ಗುರ್ಬಾಝ್ ಅಬ್ಬರಕ್ಕೆ ಧೋನಿ ದಾಖಲೆ ಉಡೀಸ್

| Updated By: Vimal Kumar

Updated on: Sep 19, 2023 | 1:52 PM

Rahmanullah Gurbaz Records: ಈ ಪಂದ್ಯದಲ್ಲಿ 151 ಎಸೆತಗಳನ್ನು ಎದುರಿಸಿದ ಗುರ್ಬಾಝ್ 3 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 151 ರನ್​ ಬಾರಿಸಿದ್ದರು. ಇದರೊಂದಿಗೆ ಪಾಕಿಸ್ತಾನ್ ವಿರುದ್ಧ ಶತಕ ಸಿಡಿಸಿದ ಮೊದಲ ಅಫ್ಘಾನ್ ಬ್ಯಾಟರ್ ಎನಿಸಿಕೊಂಡರು.

1 / 7
ಪಾಕಿಸ್ತಾನ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರಹಮಾನುಲ್ಲಾ ಗುರ್ಬಾಝ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ದಾಖಲೆಗಳೊಂದಿಗೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ವಿಶೇಷ ರೆಕಾರ್ಡ್​ ಅನ್ನು ಕೂಡ ಮುರಿದಿರುವುದು ವಿಶೇಷ.

2 / 7
 ಈ ಪಂದ್ಯದಲ್ಲಿ 151 ಎಸೆತಗಳನ್ನು ಎದುರಿಸಿದ ಗುರ್ಬಾಝ್ 3 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 151 ರನ್​ ಬಾರಿಸಿದ್ದರು. ಇದರೊಂದಿಗೆ ಪಾಕಿಸ್ತಾನ್ ವಿರುದ್ಧ ಶತಕ ಸಿಡಿಸಿದ ಮೊದಲ ಅಫ್ಘಾನ್ ಬ್ಯಾಟರ್ ಎನಿಸಿಕೊಂಡರು.

3 / 7
ಅಲ್ಲದೆ ಈ ಭರ್ಜರಿ ಸೆಂಚುರಿಯೊಂದಿಗೆ ಪಾಕಿಸ್ತಾನ್ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಗುರ್ಬಾಝ್ ತಮ್ಮದಾಗಿಸಿಕೊಂಡರು.

4 / 7
ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. 2005 ರಲ್ಲಿ ಪಾಕಿಸ್ತಾನ್ ವಿರುದ್ಧ ಧೋನಿ 123 ಎಸೆತಗಳಲ್ಲಿ 148 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 151 ರನ್ ಸಿಡಿಸುವ ಮೂಲಕ ಗುರ್ಬಾಝ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

5 / 7
ಇದಲ್ಲದೆ 21ನೇ ವಯಸ್ಸಿನೊಳಗೆ ಅತ್ಯಧಿಕ ಏಕದಿನ ಶತಕ ಬಾರಿಸಿದ 3ನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ 6 ಶತಕಗಳನ್ನು ಸಿಡಿಸಿರುವ ಶ್ರೀಲಂಕಾದ ಉಪುಲ್ ತರಂಗ ಮತ್ತು ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಇದೀಗ 5 ಶತಕಗಳೊಂದಿಗೆ ಗುರ್ಬಾಝ್ 3ನೇ ಸ್ಥಾನ ಅಲಂಕರಿಸಿದ್ದಾರೆ.

6 / 7
ಹಾಗೆಯೇ ಅತೀ ಕಡಿಮೆ ಇನಿಂಗ್ಸ್​ಗಳಲ್ಲಿ 5 ಏಕದಿನ ಶತಕ ಪೂರೈಸಿದ ವಿಶ್ವದ ಮೂರನೇ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಗುರ್ಬಾಝ್ ತಮ್ಮದಾಗಿಸಿಕೊಂಡಿದ್ದಾರೆ. ಗುರ್ಬಾಝ್ 23 ಇನಿಂಗ್ಸ್​ಗಳ ಮೂಲಕ ಈ ಸಾಧನೆ ಮಾಡಿದರೆ, ಇಮಾಮ್-ಉಲ್-ಹಕ್ (ಪಾಕಿಸ್ತಾನ್) ಮತ್ತು ಕ್ವಿಂಟನ್ ಡಿ ಕಾಕ್ (ಸೌತ್ ಆಫ್ರಿಕಾ) ಕೇವಲ 19 ಇನ್ನಿಂಗ್ಸ್‌ಗಳಲ್ಲಿ 5 ಶತಕ ಪೂರೈಸಿದ್ದರು.

7 / 7
ಒಟ್ಟಿನಲ್ಲಿ ಒಂದು ಭರ್ಜರಿ ಶತಕದೊಂದಿಗೆ ಅಫ್ಘಾನಿಸ್ತಾನ್ ತಂಡದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ ಹಲವು ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ.

Published On - 10:58 pm, Thu, 24 August 23