ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ತಮಗೆ ಟಿಕೆಟ್ ಸಿಗಲಿಲ್ಲ ಎಂದು ಭಾರತ್ ರಾಷ್ಟ್ರ ಸಮಿತಿ(BRS)ಮುಖಂಡ ಹಾಗೂ ತೆಲಂಗಾಣದ ಮಾಜಿ ಉಪಮುಖ್ಯಮಂತ್ರಿ ತಾಟಿಕೊಂಡ ರಾಜಯ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಘಾನ್‌ಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ಗಾಗಿ ಅವರು ಬೇಡಿಕೆ ಇಟ್ಟಿದ್ದರು ಆದರೆ ಪಕ್ಷವು ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದೆ. ಈ ವರ್ಷದ ಕೊನೆಯಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲವಾದರೂ, ಮುಂಬರುವ ಚುನಾವಣಾ ದಿನಾಂಕಗಳನ್ನು ಘೋಷಿಸುವ ಮೊದಲೇ ಬಿಆರ್‌ಎಸ್ ಪಕ್ಷವು ಆಗಸ್ಟ್ 21 ರಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ವರದಿಗಳ ಪ್ರಕಾರ, ತಾಟಿಕೊಂಡ ರಾಜಯ್ಯ ಅವರ ಸ್ವಂತ ಪಕ್ಷದ ಗ್ರಾಮ ಸರಪಂಚರಿಂದ ಲೈಂಗಿಕ ಕಿರುಕುಳದ ಆರೋಪವಿದೆ.
ಈ ಆರೋಪಗಳಿಂದಾಗಿ ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿದೆ. ಕದಿಯಂ ಶ್ರೀಹರಿಯವರಿಗೆ ಪಕ್ಷವು ಘನಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಮತ್ತಷ್ಟು ಓದಿ: ತೆಲಂಗಾಣದಲ್ಲಿ ಹಿಂದುತ್ವದ ಮೇಲೆ ಚುನಾವಣೆ: ಬಿಜೆಪಿ ಶಾಸಕ ಯತ್ನಾಳ್
ಸದ್ಯ ತೆಲಂಗಾಣದಲ್ಲಿ ಬಿಆರ್ ಎಸ್ ಪಕ್ಷ ಅಧಿಕಾರದಲ್ಲಿದೆ. ಸಿಎಂ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಮುಂಬರುವ ಚುನಾವಣೆಯಲ್ಲಿ 95 ರಿಂದ 105 ಸ್ಥಾನಗಳನ್ನು ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಆರ್ ಎಸ್ ಪಟ್ಟಿಯ ಪ್ರಕಾರ ಸಿಎಂ ಕೆಸಿಆರ್ ಗಜ್ವೆಲ್ ಮತ್ತು ಕಾಮರೆಡ್ಡಿಯಿಂದ ಸ್ಪರ್ಧಿಸಲಿದ್ದಾರೆ.
#WATCH | Jangaon, Telangana: Bharat Rashtra Samithi (BRS) leader Thatikonda Rajaiah, broke down reportedly after being denied a ticket from Station Ghanpur constituency for the upcoming Assembly elections. (22.08)
(Viral video) pic.twitter.com/4KXtqG15LT
— ANI (@ANI) August 23, 2023
ಸೋಮವಾರ (ಆ.21) ಸುದ್ದಿಗಾರರೊಂದಿಗೆ ಮಾತನಾಡಿದ ಬಿಆರ್ ಎಸ್ ಮುಖ್ಯಸ್ಥ ಕೆ.ಕೆ. ಚಂದ್ರಶೇಖರ್ ರಾವ್ ಅವರು ನಮ್ಮ ಅಂದಾಜಿನ ಪ್ರಕಾರ ನಾವು 95 ರಿಂದ 105 ಸ್ಥಾನಗಳನ್ನು ಗೆಲ್ಲುತ್ತೇವೆ. ಕೇವಲ ಶಾಸಕರು ಮಾತ್ರವಲ್ಲ, ಸಂಸದ ಸ್ಥಾನಗಳೂ ಸಹ. ನಾವು 17 (ಲೋಕಸಭಾ) ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದರು. ಅಸಾದುದ್ದೀನ್ ಓವೈಸಿಯವರ ಪಕ್ಷವಾದ ಎಐಎಂಐಎಂ ಜೊತೆ ನಮ್ಮ ಸ್ನೇಹ ಮುಂದುವರಿಯಲಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Wed, 23 August 23