ಹೊಸ ವಿಶ್ವ ದಾಖಲೆ ನಿರ್ಮಿಸಿದ ಬಾಬರ್ ಆಝಂ
Babar Azam Record: ಏಕದಿನ ಕ್ರಿಕೆಟ್ನಲ್ಲಿ ಮೊದಲ 100 ಇನಿಂಗ್ಸ್ಗಳಲ್ಲಿ 5 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಬಾಬರ್ ಆಝಂ ಪಾತ್ರರಾಗಿದ್ದಾರೆ. ಇನ್ನು ಈ ಪಟ್ಟಿಯಲ್ಲಿರುವ ಟೀಮ್ ಇಂಡಿಯಾ ಆಟಗಾರ ಯಾರು? ವಿರಾಟ್ ಕೊಹ್ಲಿ ಎಷ್ಟನೇ ಸ್ಥಾನದಲ್ಲಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
1 / 9
ಅಫ್ಘಾನಿಸ್ತಾನ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಬಾಬರ್ ಆಝಂ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಇದುವರೆಗೆ ಯಾರು ನಿರ್ಮಿಸದ ದಾಖಲೆ ಎಂಬುದು ವಿಶೇಷ.
2 / 9
ಈ ಪಂದ್ಯದಲ್ಲಿ 53 ರನ್ಗಳನ್ನು ಬಾರಿಸುವ ಮೂಲಕ ಬಾಬರ್ ಮೊದಲ 100 ಏಕದಿನ ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡರು.
3 / 9
ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾದ ಹಾಶಿಮ್ ಆಮ್ಲ ಹೆಸರಿನಲ್ಲಿತ್ತು. ಹಾಶಿಮ್ ಅವರು ಮೊದಲ 100 ಏಕದಿನ ಇನಿಂಗ್ಸ್ಗಳಲ್ಲಿ 17 ಶತಕ ಹಾಗೂ 25 ಅರ್ಧಶತಕಗಳೊಂದಿಗೆ 4946 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು.
4 / 9
ಇದೀಗ 100 ಏಕದಿನ ಇನಿಂಗ್ಸ್ಗಳ ಮೂಲಕ ಬಾಬರ್ ಆಝಂ 5142 ರನ್ ಕಲೆಹಾಕಿದ್ದಾರೆ. ಈ ಮೂಲಕ 100 ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಬಾರಿಸಿದ ಹಾಶಿಮ್ ಆಮ್ಲ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
5 / 9
ಅಷ್ಟೇ ಅಲ್ಲದೆ ಮೊದಲ 100 ಏಕದಿನ ಇನಿಂಗ್ಸ್ಗಳಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆಯನ್ನು ಕೂಡ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 17 ಶತಕ ಬಾರಿಸಿದ್ದ ಆಮ್ಲ ಹೆಸರಿನಲ್ಲಿತ್ತು. ಇದೀಗ ಬಾಬರ್ ಆಝಂ 18 ಶತಕಗಳೊಂದಿಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.
6 / 9
ಇನ್ನು ಏಕದಿನ ಕ್ರಿಕೆಟ್ನಲ್ಲಿ ಮೊದಲ 100 ಇನಿಂಗ್ಸ್ಗಳಲ್ಲಿ 5 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಬಾಬರ್ ಆಝಂ ಪಾತ್ರರಾಗಿದ್ದಾರೆ.
7 / 9
ಟೀಮ್ ಇಂಡಿಯಾ ಪರ ಮೊದಲ 100 ಏಕದಿನ ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಧವನ್ ನೂರು ಇನಿಂಗ್ಸ್ಗಳಲ್ಲಿ 13 ಶತಕ ಹಾಗೂ 25 ಅರ್ಧಶತಕಗಳೊಂದಿಗೆ 4343 ರನ್ ಕಲೆಹಾಕಿದ್ದರು.
8 / 9
ಇನ್ನು ಭಾರತೀಯರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಮೊದಲ ನೂರು ಏಕದಿನ ಇನಿಂಗ್ಸ್ಗಳಲ್ಲಿ 13 ಶತಕ ಹಾಗೂ 23 ಅರ್ಧಶತಕಗಳೊಂದಿಗೆ 4230 ರನ್ ಕಲೆಹಾಕಿದ್ದಾರೆ.
9 / 9
ಇದೀಗ ಇವರೆಲ್ಲರನ್ನೂ ಹಿಂದಿಕ್ಕಿ ಬಾಬರ್ ಆಝಂ ಮೊದಲ 100 ಏಕದಿನ ಇನಿಂಗ್ಸ್ನಲ್ಲಿ 5 ಸಾವಿರಕ್ಕೂ ಹೆಚ್ಚು ರನ್ ಕಲೆಹಾಕುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ.
Published On - 10:16 pm, Thu, 24 August 23