ಪಾಕ್ ವಿರುದ್ಧ ಏಕದಿನದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಯಾರು ಗೊತ್ತಾ?
IND vs PAK: 2019 ರ ವಿಶ್ವಕಪ್ ನಂತರ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 2 ರಂದು ಈ ಉಭಯ ತಂಡಗಳ ನಡುವೆ ಹೈವೋಲ್ಟೇಜ್ ಏಷ್ಯಾಕಪ್ ಫೈಟ್ ನಡೆಯಲ್ಲಿದೆ. ಅಲ್ಲದೆ ಈ ವರ್ಷ ಕನಿಷ್ಠ ಪಕ್ಷ ಮೂರು ಬಾರಿ ಏಕದಿನ ಮಾದರಿಯಲ್ಲಿ ಬದ್ಧವೈರಿಗಳು ಪರಸ್ಪರ ಸೆಣಸಾಡಲಿದ್ದಾರೆ.
1 / 7
2019 ರ ವಿಶ್ವಕಪ್ ನಂತರ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 2 ರಂದು ಈ ಉಭಯ ತಂಡಗಳ ನಡುವೆ ಹೈವೋಲ್ಟೇಜ್ ಏಷ್ಯಾಕಪ್ ಫೈಟ್ ನಡೆಯಲ್ಲಿದೆ. ಅಲ್ಲದೆ ಈ ವರ್ಷ ಕನಿಷ್ಠ ಪಕ್ಷ ಮೂರು ಬಾರಿ ಏಕದಿನ ಮಾದರಿಯಲ್ಲಿ ಬದ್ಧವೈರಿಗಳು ಪರಸ್ಪರ ಸೆಣಸಾಡಲಿದ್ದಾರೆ.
2 / 7
ಈ ಎರಡೂ ತಂಡಗಳ ಏಕದಿನ ಮುಖಾಮುಖಿಯಲ್ಲಿ ಇದುವರೆಗೆ ಹಲವಾರು ದಾಖಲೆಗಳು ಸೃಷ್ಟಿಯಾಗಿವೆ. ಇನ್ನು 50 ಓವರ್ಗಳ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಆಟಗಾರರು ರನ್ ಶಿಖರವನ್ನೇ ಕಟ್ಟಿದ್ದಾರೆ. ಅಂತಹ ಐದು ಆಟಗಾರರ ವಿವರ ಇಲ್ಲಿದೆ.
3 / 7
ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಅತ್ಯಧಿಕ ರನ್ ಬಾರಿಸಿದ ಟೀಂ ಇಂಡಿಯಾ ಆಟಗಾರರ ಪೈಕಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಪಾಕಿಸ್ತಾನದ ವಿರುದ್ಧ 69 ಪಂದ್ಯಗಳಲ್ಲಿ 40.09 ಸರಾಸರಿಯಲ್ಲಿ 2526 ರನ್ ಕಲೆಹಾಕಿದ್ದಾರೆ. ಇದರಲ್ಲಿ 5 ಶತಕ ಮತ್ತು 16 ಅರ್ಧಶತಕಗಳು ಸೇರಿವೆ.
4 / 7
ಈ ಪಟ್ಟಿಯಲ್ಲಿ ಭಾರತದ ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇದ್ದು, ಅವರು 58 ಪಂದ್ಯಗಳಲ್ಲಿ 36.51 ರ ಸರಾಸರಿಯಲ್ಲಿ 1899 ರನ್ ಗಳಿಸುವ ಮೂಲಕ ಪಾಕಿಸ್ತಾನದ ವಿರುದ್ಧ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
5 / 7
ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಪಾಕಿಸ್ತಾನದ ವಿರುದ್ಧ 64 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 31.86 ಸರಾಸರಿಯಲ್ಲಿ 1657 ರನ್ ಗಳಿಸಿದ್ದಾರೆ. ಅಲ್ಲದೆ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಎರಡು ಶತಕ ಮತ್ತು ಒಂಬತ್ತು ಅರ್ಧಶತಕಗಳನ್ನು ಬಾರಿಸಿ, ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
6 / 7
ಸೌರವ್ ಗಂಗೂಲಿ ಪಾಕಿಸ್ತಾನ ವಿರುದ್ಧ 53 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 35.14 ಸರಾಸರಿಯಲ್ಲಿ ಎರಡು ಶತಕ ಮತ್ತು ಒಂಬತ್ತು ಅರ್ಧಶತಕ ಸೇರಿದಂತೆ 1652 ರನ್ ಬಾರಿಸುವುದರೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
7 / 7
ಪಾಕಿಸ್ತಾನ ವಿರುದ್ಧ 38 ಪಂದ್ಯಗಳಲ್ಲಿ 42.50 ಸರಾಸರಿಯಲ್ಲಿ 1360 ರನ್ ಬಾರಿಸಿರುವ ಯುವರಾಜ್ ಸಿಂಗ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರು ಪಾಕ್ ವಿರುದ್ಧ 93.47 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು, ಒಂದು ಶತಕ ಮತ್ತು 12 ಅರ್ಧಶತಕಗಳನ್ನು ಸಿಡಿಸಿದ್ದಾರೆ