IPL 2023: KKR vs RCB ಪಂದ್ಯದ ವೇಳೆ ಮಗಳೊಂದಿಗೆ ಶಾರೂಖ್ ಖಾನ್ ಮಿಂಚಿಂಗ್
IPL 2023 Kannada: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಶಾರ್ದೂಲ್ ಠಾಕೂರ್ (68) ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ KKR ತಂಡವು 7 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತು.
1 / 7
IPL 2023 KKR vs RCB: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ಹಾಗೂ ಆರ್ಸಿಬಿ ನಡುವಣ ಪಂದ್ಯದ ವೇಳೆ ಬಾಲಿವುಡ್ನ ಖ್ಯಾತ ಶಾರೂಖ್ ಖಾನ್ ಕಾಣಿಕೊಂಡಿದ್ದರು. ಕೆಕೆಆರ್ ತಂಡದ ಸಹ ಮಾಲೀಕರಾಗಿರುವ ಕಿಂಗ್ ಖಾನ್ ಮಗಳು ಸುಹಾನ ಖಾನ್ ಜೊತೆ ತಂಡವನ್ನು ಹುರಿದುಂಬಿಸಿದರು.
2 / 7
ಇನ್ನು ಸುಹಾನ ಖಾನ್ ತನ್ನ ಗೆಳೆತಿ ಶನಯಾ ಕಪೂರ್ ಜೊತೆ ಸ್ಟೇಡಿಯಂನಲ್ಲಿ ರಂಗೇರಿಸಿದರು. ತಮ್ಮ ತಂಡದ ಅಪ್ಪಟ ಅಭಿಮಾನಿಯಾಗಿರುವ ಸುಹಾನ ಬಾಲ್ಯದಿಂದಲೇ ಕೆಕೆಆರ್ ಪಂದ್ಯಗಳನ್ನು ವೀಕ್ಷಿಸಲು ಆಗಮಿಸುತ್ತಿದ್ದರು.
3 / 7
ಇದೀಗ ತಂದೆಯೊಂದಿಗೆ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಮಿಂಚಿದ ಸುಹಾನ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
4 / 7
ಕೆಕೆಆರ್ ತಂಡದ ಸಹ ಮಾಲಕಿಯಾಗಿರುವ ನಟಿ ಜೂಹಿ ಚಾವ್ಲಾ ಕೂಡ ಇದೇ ವೇಳೆ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದರು. ಅವರೊಂದಿಗೆ ಖ್ಯಾತ ಗಾಯಕಿ ಉಷಾ ಉತ್ತಪ್ ಕೂಡ ಪಂದ್ಯ ವೀಕ್ಷಿಸಲು ಆಗಮಿಸಿದ್ದರು.
5 / 7
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಶಾರ್ದೂಲ್ ಠಾಕೂರ್ (68) ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ KKR ತಂಡವು 7 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತು.
6 / 7
ಈ ಬೃಹತ್ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17.4 ಓವರ್ಗಳಲ್ಲಿ 123 ರನ್ಗಳಿಗೆ ಆಲೌಟ್ ಆಗುವ ಮೂಲಕ 81 ರನ್ಗಳಿಂದ ಸೋಲೊಪ್ಪಿಕೊಂಡಿದೆ.
7 / 7
ಈ ಗೆಲುವಿನೊಂದಿಗೆ ಕೆಕೆಆರ್ ತಂಡವು ಗೆಲುವಿನ ಖಾತೆ ತೆರೆದಿದೆ. ಅತ್ತ ತಂಡದ ಮಾಲೀಕ ಶಾರೂಖ್ ಖಾನ್ ಕೂಡ ಕೆಕೆಆರ್ ಟೀಮ್ನ ಪ್ರದರ್ಶನದಿಂದ ಫುಲ್ ಖುಷ್ ಆಗಿದ್ದಾರೆ.