IND vs IRE: ಚಾಹಲ್ ದಾಖಲೆ ಮುರಿದು 2ನೇ ಸ್ಥಾನಕ್ಕೇರಿದ ಅರ್ಶ್‌ದೀಪ್ ಸಿಂಗ್..!
Arshdeep Singh: 51 ಎಸೆತಗಳಲ್ಲಿ 72 ರನ್ ಸಿಡಿಸಿ ಐರ್ಲೆಂಡ್ ಗೆಲುವಿಗಾಗಿ ಹೋರಾಡುತ್ತಿದ್ದ ಆಂಡ್ರ್ಯೂ ಬಾಲ್ಬಿರ್ನಿ ವಿಕೆಟ್ ಉರುಳಿಸಿದ ವೇಗಿ ಅರ್ಶ್‌ದೀಪ್ ಸಿಂಗ್ ಟಿ20 ಮಾದರಿಯಲ್ಲಿ 50 ವಿಕೆಟ್ ಉರುಳಿಸಿದ ಸಾಧನೆಯನ್ನು ಮಾಡಿದರು. ಅಲ್ಲದೆ ಈ ವಿಕೆಟ್‌ನೊಂದಿಗೆ, ಅರ್ಶ್‌ದೀಪ್ ಟೀಂ ಇಂಡಿಯಾ ಪರ ಕೇವಲ 33 ನೇ ಟಿ20 ಪಂದ್ಯದಲ್ಲಿ 50 ನೇ ವಿಕೆಟ್‌ಗಳನ್ನು ಪೂರೈಸಿದರು.
1 / 10
ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯವನ್ನು ಗೆಲ್ಲುವುದರೊಂದಿಗೆ ಟೀಂ ಇಂಡಿಯಾ 3 ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 186 ರನ್ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಐರ್ಲೆಂಡ್ 152 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ 33 ರನ್ಗಳಿಂದ ಸೋಲೊಪ್ಪಿಕೊಂಡಿತು.
2 / 10
ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ರುತುರಾಜ್, ಸಂಜು ಸ್ಯಾಮ್ಸನ್, ರಿಂಕು ಸಿಂಗ್ ಹಾಗೂ ಶಿವಂ ದುಬೆ ಮಿಂಚಿದರೆ, ಬೌಲಿಂಗ್ನಲ್ಲಿ ಬುಮ್ರಾ, ಪ್ರಸಿದ್ಧ್ ಕೃಷ್ಣ, ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದು ಮಿಂಚಿದರು.
3 / 10
ಇವರೊಂದಿಗೆ 51 ಎಸೆತಗಳಲ್ಲಿ 72 ರನ್ ಸಿಡಿಸಿ ಐರ್ಲೆಂಡ್ ಗೆಲುವಿಗಾಗಿ ಹೋರಾಡುತ್ತಿದ್ದ ಆಂಡ್ರ್ಯೂ ಬಾಲ್ಬಿರ್ನಿ ವಿಕೆಟ್ ಉರುಳಿಸಿದ ವೇಗಿ ಅರ್ಶ್‌ದೀಪ್ ಸಿಂಗ್ ಟಿ20 ಮಾದರಿಯಲ್ಲಿ 50 ವಿಕೆಟ್ ಉರುಳಿಸಿದ ಸಾಧನೆಯನ್ನು ಮಾಡಿದರು.
4 / 10
ಅಲ್ಲದೆ ಈ ವಿಕೆಟ್‌ನೊಂದಿಗೆ, ಅರ್ಶ್‌ದೀಪ್ ಟೀಂ ಇಂಡಿಯಾ ಪರ ಕೇವಲ 33 ನೇ ಟಿ20 ಪಂದ್ಯದಲ್ಲಿ 50 ನೇ ವಿಕೆಟ್‌ಗಳನ್ನು ಪೂರೈಸಿದರು. ಇದರೊಂದಿಗೆ 50 ವಿಕೆಟ್‌ಗಳ ಮೈಲಿಗಲ್ಲನ್ನು ಸಾಧಿಸಿದ ಎಂಟನೇ ಭಾರತೀಯ ಬೌಲರ್ ಮತ್ತು ಕುಲ್ದೀಪ್ ಯಾದವ್ ನಂತರ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡರು.
5 / 10
ಇದಲ್ಲದೆ, ಟಿ20 ಮಾದರಿಯಲ್ಲಿ ಕಡಿಮೆ ಇನ್ನಿಂಗ್ಸ್ ಮತ್ತು ಕಡಿಮೆ ಎಸೆತಗಳಲ್ಲಿ 50 ವಿಕೆಟ್ ಪೂರೈಸಿದ ಭಾರತದ ಬೌಲರ್ಗಳ ಪೈಕಿ ಅರ್ಶ್‌ದೀಪ್, ಯುಜ್ವೇಂದ್ರ ಚಾಹಲ್ ಅವರನ್ನು ಪಟ್ಟಿಯಲ್ಲಿ ಹಿಂದಿಕ್ಕಿದರು. ಇನ್ನು ಈ ಪಟ್ಟಿಯಲ್ಲಿರುವ ಆಟಗಾರರನ್ನು ನೋಡುವುದಾದರೆ..
6 / 10
ಕುಲ್ದೀಪ್ ಯಾದವ್- 29 ಇನ್ನಿಂಗ್ಸ್, 638 ಎಸೆತಗಳು.
7 / 10
ಅರ್ಶ್‌ದೀಪ್ ಸಿಂಗ್- 33 ಇನ್ನಿಂಗ್ಸ್, 663 ಎಸೆತಗಳು.
8 / 10
ಯುಜ್ವೇಂದ್ರ ಚಾಹಲ್- 34 ಇನ್ನಿಂಗ್ಸ್, 800 ಎಸೆತಗಳು.
9 / 10
ಜಸ್ಪ್ರೀತ್ ಬುಮ್ರಾ- 41 ಇನ್ನಿಂಗ್ಸ್, 894 ಎಸೆತಗಳು.
10 / 10
ಭುವನೇಶ್ವರ್ ಕುಮಾರ್- 50 ಇನ್ನಿಂಗ್ಸ್, 1065 ಎಸೆತಗಳು.