IPL 2024: LSG ತಂಡದಿಂದ ಗೌತಮ್ ಗಂಭೀರ್​ಗೆ ಗೇಟ್ ಪಾಸ್..?

| Updated By: Zahir Yusuf

Updated on: Aug 19, 2023 | 10:08 PM

IPL 2024: ಕಳೆದ ಸೀಸನ್ ಐಪಿಎಲ್ ವೇಳೆ ಗೌತಮ್ ಗಂಭೀರ್ ಆರ್​ಸಿಬಿ ಅಭಿಮಾನಿಗಳ ವಿರುದ್ಧ ಅನುಚಿತವಾಗಿ ವರ್ತಿಸಿದ್ದರು. ಇದಲ್ಲದೆ ವಿರಾಟ್ ಕೊಹ್ಲಿ ಜೊತೆಗೂ ಮೈದಾನದಲ್ಲೇ ಜಗಳಕ್ಕಿಳಿದಿದ್ದರು.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಆರಂಭಕ್ಕೂ ಮುನ್ನವೇ ಎಲ್ಲಾ ತಂಡಗಳಿಗೂ ಮೇಜರ್ ಸರ್ಜರಿ ನಡೆಯುತ್ತಿದೆ. ಇದರ ಮೊದಲ ಭಾಗವಾಗಿ ಈಗಾಗಲೇ ಆರ್​ಸಿಬಿ ಸೇರಿದಂತೆ ಕೆಲ ತಂಡಗಳ ಕೋಚ್​ಗಳು ಬದಲಾಗಿದ್ದಾರೆ.

2 / 7
ಇದೀಗ ಲಕ್ನೋ ಸೂಪರ್ ಜೈಂಟ್ಸ್​ ತಂಡದಲ್ಲೂ ಮಹತ್ವದ ಬದಲಾವಣೆ ಕಂಡು ಬರುವುದು ಖಚಿತವಾಗಿದೆ. ಈ ಹಿಂದೆ LSG ತಂಡದ ಕೋಚ್ ಸ್ಥಾನದಿಂದ ಆ್ಯಂಡಿ ಫ್ಲವರ್​ ಅವರನ್ನು ಕೆಳಗಿಳಿಸಲಾಗಿತ್ತು. ಇದೀಗ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಹೊರಬರುವುದು ಸಹ ಬಹುತೇಕ ಖಚಿತವಾಗಿದೆ.

3 / 7
ಪ್ರಸ್ತುತ ಮಾಹಿತಿ ಪ್ರಕಾರ, ಗೌತಮ್ ಗಂಭೀರ್ ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದೊಂದಿಗೆ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ನಿಖರ ಕಾರಣಗಳೇನು ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ.

4 / 7
ಇದಾಗ್ಯೂ ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಗುಳಿಯಲು ಗೌತಮ್ ಗಂಭೀರ್ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಪೂರ್ವ ದೆಹಲಿ ಸಂಸದರಾಗಿರುವ ಗಂಭೀರ್ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸಲಿದ್ದು, ಹೀಗಾಗಿ ಐಪಿಎಲ್​ನಿಂದ ಬ್ರೇಕ್ ಪಡೆಯಲು ಮುಂದಾಗಿದ್ದಾರಂತೆ.

5 / 7
ಮತ್ತೊಂದೆಡೆ ಮುಖ್ಯ ಕೋಚ್ ಆ್ಯಂಡಿ ಫ್ಲವರ್​ ಹಾಗೂ ಗೌತಮ್ ಗಂಭೀರ್ ಜೊತೆಯಾಗಿ ಕಳೆದ 2 ವರ್ಷಗಳ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೀಗ ಆ್ಯಂಡಿ ಫ್ಲವರ್ ಅವರನ್ನು ಕೋಚ್ ಸ್ಥಾನದಿಂದ ತೆಗೆದು ಹಾಕಲಾಗಿದೆ. ಇದರ ಬೆನ್ನಲ್ಲೇ ಗಂಭೀರ್ ಕೂಡ ಹೊರಬೀಳಲಿದ್ದಾರೆ ಎನ್ನಲಾಗಿತ್ತು.

6 / 7
ಏಕೆಂದರೆ ಕಳೆದ ಸೀಸನ್ ಐಪಿಎಲ್ ವೇಳೆ ಗೌತಮ್ ಗಂಭೀರ್ ಆರ್​ಸಿಬಿ ಅಭಿಮಾನಿಗಳ ವಿರುದ್ಧ ಅನುಚಿತವಾಗಿ ವರ್ತಿಸಿದ್ದರು. ಇದಲ್ಲದೆ ವಿರಾಟ್ ಕೊಹ್ಲಿ ಜೊತೆಗೂ ಮೈದಾನದಲ್ಲೇ ಜಗಳಕ್ಕಿಳಿದಿದ್ದರು. ಇವೆಲ್ಲವೂ ಲಕ್ನೋ ಸೂಪರ್ ಜೈಂಟ್ಸ್ ಬ್ರ್ಯಾಂಡ್​ ಮೇಲೆ ಪರಿಣಾಮ ಬೀರಿರುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಲಕ್ನೋ ಫ್ರಾಂಚೈಸಿಯೇ ಗಂಭೀರ್ ಅವರನ್ನು ಕೈ ಬಿಡಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದಕ್ಕೂ ಮುನ್ನವೇ ಗೌತಮ್ ಗಂಭೀರ್ ಲಕ್ನೋ ತಂಡದಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

7 / 7
ಒಟ್ಟಿನಲ್ಲಿ ಮುಂದಿನ ಸೀಸನ್​ನಲ್ಲಿ ಲಕ್ನೋ ಬಳಗದಲ್ಲಿ ಗಂಭೀರ್ ಕಾಣಿಸಿಕೊಳ್ಳುವುದು ಅನುಮಾನ. ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಕೋಚ್​ ಆಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ಬಳಗವೇ ಎಲ್​ಎಸ್​ಜಿ ತಂಡದ ಸಿಬ್ಬಂದಿ ವರ್ಗದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಎಲ್​ಎಸ್​ಜಿ ತಂಡದ ಮುಂದಿನ ಮೆಂಟರ್ ಆಗಿ ಯಾರು ಬರಲಿದ್ದಾರೆ ಎಂಬುದಷ್ಟೇ ಈಗ ಕುತೂಹಲ.