BrahMos-NG: ಮುಂದಿನ ತಲೆಮಾರಿನ ಕಾರ್ಯತಂತ್ರದ ಆಯುಧ ‘ಬ್ರಹ್ಮೋಸ್ ಎನ್‌ಜಿ’ ಅನಾವರಣ

ಭಾರತ ಮತ್ತು ರಷ್ಯಾಗಳು ಜಂಟಿಯಾಗಿ ನಿರ್ಮಿಸಿರುವ ಬ್ರಹ್ಮೋಸ್ ಕ್ಷಿಪಣಿ ಮಹತ್ವದ ಕಾರ್ಯತಂತ್ರದ ಆಯುಧ ಎಂದು ಪರಿಗಣಿಸಲಾಗಿದೆ. ಕ್ಷಿಪಣಿ ನಿರ್ಮಾಣ ಸಂಸ್ಥೆ ಬ್ರಹ್ಮೋಸ್ ಇತ್ತೀಚೆಗೆ ತಾನು ಹೊಸ ತಲೆಮಾರಿನ ಬ್ರಹ್ಮೋಸ್ ಎನ್‌ಜಿ ಕ್ಷಿಪಣಿಯ ಆರಂಭಿಕ ವಿನ್ಯಾಸವನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಿದೆ.

Important Highlight‌
BrahMos-NG: ಮುಂದಿನ ತಲೆಮಾರಿನ ಕಾರ್ಯತಂತ್ರದ ಆಯುಧ 'ಬ್ರಹ್ಮೋಸ್ ಎನ್‌ಜಿ' ಅನಾವರಣ
ಬ್ರಹ್ಮೋಸ್ ಕ್ಷಿಪಣಿ
Follow us
TV9 Digital Desk
| Updated By: Rakesh Nayak Manchi

Updated on: Jun 30, 2023 | 8:52 PM

ಭಾರತ ಮತ್ತು ರಷ್ಯಾ ಜಂಟಿಯಾಗಿ ನಿರ್ಮಿಸಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಜಗತ್ತಿನಾದ್ಯಂತ ಒಂದು ಮಹತ್ವದ ಕಾರ್ಯತಂತ್ರದ ಆಯುಧ ಎಂದು ಪರಿಗಣಿಸಲಾಗಿದೆ. ಭಾರತ ಮತ್ತು ರಷ್ಯಾ ಸಹಯೋಗದ ಕ್ಷಿಪಣಿ ನಿರ್ಮಾಣ ಸಂಸ್ಥೆಯಾದ ಬ್ರಹ್ಮೋಸ್ ಇತ್ತೀಚೆಗೆ ತಾನು ಹೊಸ ತಲೆಮಾರಿನ ಬ್ರಹ್ಮೋಸ್ ಎನ್‌ಜಿ (BrahMos-NG) ಕ್ಷಿಪಣಿಯ ಆರಂಭಿಕ ವಿನ್ಯಾಸವನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಿದೆ.

ಕ್ಷಿಪಣಿ ಉತ್ಪಾದಕ ಸಂಸ್ಥೆಯ ರಫ್ತು ನಿರ್ದೇಶಕರು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಜೊತೆ ಮಾತನಾಡುತ್ತಾ, ಮುಂದಿನ ತಲೆಮಾರಿನ ಕ್ಷಿಪಣಿ ಬ್ರಹ್ಮೋಸ್ ಎನ್‌ಜಿ ವಿನ್ಯಾಸವನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲೇ ಅದರ ನಿರ್ಮಾಣ ಆರಂಭಗೊಳ್ಳಲಿದೆ ಎಂದಿದ್ದಾರೆ. ಕಳೆದ ವಾರ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್ ಮಾರಿಟೈಮ್ ಡಿಫೆನ್ಸ್ ಶೋನಲ್ಲಿ ಭಾಗವಹಿಸಿದ ಅವರು ಬ್ರಹ್ಮೋಸ್ ಕ್ಷಿಪಣಿಯ ಅತ್ಯಾಧುನಿಕ ಮಾದರಿಯ ಕುರಿತ ಮಾಹಿತಿಗಳನ್ನು ಒದಗಿಸಿದರು.

ಬ್ರಹ್ಮೋಸ್ ಎನ್‌ಜಿ (ನೆಕ್ಸ್ಟ್ ಜನರೇಶನ್) ಎನ್ನುವುದು ಪ್ರಸ್ತುತ ಬಳಕೆಯಲ್ಲಿರುವ ಬ್ರಹ್ಮೋಸ್ ಕ್ಷಿಪಣಿಯ, ಗಾತ್ರದಲ್ಲಿ ಸಣ್ಣದಾದ ಆವೃತ್ತಿಯಾಗಿರಲಿದೆ. ಇದು ಪ್ರಸ್ತುತ ಬಳಕೆಯಲ್ಲಿರುವ ಬ್ರಹ್ಮೋಸ್ ಕ್ಷಿಪಣಿಯಷ್ಟೇ ವ್ಯಾಪ್ತಿ ಮತ್ತು ವೇಗ ಹೊಂದಿದ್ದು, ಅದರ ಗಾತ್ರ ಮತ್ತು ಭಾರ ಕೊಂಚ ಕಡಿಮೆಯಾಗಿರಲಿದೆ. ಪ್ರಸ್ತುತ ಕ್ಷಿಪಣಿಯ ಉದ್ದ 9 ಮೀಟರ್ ಆಗಿದ್ದು, ಹೊಸ ಕ್ಷಿಪಣಿ ಕೇವಲ 6 ಮೀಟರ್ ಆಗಿರಲಿದೆ.

6 ಮೀಟರ್ ಉದ್ದದ, 1.5 ಟನ್ ಭಾರದ ಬ್ರಹ್ಮೋಸ್ ಎನ್‌ಜಿ ಮುಂದಿನ ವರ್ಷದಲ್ಲಿ ಸೇನಾ ಸೇವೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಗಳಿವೆ. ಈ ಕ್ಷಿಪಣಿ ರಾಷ್ಟ್ರೀಯ ಭದ್ರತೆ ಒದಗಿಸುವ ಸೇನಾಪಡೆಗಳಿಗೆ ಇನ್ನಷ್ಟು ಮೇಲುಗೈ ಒದಗಿಸುವುದರಿಂದ, ನವದೆಹಲಿ ಈ ಕ್ಷಿಪಣಿಯ ತಯಾರಿಯನ್ನು ಸಂಭ್ರಮಿಸುತ್ತಿದೆ. ಜಗತ್ತಿನ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ಷಿಪಣಿ ಎಂದು ಹೆಸರಾಗಿರುವ ಬ್ರಹ್ಮೋಸ್ ಕ್ಷಿಪಣಿಯ ಹೊಸ ಆವೃತ್ತಿ ಭಾರತೀಯ ಸೇನಾಪಡೆಗಳಿಗೆ ಸೇರ್ಪಡೆಗೊಳ್ಳಲಿದೆ.

ಬ್ರಹ್ಮೋಸ್ ಕ್ಷಿಪಣಿಯ ಆರಂಭ

1998ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ರಷ್ಯಾದ ಎನ್‌ಪಿಓ ಮಷಿನೋಸ್ಟ್ರೋಯೆನಿಯ ಸಂಸ್ಥೆಗಳು ಜಂಟಿಯಾಗಿ ಬ್ರಹ್ಮೋಸ್ ಏರೋಸ್ಪೇಸ್ ಅನ್ನು ಸ್ಥಾಪಿಸಿದವು. ಇದು ಬ್ರಹ್ಮೋಸ್ ಕ್ಷಿಪಣಿಯನ್ನು ಉತ್ಪಾದಿಸುವ ಜಂಟಿ ಉದ್ಯಮವಾಗಿದೆ. ಈ ಪ್ರಸಿದ್ಧ ಕ್ಷಿಪಣಿಗೆ ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೋಸ್ಕ್‌ವಾ ನದಿಗಳ ಹೆಸರನ್ನು ಸಂಯೋಜಿಸಿ ಬ್ರಹ್ಮೋಸ್ ಎಂದು ಹೆಸರಿಡಲಾಗಿದೆ.

ಬ್ರಹ್ಮೋಸ್ ಏರೋಸ್ಪೇಸ್ ತಮ್ಮ ನೂತನ ಕ್ಷಿಪಣಿಯನ್ನು ಜಗತ್ತಿನಾದ್ಯಂತ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ಷಿಪಣಿ ಎಂದು ಪ್ರಚಾರ ನಡೆಸುತ್ತಿದ್ದು, ಇದನ್ನು ಭೂಮಿ, ಆಕಾಶ, ಸಮುದ್ರ ಮತ್ತು ಸಾಗರದಾಳದ ನೌಕೆಗಳಿಂದಲೂ ಉಡಾಯಿಸಬಹುದಾಗಿದೆ. ಈ ಕ್ಷಿಪಣಿ ಗರಿಷ್ಠ 290 ಕಿಲೋಮೀಟರ್‌ಗಳನ್ನು 2.8 ಮ್ಯಾಕ್ ವೇಗದಲ್ಲಿ ಕ್ರಮಿಸಬಲ್ಲದಾಗಿದ್ದು, ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚಿನ ವೇಗ ಹೊಂದಿದೆ.

ಬ್ರಹ್ಮೋಸ್ ಕ್ಷಿಪಣಿಯ ಪ್ರಸ್ತುತ ಬಳಕೆಯಲ್ಲಿರುವ ಆವೃತ್ತಿಗಳು:

ಪ್ರಸ್ತುತ ಬ್ರಹ್ಮೋಸ್ ಕ್ಷಿಪಣಿಯ ಮೂರು ಮಾದರಿಗಳು ಬಳಕೆಯಲ್ಲಿವೆ. ಅವೆಂದರೆ, ಭೂಮಿಯಿಂದ ಭೂಮಿಗೆ, ಗಾಳಿಯಲ್ಲಿ ಮತ್ತು ಸಬ್‌ಮರೀನ್​ನಿಂದ ದಾಳಿ ನಡೆಸುವ ಆವೃತ್ತಿಗಳಾಗಿವೆ. ಇದರ ಆರಂಭಿಕ ಪರೀಕ್ಷೆಗಾಗಿ, ಬ್ರಹ್ಮೋಸ್ ಸರ್ಫೇಸ್ ಟು ಸರ್ಫೇಸ್ ಮಾದರಿಯನ್ನು ಪೂರ್ವ ಭಾರತದ ಒಡಿಶಾ ರಾಜ್ಯದ, ಬಾಲಾಸೋರ್ ಜಿಲ್ಲೆಯಲ್ಲಿರುವ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಲ್ಲಿ ನಡೆಸಲಾಯಿತು. ಇದರ ಬಳಿಕ, ಕ್ಷಿಪಣಿಯನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿ, 2007ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಯಿತು.

ಇದನ್ನೂ ಓದಿ: Putin on Make in India: ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

2009ರಲ್ಲಿ, ಬ್ರಹ್ಮೋಸ್ ಕ್ಷಿಪಣಿಗೆ ಸಂಚರಣಾ ವ್ಯವಸ್ಥೆಯನ್ನು (ನ್ಯಾವಿಗೇಶನ್) ಅಳವಡಿಸಿ, ಅದೇ ವರ್ಷ ಪರೀಕ್ಷಾ ಪ್ರಯೋಗ ನಡೆಸಲಾಯಿತು. ಅದರ ನಂತರದ ವರ್ಷದಲ್ಲಿ, ಬ್ರಹ್ಮೋಸ್ ಕ್ಷಿಪಣಿ ಸ್ಟೀಪ್-ಡೈವ್ ಮಾದರಿಯಲ್ಲಿ ಸೂಪರ್‌ಸಾನಿಕ್ ವೇಗ ತಲುಪಿದ ಮೊದಲ ಕ್ರೂಸ್ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2020ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುವ ಬ್ರಹ್ಮೋಸ್ ಸರ್ಫೇಸ್ ಟು ಸರ್ಫೇಸ್ ಕ್ಷಿಪಣಿಯನ್ನು ಪರೀಕ್ಷಾ ಪ್ರಯೋಗಕ್ಕೆ ಒಳಪಡಿಸಿತು. ಇದರಲ್ಲಿ ಕ್ಷಿಪಣಿಯ ವ್ಯಾಪ್ತಿ 290 ಕಿಲೋಮೀಟರ್‌ನಿಂದ 350 ಕಿಲೋಮೀಟರ್‌ಗೆ ಹೆಚ್ಚಿಸಲಾಗಿತ್ತು.

BrahMos NG

ಬ್ರಹ್ಮೋಸ್

ಸಬ್‌ಮರೀನ್ ಆವೃತ್ತಿ

2013ರಲ್ಲಿ, ಬಂಗಾಳ ಕೊಲ್ಲಿಯಲ್ಲಿ ನೀರಿನಾಳದಿಂದ ಭಾರತೀಯ ನಿರ್ಮಾಣದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಲಂಬ ಉಡಾವಣೆ ನಡೆಸಲಾಯಿತು. ಇದು ಬ್ರಹ್ಮೋಸ್ ಸಬ್‌ಮರೀನ್ ಆವೃತ್ತಿಯ ಮೊತ್ತ ಮೊದಲ ಪರೀಕ್ಷಾ ಪ್ರಯೋಗವಾಗಿತ್ತು. ಇದನ್ನು ನೀರಿನಾಳದಲ್ಲಿ 40-50 ಮೀಟರ್ ಆಳದಿಂದಲೂ ಉಡಾವಣೆಗೊಳಿಸಬಹುದು.

ಈ ಕ್ಷಿಪಣಿಯ ನೌಕಾದಳದ ಆವೃತ್ತಿಯನ್ನು (ನೌಕೆಯಿಂದ ಉಡಾವಣೆ) ಭಾರತೀಯ ನೌಕಾಪಡೆ 2005ರಲ್ಲೇ ಒಪ್ಪಿಕೊಂಡಿತ್ತು. ಈ ಆವೃತ್ತಿ ಇತರ ಆವೃತ್ತಿಗಳಿಗೂ ಮೊದಲೇ ಸ್ವೀಕರಿಸಲ್ಪಟ್ಟಿತ್ತು. ಪ್ರಸ್ತುತ, ಭಾರತೀಯ ನೌಕಾಪಡೆ ಬಹುಪಾಲು ತನ್ನಲ್ಲಿರುವ ಸಾಂಪ್ರದಾಯಿಕ ಕ್ಷಿಪಣಿಗಳ ಮೇಲೆಯೇ ಅವಲಂಬಿತವಾಗಿದೆ.

ಗಾಳಿಯಿಂದ ಉಡಾವಣೆಗೊಳಿಸಬಲ್ಲ ಬ್ರಹ್ಮೋಸ್ ಆವೃತ್ತಿಗಳು

ಬ್ರಹ್ಮೋಸ್ ಏರೋಸ್ಪೇಸ್ ಬ್ರಹ್ಮೋಸ್ ಎಎಲ್‌ಸಿಎಂ (ಏರ್ ಲಾಂಚ್ಡ್ ಕ್ರೂಸ್ ಮಿಸೈಲ್) ಅನ್ನು ಅಭಿವೃದ್ಧಿ ಪಡಿಸಿದ್ದು, ಇದು ಭೂಮಿ ಮತ್ತು ಸಾಗರದ ಮೇಲಿನ ಗುರಿಗಳ ಮೇಲೆ ಅತ್ಯಂತ ಕರಾರುವಾಕ್ಕಾದ ನಿಖರತೆಯೊಡನೆ ದಾಳಿ ನಡೆಸಬಲ್ಲದು. ಇದನ್ನು ಭಾರತೀಯ ವಾಯುಪಡೆಯ ಮುಂಚೂಣಿ ಯುದ್ಧ ವಿಮಾನವಾದ ಸುಖೋಯಿ – 30ಎಂಕೆಐ ಮೂಲಕ ಪ್ರಯೋಗಿಸಲಾಗುತ್ತದೆ.

ಪ್ರಸ್ತುತ, ಸು-30 ಎಂಕೆಐ ಭಾರತದ ಯುದ್ಧ ವಿಮಾನಗಳ ಬಳಗದ ಪ್ರಮುಖ ವಿಮಾನವಾಗಿದೆ. 2017ರಲ್ಲಿ, ಒಂದು ಸುಖೋಯಿ-30ಎಂಕೆಐ ವಿಮಾನದ ಮೂಲಕ ಬ್ರಹ್ಮೋಸ್ ಕ್ಷಿಪಣಿಯ ವಾಯು ಉಡಾವಣಾ ಆವೃತ್ತಿಯನ್ನು ಮೊದಲ ಬಾರಿಗೆ ಪ್ರಯೋಗಿಸಲಾಯಿತು. ಆ ಕ್ಷಿಪಣಿ ಬಂಗಾಳ ಕೊಲ್ಲಿಯಲ್ಲಿನ ಗುರಿಯ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿತ್ತು. ಡಿಸೆಂಬರ್ 2022ರಲ್ಲಿ, ಭಾರತೀಯ ವಾಯುಪಡೆ ಹೆಚ್ಚಿನ ವ್ಯಾಪ್ತಿ ಹೊಂದಿರುವ ಕ್ಷಿಪಣಿಯ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿತು. ಇದು ಅಂದಾಜು 450 ಕಿಲೋಮೀಟರ್ ವ್ಯಾಪ್ತಿ ಹೊಂದಿತ್ತು.

ಬ್ರಹ್ಮೋಸ್ ಕ್ಷಿಪಣಿಯ ಭವಿಷ್ಯ

ಬ್ರಹ್ಮೋಸ್-II ಕ್ಷಿಪಣಿಯ ಉತ್ಪಾದಕ ಸಂಸ್ಥೆ ಪ್ರಸ್ತುತ ಇನ್ನಷ್ಟು ಹೆಚ್ಚಿನ ವ್ಯಾಪ್ತಿ ಹೊಂದಿರುವ ಕ್ಷಿಪಣಿಯ ಆವೃತ್ತಿಯನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದೆ. ಈ ಅಭಿವೃದ್ಧಿ ಹೊಂದಿದ ಆವೃತ್ತಿ ಪ್ರಸ್ತುತ ಹೊಂದಿರುವ 290 ಕಿಲೋಮೀಟರ್ ವ್ಯಾಪ್ತಿಗಿಂತ ಹೆಚ್ಚಾಗಿ, 600 ಕಿಲೋಮೀಟರ್ ವ್ಯಾಪ್ತಿ ಹೊಂದುವ ನಿರೀಕ್ಷೆಯಿದೆ.

ಅದರ ಜೊತೆಗೆ, ಈ ನೂತನ ಆವೃತ್ತಿಯ ಕ್ಷಿಪಣಿ ಗರಿಷ್ಠ 8 ಮ್ಯಾಕ್ ವೇಗ ತಲುಪುವ ನಿರೀಕ್ಷೆಗಳಿವೆ. ಆ ಮೂಲಕ ಇದು ಜಗತ್ತಿನ ಅತ್ಯಂತ ವೇಗದ ಹೈಪರ್‌ಸಾನಿಕ್ ಕ್ಷಿಪಣಿ ಎನಿಸಿಕೊಳ್ಳಲಿದೆ. ಇದು ಭಾರತೀಯ ಸೇನಾಪಡೆಗಳ ಮೂರೂ ವಿಭಾಗಗಳಿಗೆ ಶತ್ರುಗಳ ಪ್ರದೇಶದ ಒಳಗೆ ಅತ್ಯಂತ ನಿಖರ ದಾಳಿ ನಡೆಸುವ ಸಾಮರ್ಥ್ಯ ಒದಗಿಸಲಿದೆ.

Girish Linganna

ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು