IPL 2023: ಕೈಕೊಟ್ಟ ಬೌಲರ್ಗಳು: ಸೋಲಿನೊಂದಿಗೆ RCB ಅಭಿಯಾನ ಅಂತ್ಯ..!
IPL 2023 Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ಒದಗಿಸಿದ್ದರು.
1 / 11
IPL 2023: ಐಪಿಎಲ್ ಸೀಸನ್ 16 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ ಅಂತ್ಯವಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸೋಲುವ ಮೂಲಕ ಆರ್ಸಿಬಿ ಪ್ಲೇಆಫ್ ಅವಕಾಶವನ್ನು ಕೈಚೆಲ್ಲಿಕೊಂಡಿತು.
2 / 11
ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ಒದಗಿಸಿದ್ದರು.
3 / 11
ಇದಾದ ಬಳಿಕ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತಕ್ಕೊಳಗಾದರೂ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೆಗಲೇರಿಸಿಕೊಂಡರು. ಅದರಂತೆ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ಕಿಂಗ್ ಕೊಹ್ಲಿ 60 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದರು.
4 / 11
ವಿರಾಟ್ ಕೊಹ್ಲಿಯ ಈ ಅಜೇಯ ಶತಕದ ನೆರವಿನಿಂದ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿತು.
5 / 11
ಇತ್ತ ಬೃಹತ್ ಪೇರಿಸಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಆರ್ಸಿಬಿಗೆ ಮತ್ತೊಮ್ಮೆ ಪವರ್ಪ್ಲೇನಲ್ಲೇ ಯಶಸ್ಸು ತಂದುಕೊಡುವಲ್ಲಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು. ಆದರೆ ಬಳಿಕ ಜೊತೆಯಾದ ಶುಭ್ಮನ್ ಗಿಲ್ ಹಾಗೂ ವಿಜಯ್ ಶಂಕರ್ 123 ರನ್ಗಳ ಜೊತೆಯಾಟವಾಡಿದರು.
6 / 11
ವಿಕೆಟ್ ಪಡೆಯುವಲ್ಲಿ ವಿಫಲರಾದ ಆರ್ಸಿಬಿ ಬೌಲರ್ಗಳು ದುಬಾರಿಯಾಗಿ ಪರಿಣಮಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಸತತ ವಿಕೆಟ್ ಕಬಳಿಸುವ ಮೂಲಕ ಕಂಬ್ಯಾಕ್ ಮಾಡಿದರೂ ಅದಾಗಲೇ ಗುಜರಾತ್ ಟೈಟಾನ್ಸ್ ತಂಡವು ಗೆಲುವಿನತ್ತ ದಾಪುಗಾಲಿಟ್ಟಿತು.
7 / 11
ಕೊನೆಯ 2 ಓವರ್ಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವು 19 ರನ್ಗಳ ಟಾರ್ಗೆಟ್ ಪಡೆಯಿತು. ಈ ಹಂತದಲ್ಲಿ ಹರ್ಷಲ್ ಪಟೇಲ್ ಎಸೆತದಲ್ಲಿ ಗಿಲ್ ಭರ್ಜರಿ ಸಿಕ್ಸ್ ಸಿಡಿಸಿದರು. ಅಲ್ಲದೆ ಅಂತಿಮ ಓವರ್ಗೆ ಕೇವಲ 8 ರನ್ಗಳ ಗುರಿಗೆ ತಂದು ನಿಲ್ಲಿಸಿದರು.
8 / 11
ಕೊನೆಯ ಓವರ್ನಲ್ಲಿ ವೇಯ್ನ್ ಪಾರ್ನೆಲ್ಗೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಶುಭ್ಮನ್ ಗಿಲ್ 52 ಎಸೆತಗಳಲ್ಲಿ ಶತಕ ಪೂರೈಸುವುದರ ಜೊತೆಗೆ ಗುಜರಾತ್ ಟೈಟಾನ್ಸ್ಗೆ 6 ವಿಕೆಟ್ಗಳ ಅಮೋಘ ಗೆಲುವು ತಂದುಕೊಟ್ಟರು.
9 / 11
ಆರ್ಸಿಬಿ ಪರ ವಿಜಯ್ ಕುಮಾರ್ ವೈಶಾಖ್ 4 ಓವರ್ಗಳಲ್ಲಿ 40 ರನ್ ನೀಡಿ 1 ವಿಕೆಟ್ ಪಡೆದರೆ, ಹೊಸ ಆಟಗಾರ ಹಿಮಾಂಶು ಶರ್ಮಾ 3 ಓವರ್ಗಳಲ್ಲಿ 28 ರನ್ ನೀಡಿದರು. ಇನ್ನು ಹರ್ಷಲ್ ಪಟೇಲ್ 4 ಓವರ್ಗಳಲ್ಲಿ 29 ರನ್ ನೀಡಿ 1 ವಿಕೆಟ್ ಉರುಳಿಸಿದರೆ, ವೇಯ್ನ್ ಪಾರ್ನೆಲ್ 3.1 ಓವರ್ಗಳಲ್ಲಿ 42 ರನ್ ನೀಡಿದರು. ಹಾಗೆಯೇ ಸಿರಾಜ್ 4 ಓವರ್ಗಳಲ್ಲಿ 32 ರನ್ ನೀಡಿ 2 ವಿಕೆಟ್ ಕಬಳಿಸಿದರು. ಅಂದರೆ ಬೌಲರ್ಗಳ ಕಳಪೆ ಪ್ರದರ್ಶನದಿಂದಾಗಿ ಆರ್ಸಿಬಿ ತಂಡವು 6 ವಿಕೆಟ್ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.
10 / 11
ಇದರೊಂದಿಗೆ ಆಡಿರುವ 14 ಪಂದ್ಯಗಳಲ್ಲಿ 7 ಜಯ ಹಾಗೂ 7 ಸೋಲಿನೊಂದಿಗೆ ಆರ್ಸಿಬಿ ತಂಡವು 16ನೇ ಸೀಸನ್ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ.
11 / 11
ಇತ್ತ ಆರ್ಸಿಬಿ ಸೋಲಿನೊಂದಿಗೆ ಅತ್ತ 16 ಪಾಯಿಂಟ್ಸ್ ಕಲೆಹಾಕಿದ್ದ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿ ಪ್ಲೇಆಫ್ ಪ್ರವೇಶಿಸಿದೆ.
Published On - 12:44 am, Mon, 22 May 23