Vishnuvardhan Smaraka: ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ; ಕೊನೆಗೂ ಈಡೇರಿತು ಅಭಿಮಾನಿಗಳ ಬಹುವರ್ಷದ ಬೇಡಿಕೆ
Vishnuvardhan Smaraka Photos: ‘ಸಾಹಸ ಸಿಂಹ’ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. ಇಂದು (ಜ.29) ನಡೆದ ಕಾರ್ಯಕ್ರಮದ ಕೆಲವು ಫೋಟೋಗಳು ಇಲ್ಲಿವೆ..
1 / 7
ವಿಷ್ಣುವರ್ಧನ್ ಅವರು ನಿಧನರಾಗಿ ಹಲವು ವರ್ಷಗಳೇ ಕಳೆದಿದ್ದರೂ ಸ್ಮಾರಕ ನಿರ್ಮಾಣ ಆಗಿರಲಿಲ್ಲ. ಆದರೆ ಇಂದು (ಜ.29) ಮೈಸೂರಿನಲ್ಲಿ ಭವ್ಯವಾದ ಸ್ಮಾರಕ ಲೋಕಾರ್ಪಣೆ ಆಗಿದೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.
2 / 7
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಷ್ಣುವರ್ಧನ್ ಸ್ಮಾರಕವನ್ನು ಉದ್ಘಾಟನೆ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸಮ್ಮುಖದಲ್ಲಿ ಈ ಸಮಾರಂಭ ನಡೆಯಿತು. ಈ ಪ್ರಯುಕ್ತ ಫ್ಯಾನ್ಸ್ ರಕ್ತದಾನ, ಅನ್ನದಾನ ಮುಂತಾದ ಜನಪರ ಕಾರ್ಯಕ್ರಮ ನಡೆಸಿದರು.
3 / 7
‘ನಾನು ಈ ಕಾರ್ಯಕ್ರಮಕ್ಕೆ ವಿಷ್ಣುವರ್ಧನ್ ಅಭಿಮಾನಿಯಾಗಿ ಬಂದಿದ್ದೇನೆ. ಅವರ ಕಲೆ, ಸಾಹಸ, ಸಾಧನೆ ಎಲ್ಲವೂ ನಮ್ಮ ಕಣ್ಣ ಮುಂದಿದೆ’ ಎಂದು ಸ್ಮಾರಕ ಉದ್ಘಾಟನೆ ಬಳಿಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
4 / 7
‘ಸಾಹಸ ಸಿಂಹ’ ಅವರ ಸ್ಮಾರಕ ನಿರ್ಮಾಣ ಆಗಬೇಕು ಎಂದು ಅಭಿಮಾನಿಗಳು ಮತ್ತು ಕುಟುಂಬದವರು ಹಲವು ವರ್ಷಗಳಿಂದ ಶ್ರಮಿಸುತ್ತಿದ್ದರು. ಅದಕ್ಕೆ ಹಲವು ಅಡೆತಡೆಗಳು ಕೂಡ ಉಂಟಾಗಿದ್ದವು. ಅಂತಿಮವಾಗಿ ಅವರ ಶ್ರಮಕ್ಕೆ ಫಲ ಸಿಕ್ಕಿದೆ.
5 / 7
ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗಿರುವುದಕ್ಕೆ ಅನೇಕ ಸೆಲೆಬ್ರಿಟಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಶಿವರಾಜ್ಕುಮಾರ್, ಕಿಚ್ಚ ಸುದೀಪ್ ಸೇರಿದಂತೆ ಅನೇಕ ಕಲಾವಿದರು ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಖುಷಿಪಟ್ಟಿದ್ದಾರೆ.
6 / 7
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ಇದೆ. ಅದನ್ನು ಪುಣ್ಯಭೂಮಿ ಎಂದು ಫ್ಯಾನ್ಸ್ ಗೌರವಿಸುತ್ತಾರೆ. ಬೆಂಗಳೂರಿನಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಮೈಸೂರಿಗೆ ತೆರಳಿ ಸ್ಮಾರಕದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದಾರೆ.
7 / 7
11 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅನೇಕ ಚಟುವಟಿಕೆಗಳು ಇಲ್ಲಿ ನಡೆಯಲಿವೆ. ರಾಜ್ಯದ ಮೂಲೆ ಮೂಲೆಯಿಂದ ಬರುವ ಅಭಿಮಾನಿಗಳು ವಿಷ್ಣು ದಾದಾಗೆ ನಮನ ಸಲ್ಲಿಸುತ್ತಿದ್ದಾರೆ.