ಲಸಿತ್ ಮಾಲಿಂಗರ ಕಳಪೆ ದಾಖಲೆ ಮುರಿದ ಅರ್ಷದೀಪ್ ಸಿಂಗ್
Arshdeep Singh Records: ಈ ಒಂದು ನೋಬಾಲ್ನೊಂದಿಗೆ ಬೇಡದ ದಾಖಲೆಯೊಂದನ್ನು ಅರ್ಷದೀಪ್ ಸಿಂಗ್ ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.
1 / 8
IND vs IRE, 1st T20I: ಶುಕ್ರವಾರ ನಡೆದ ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 4 ಓವರ್‌ಗಳಲ್ಲಿ 35 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಈ ನಾಲ್ಕು ಓವರ್‌ಗಳಲ್ಲಿ ಯುವ ಎಡಗೈ ಕಡೆಯಿಂದ 1 ನೋಬಾಲ್ ಹಾಗೂ 3 ವೈಡ್ಗಳು ಮೂಡಿಬಂದಿತ್ತು.
2 / 8
ಈ ಒಂದು ನೋಬಾಲ್ನೊಂದಿಗೆ ಬೇಡದ ದಾಖಲೆಯೊಂದನ್ನು ಅರ್ಷದೀಪ್ ಸಿಂಗ್ ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.
3 / 8
ಹೌದು, ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ನೋಬಾಲ್ ಎಸೆದ ಭಾರತೀಯ ಬೌಲರ್ ಎಂಬ ಕೆಟ್ಟ ದಾಖಲೆ ಹೊಂದಿರುವ ಅರ್ಷದೀಪ್ ಸಿಂಗ್, ಇದೀಗ ಈ ಹೀನಾಯ ದಾಖಲೆ ಪಟ್ಟಿಯಲ್ಲಿ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
4 / 8
ಇದಕ್ಕೂ ಮುನ್ನ ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ಇದ್ದರು. 83 ಟಿ20 ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಿದ್ದ ಮಾಲಿಂಗ ಒಟ್ಟು 15 ನೋಬಾಲ್ಗಳನ್ನು ಎಸೆದಿದ್ದರು.
5 / 8
ಇದಿಗ ಕೇವಲ 32 ಟಿ20 ಪಂದ್ಯಗಳನ್ನಾಡಿರುವ ಅರ್ಷದೀಪ್ ಸಿಂಗ್ ಒಟ್ಟು 16 ನೋಬಾಲ್ಗಳನ್ನು ಎಸೆದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ನೋಬಾಲ್ ಮಾಡಿದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
6 / 8
ಇನ್ನು ಈ ಕಳಪೆ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸೌತ್ ಆಫ್ರಿಕಾದ ಮಾಜಿ ವೇಗಿ ಮೋರ್ನೆ ಮೊರ್ಕೆಲ್ 44 ಪಂದ್ಯಗಳಲ್ಲಿ ಒಟ್ಟು 19 ನೋಬಾಲ್ಗಳನ್ನು ಎಸೆದಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ನೋಬಾಲ್ ಎಸೆದ ಕೆಟ್ಟ ದಾಖಲೆಯನ್ನು ಹೊಂದಿದ್ದಾರೆ.
7 / 8
ಹಾಗೆಯೇ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್ ಲೀ, 25 ಟಿ20 ಪಂದ್ಯಗಳಲ್ಲಿ 17 ನೋಬಾಲ್ಗಳನ್ನು ಎಸೆದಿದ್ದಾರೆ.
8 / 8
ಇದೀಗ 16 ನೋಬಾಲ್ಗಳೊಂದಿಗೆ ಅರ್ಷದೀಪ್ ಸಿಂಗ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದಿದ್ದು, ಮುಂಬರುವ ಪಂದ್ಯಗಳಲ್ಲಿ ಇದೇ ತಪ್ಪನ್ನು ಪುನರಾವರ್ತಿಸಿದರೆ ಕೆಟ್ಟ ವಿಶ್ವ ದಾಖಲೆಯೊಂದು ಟೀಮ್ ಇಂಡಿಯಾ ವೇಗಿಯ ಪಾಲಾಗಬಹುದು.