ಕ್ವಾರ್ಟರ್ ಫೈನಲ್ ತಲುಪಿದ ಎಚ್‌ಎಸ್ ಪ್ರಣಯ್; ಟೂರ್ನಿಯಿಂದ ಹೊರಬಿದ್ದ ಲಕ್ಷ್ಯ ಸೇನ್
ಪೃಥ್ವಿಶಂಕರ | Updated By: Vimal Kumar
Updated on:
Sep 25, 2024 | 6:05 PM
BWF World Championship 2023: ನಡೆಯುತ್ತಿರುವ BWF ವಿಶ್ವ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತದ ಅಗ್ರ ಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ ಎಚ್‌ಎಸ್ ಪ್ರಣಯ್ ಅವರು ಪ್ರೀ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಗೆಲುವು ದಾಖಲಿಸಿ ಇದೀಗ ಕ್ವಾರ್ಟರ್‌ಫೈನಲ್‌ಗೆ ಎಂಟ್ರಿಕೊಟ್ಟಿದ್ದಾರೆ.
1 / 8
ನಡೆಯುತ್ತಿರುವ BWF ವಿಶ್ವ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತದ ಅಗ್ರ ಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ ಎಚ್‌ಎಸ್ ಪ್ರಣಯ್ ಅವರು ಪ್ರೀ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಗೆಲುವು ದಾಖಲಿಸಿ ಇದೀಗ ಕ್ವಾರ್ಟರ್‌ಫೈನಲ್‌ಗೆ ಎಂಟ್ರಿಕೊಟ್ಟಿದ್ದಾರೆ.
2 / 8
ಪ್ರಣಯ್ ತಮ್ಮ ಪ್ರೀ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಮಾಜಿ ಚಾಂಪಿಯನ್ ಲೋಹ್ ಕೀನ್ ಯೂ ಅವರನ್ನು 21-18, 15-21, 21-19 ಅಂತರದಿಂದ ಸೋಲಿಸಿ ಕೊನೆಯ ಎಂಟರ ಘಟಕ್ಕೆ ಟಿಕೆಟ್ ಖಚಿತಪಡಿಸಿಕೊಂಡಿದ್ದಾರೆ.
3 / 8
ಮೊದಲ ಗೇಮ್ ಅನ್ನು 21-18 ರಿಂದ ಗೆದ್ದು ಶುಭಾರಂಭ ಮಾಡಿದ ಪ್ರಣಯ್, ಎರಡನೇ ಗೇಮ್‌ನಲ್ಲಿ 15-21ರಿಂದ ಹಿನ್ನಡೆ ಅನುಭವಿಸಿದರು. ಆದರೆ 21-19 ಅಂತರದಿಂದ ಮೂರನೇ ಸೆಟ್ ಗೆದ್ದ ಪ್ರಣಯ್, ಕ್ವಾರ್ಟರ್ ಫೈನಲ್ ತಲುಪಿದರು.
4 / 8
ಇದೀಗ ಪ್ರಣಯ್ ತಮ್ಮ ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್‌ನ ವಿಶ್ವದ ನಂಬರ್ ಒನ್ ಷಟ್ಲರ್ ವಿಕ್ಟರ್ ಆಕ್ಸೆಲ್ಸನ್ ಅವರನ್ನು ಎದುರಿಸಲಿದ್ದಾರೆ.
5 / 8
ಮತ್ತೊಂದೆಡೆ, ಪ್ರಸ್ತುತ ವಿಶ್ವದ 11ನೇ ಶ್ರೇಯಾಂಕದ 22 ವರ್ಷದ ಲಕ್ಷ್ಯ ಸೇನ್ ಥಾಯ್ಲೆಂಡ್‌ನ ಕುನ್ಲಾವುಟ್ ವಿಟಿಡ್ಸರ್ನ್ ವಿರುದ್ಧ 21-14, 16-21, 21-13 ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
6 / 8
ಪುರುಷರ ಡಬಲ್ಸ್ ವಿಭಾಗದಲ್ಲಿ ವಿಶ್ವದ ನಂ.2 ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಇಂಡೋನೇಷ್ಯಾದ ಲಿಯೊ ರೋಲಿ ಕಾರ್ನಾಂಡೊ ಮತ್ತು ಡೇನಿಯಲ್ ಮಾರ್ಟಿನ್ ವಿರುದ್ಧ 21-15, 19-21, 21-9 ಸೆಟ್‌ಗಳಿಂದ ಜಯಗಳಿಸಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು.
7 / 8
ಸಾತ್ವಿಕ್-ಸಿರಾಜ್ ಜೋಡಿ ಕಳೆದ ಆವೃತ್ತಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಈ ವರ್ಷ ಚಿನ್ನದ ಪದಕವನ್ನು ಬಾಚಿಕೊಳ್ಳುವ ನಿರೀಕ್ಷೆಯಿದೆ. ಅವರು ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ 11 ನೇ ಶ್ರೇಯಾಂಕದ ಕಿಮ್ ಅಸ್ಟ್ರಪ್ ಮತ್ತು ಡೆನ್ಮಾರ್ಕ್‌ನ ಆಂಡರ್ಸ್ ಸ್ಕಾರಪ್ ರಾಸ್ಮುಸ್ಸೆನ್ ಅವರನ್ನು ಎದುರಿಸಲಿದ್ದಾರೆ.
8 / 8
ಆದರೆ, ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಭಾರತದ ಮಹಿಳಾ ಷಟ್ಲರ್‌ಗಳಿಗೆ ಇದು ಸ್ಮರಣೀಯ ದಿನವಾಗಿರಲಿಲ್ಲ. ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು 16 ರ ಸುತ್ತಿನ ಪಂದ್ಯದಲ್ಲಿ 14-21, 9-21 ರಿಂದ ಚೀನಾದ ಅಗ್ರ ಶ್ರೇಯಾಂಕದ ಜೋಡಿಯಾದ ಚೆನ್ ಕಿಂಗ್ ಚೆನ್ ಮತ್ತು ಜಿಯಾ ಯಿ ಫ್ಯಾನ್ ವಿರುದ್ಧ ದೊಡ್ಡ ಸೋಲನ್ನು ಅನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದರು.
Published On - 11:26 am, Fri, 25 August 23