‘ನಾನು ಯಾವುದಕ್ಕೂ ವಿಷಾದಿಸುವುದಿಲ್ಲ’; ಬಾಂಗ್ಲಾ ಪ್ರವಾಸದ ವಿವಾದ ಬಗ್ಗೆ ಮೌನ ಮುರಿದ ಹರ್ಮನ್‌ಪ್ರೀತ್ ಕೌರ್

|

Updated on: Aug 21, 2023 | 7:40 AM

Harmanpreet Kaur: ಕಳೆದ ತಿಂಗಳು ಶೇರ್-ಇ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯದ ವೇಳೆ ಅಂಪೈರ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೊನೆಗೂ ಆ ಘಟನೆಯ ಬಗ್ಗೆ ಮೌನ ಮುರಿದಿದ್ದಾರೆ.

1 / 6
ಕಳೆದ ತಿಂಗಳು ಶೇರ್-ಇ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯದ ವೇಳೆ ಅಂಪೈರ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೊನೆಗೂ ಆ ಘಟನೆಯ ಬಗ್ಗೆ ಮೌನ ಮುರಿದಿದ್ದಾರೆ.

2 / 6
ವಾಸ್ತವವಾಗಿ ಬಾಂಗ್ಲಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಅಂಪೈರ್​ಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಅಂಪೈರ್ ನಿರ್ಣಯವನ್ನು ಮೈದಾನದಲ್ಲೇ ಧಿಕ್ಕರಿಸಿ, ತಮ್ಮ ಬ್ಯಾಟ್​ನಿಂದ ವಿಕೆಟ್​ಗಳಿಗೆ ಹೊಡೆದಿದ್ದರು.

3 / 6
ಇಲ್ಲಿಗೆ ನಿಲ್ಲಿಸದ ಹರ್ಮನ್‌ಪ್ರೀತ್, ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಅಂಪೈರ್‌ಗಳು ಪಕ್ಷಪಾತ ತೋರಿದ್ದಾರೆ ಎಂದು ದೂರಿದ್ದರು. ಹಾಗೆಯೇ ಫೋಟೋ ಸೆಷನ್ ವೇಳೆ ಬಾಂಗ್ಲಾದೇಶ ತಂಡದ ನಾಯಕಿಗೆ ಅಂಪೈರ್​ಗಳನ್ನು ಸಹ  ತಮ್ಮೊಂದಿಗೆ ನಿಲ್ಲಿಸಿಕೊಳ್ಳುವಂತೆ ಹೇಳಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಬಾಂಗ್ಲಾ ನಾಯಕಿ ತಮ್ಮ ತಂಡದೊಂದಿಗೆ ಹೊರ ನಡೆದಿದ್ದರು.

4 / 6
ಆ ಬಳಿಕ ಹರ್ಮನ್‌ಪ್ರೀತ್‌ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದ ಐಸಿಸಿ, ಪಂದ್ಯ ಶುಲ್ಕವನ್ನು ಖಡಿತಗೊಳಿಸಿದಲ್ಲದೆ, ಎರಡು ಪಂದ್ಯಗಳ ನಿಷೇಧವನ್ನು ವಿಧಿಸಿತ್ತು. ಇದರರ್ಥ ಅವರು ಮುಂದಿನ ತಿಂಗಳು ಚೀನಾದ ಹ್ಯಾಂಗ್‌ಝೌರ್‌ನಲ್ಲಿ ನಡೆಯಲಿರುವ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ವಾರ್ಟರ್-ಫೈನಲ್ ಮತ್ತು ಪ್ರಾಯಶಃ ಸೆಮಿ-ಫೈನಲ್ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ.

5 / 6
ಇದೀಗ ಆ ಘಟನೆಯ ಬಗ್ಗೆ ಮೌನ ಮುರಿದಿರುವ ಕೌರ್, "ನಾನು ಯಾವುದಕ್ಕೂ ವಿಷಾದಿಸುವುದಿಲ್ಲ ಏಕೆಂದರೆ ಆಟಗಾರನಾಗಿ ದಿನದ ಕೊನೆಯಲ್ಲಿ ನೀವು ನ್ಯಾಯಯುತವಾದ ಸಂಗತಿಗಳು ನಡೆಯುವುದನ್ನು ನೋಡಲು ಬಯಸುತ್ತೀರಿ. ಆಟಗಾರನಾಗಿ ನೀವು ಯಾವಾಗಲೂ ನಿಮ್ಮನ್ನು ಮತ್ತು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಿಮಗೆ ಹಕ್ಕಿದೆ"

6 / 6
"ನಾನು ಯಾವುದೇ ಆಟಗಾರನಿಗೆ ಅಥವಾ ಯಾವುದೇ ವ್ಯಕ್ತಿಗೆ ತಪ್ಪು ಹೇಳಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ನಾನು ಮೈದಾನದಲ್ಲಿ ಏನಾಯಿತು ಎಂದು ಹೇಳಿದ್ದೇನೆ. ನಾನು ಯಾವುದಕ್ಕೂ ವಿಷಾದಿಸುವುದಿಲ್ಲ" ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ.