ್ಯಾಷನ್ ಸೆನ್ಸ್ ಕಾರಣದಿಂದಲೂ ಗಮನ ಸೆಳೆಯುತ್ತಾರೆ. ಅವರ ಕೆಲವು ಹೊಸ ಫೋಟೋಗಳು ವೈರಲ್ ಆಗಿವೆ. ಪೂಜಾ ಧರಿಸಿದ ಹೀಲ್ಸ್ ಬೆಲೆ ಬಗ್ಗೆ ಫ್ಯಾನ್ಸ್ ಮಾತಾಡ್ತಾ ಇದ್ದಾರೆ.
1 / 5
ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು ಈಗ ‘ರಾಧೆ ಶ್ಯಾಮ್’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಪೂಜಾ ಹೆಗ್ಡೆ ಅವರು ಪ್ರಮೋಷನ್ ಇವೆಂಟ್ಗಳಲ್ಲಿ ಭಾಗವಹಿಸುತ್ತಿದ್ದಾರೆ.
2 / 5
ಇತ್ತೀಚೆಗೆ ಪೂಜಾ ಹೆಗ್ಡೆ ಅವರು ಹಸಿರು ಬಣ್ಣದ ಕ್ರಾಪ್ಡ್ ಬ್ಲೌಸ್ ಹಾಗೂ ಅದಕ್ಕೆ ಒಪ್ಪುವ ಸ್ಕರ್ಟ್ ಧರಿಸಿ ಪೋಸ್ ನೀಡಿದರು. ಅದಕಿಂತಲೂ ಹೆಚ್ಚು ಗಮನ ಸೆಳೆದಿದ್ದು ಅವರು ಧರಿಸಿದ್ದ ಹೀಲ್ಸ್. ಪ್ರತಿಷ್ಟಿತ ಖಾಸಗಿ ಬ್ರ್ಯಾಂಡ್ನ ಈ ಹೀಲ್ಸ್ ತುಂಬ ದುಬಾರಿ ಆಗಿದೆ. ಇದರ ಬೆಲೆ ಬರೋಬ್ಬರಿ 27 ಸಾವಿರ ರೂಪಾಯಿ ಎಂದು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ.
3 / 5
ಭಾರತೀಯ ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಅವರಿಗೆ ಸಖತ್ ಬೇಡಿಕೆ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಪ್ರಭಾಸ್ ಜೊತೆ ಅವರು ಅಭಿನಯಿಸಿರುವ ‘ರಾಧೆ ಶ್ಯಾಮ್’ ಸಿನಿಮಾ ಮಾ.11ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ.
4 / 5
ದಳಪತಿ ವಿಜಯ್ ಜೊತೆ ಪೂಜಾ ಹೆಗ್ಡೆ ಅವರು ‘ಬೀಸ್ಟ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರದ ಮೇಲೆ ಸಖತ್ ನಿರೀಕ್ಷೆ ಇದೆ. ಏಪ್ರಿಲ್ 14ರಂದು ರಿಲೀಸ್ ಆಗಲಿರುವ ‘ಬೀಸ್ಟ್’ ಚಿತ್ರವು ‘ಕೆಜಿಎಫ್: ಚಾಪ್ಟರ್ 2’ ಜೊತೆ ಪೈಪೋಟಿ ನಡೆಸಲಿದೆ.
5 / 5
ಪೂಜಾ ಹೆಗ್ಡೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರ ಕಾಲ್ಶೀಟ್ ದುಬಾರಿ ಎಂಬ ಕಾರಣಕ್ಕೆ ಕೆಲವು ನಿರ್ಮಾಪಕರು ಬೇರೆ ನಟಿಯರಿಗೆ ಮಣೆ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೂ ಪೂಜಾ ಚಾರ್ಮ್ ಕಡಿಮೆ ಆಗಿಲ್ಲ.