Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Team India Captains List: ಒಂದು ಕ್ಯಾಲೆಂಡರ್ ವರ್ಷದಲ್ಲಿ 7 ನಾಯಕರುಗಳು ಕಣಕ್ಕಿಳಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಹಾಕುವುದರೊಂದಿಗೆ ಈ ವರ್ಷ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಏಳನೇ ನಾಯಕ ಎಂಬ ಹೆಗ್ಗಳಿಕೆ ಶಿಖರ್ ಧವನ್ ಪಾಲಾಯಿತು.
1 / 12
ಟೀಮ್ ಇಂಡಿಯಾದ ನಾಯಕ ಯಾರು? ಈ ಪ್ರಶ್ನೆಗೆ ಉತ್ತರ ಸರಣಿಯಿಂದ ಸರಣಿಗೆ ಬದಲಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಕಳೆದ 7 ತಿಂಗಳಲ್ಲಿ ಟೀಮ್ ಇಂಡಿಯಾವನ್ನು 7 ಕ್ಯಾಪ್ಟನ್ಗಳು ಮುನ್ನಡೆಸಿದ್ದಾರೆ. ಅಂದರೆ ಒಂದು ಕ್ಯಾಲೆಂಡರ್ ವರ್ಷದಲ್ಲಿ 7 ನಾಯಕರುಗಳು ಕಣಕ್ಕಿಳಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಹಾಕುವುದರೊಂದಿಗೆ ಈ ವರ್ಷ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಏಳನೇ ನಾಯಕ ಎಂಬ ಹೆಗ್ಗಳಿಕೆ ಶಿಖರ್ ಧವನ್ ಪಾಲಾಯಿತು.
2 / 12
ವಿಶೇಷ ಎಂದರೆ ಹೀಗೆ ಒಂದೇ ವರ್ಷದೊಳಗೆ 7 ನಾಯಕರಗಳನ್ನು ಕಣಕ್ಕಿಳಿಸುವ ಮೂಲಕ ಬಿಸಿಸಿಐ ಟೀಮ್ ಇಂಡಿಯಾ ಹೆಸರಿನಲ್ಲಿ ವಿಶೇಷ ದಾಖಲೆಯೊಂದು ಬರೆದಿದೆ. ಅಂದರೆ ಕ್ರಿಕೆಟ್ ಇತಿಹಾಸದಲ್ಲಿ ಒಂದು ವರ್ಷದೊಳಗೆ ಅತೀ ಹೆಚ್ಚು ಬಾರಿ ನಾಯಕರುಗಳನ್ನು ಬದಲಿಸಿದ್ದು ಶ್ರೀಲಂಕಾ ತಂಡ. ಇದೀಗ ಲಂಕಾ ತಂಡದ ದಾಖಲೆಯನ್ನು ಟೀಮ್ ಇಂಡಿಯಾ ಸರಿಗಟ್ಟಿದೆ.
3 / 12
2017 ರಲ್ಲಿ ಶ್ರೀಲಂಕಾ ತಂಡವು 7 ನಾಯಕರಗಳನ್ನು ಕಣಕ್ಕಿಳಿಸಿತ್ತು. ಇದೀಗ ಒಂದೇ ವರ್ಷದಲ್ಲಿ ಟೀಮ್ ಇಂಡಿಯಾವನ್ನು 7 ಕ್ಯಾಪ್ಟನ್ಗಳು ಮುನ್ನಡೆಸಿದ್ದಾರೆ. ಈ ಮೂಲಕ ಒಂದು ವರ್ಷದಲ್ಲಿ 6 ನಾಯಕರಗಳನ್ನು ಕಣಕ್ಕಿಳಿಸಿದ ಆಸ್ಟ್ರೇಲಿಯಾ (2021), ಜಿಂಬಾಬ್ವೆ (2001), ಇಂಗ್ಲೆಂಡ್ (2011) ತಂಡಗಳ ದಾಖಲೆಯನ್ನು ಟೀಮ್ ಇಂಡಿಯಾ ಹಿಂದಿಕ್ಕಿದೆ.
4 / 12
ಇನ್ನು 1959 ರಲ್ಲಿ ಟೀಮ್ ಇಂಡಿಯಾವನ್ನು ವಿನೂ ಮಂಕಡ್, ಹೇಮು ಅಧಿಕಾರಿ, ದತ್ತಾ ಗಾಯಕ್ವಾಡ್, ಪಂಕಜ್ ರಾಯ್ ಮತ್ತು ಗುಲಾಬ್ರೈ ರಾಮಚನ್ ಮುನ್ನಡೆಸಿದ್ದರು. ಅಂದರೆ ಒಂದು ವರ್ಷದಲ್ಲಿ ಭಾರತ ತಂಡವನ್ನು 5 ನಾಯಕರಗಳು ಮುನ್ನಡೆಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 7 ನಾಯಕರುಗಳು ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.
5 / 12
ಈ ವರ್ಷ ಕಣಕ್ಕಿಳಿದ ಟೀಮ್ ಇಂಡಿಯಾ ನಾಯಕರುಗಳ ಪಟ್ಟಿ ಹೀಗಿದೆ
6 / 12
ವಿರಾಟ್ ಕೊಹ್ಲಿ (ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಪಂದ್ಯ)
7 / 12
ಕೆಎಲ್ ರಾಹುಲ್ (ಸೌತ್ ಆಫ್ರಿಕಾ ವಿರುದ್ದದ ಏಕದಿನ ಸರಣಿ)
8 / 12
ರೋಹಿತ್ ಶರ್ಮಾ (ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ವಿರುದ್ದದ ಸರಣಿ)
9 / 12
ರಿಷಭ್ ಪಂತ್ (ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿ)
10 / 12
ಹಾರ್ದಿಕ್ ಪಾಂಡ್ಯ (ಐರ್ಲೆಂಡ್ ವಿರುದ್ದದ ಟಿ20 ಸರಣಿ)
11 / 12
ಜಸ್ಪ್ರೀತ್ ಬುಮ್ರಾ (ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯ)
12 / 12
ಶಿಖರ್ ಧವನ್ (ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿ)