Mothers Of Constitution: ಸಂವಿಧಾನ ರೂಪಿಸುವಲ್ಲಿ ಮಹಿಳೆಯರೂ ಸಕ್ರಿಯ ಪಾತ್ರ ನಿರ್ವಹಿಸಿದ್ದರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ನೀಡಿರುವ ಹೇಳಿಕೆಯು ಸಂವಿಧಾನ ರಚನೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದ ಮಹಿಳೆಯರ ಬಗ್ಗೆ ದೇಶದ ಜನರ ಗಮನ ಸೆಳೆದಿದೆ.

Important Highlight‌
Mothers Of Constitution: ಸಂವಿಧಾನ ರೂಪಿಸುವಲ್ಲಿ ಮಹಿಳೆಯರೂ ಸಕ್ರಿಯ ಪಾತ್ರ ನಿರ್ವಹಿಸಿದ್ದರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್
Follow us
TV9 Digital Desk
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 13, 2023 | 12:24 PM

ಸುಮಾರು ಐದು ವರ್ಷಗಳ ಹಿಂದೆ ತಾವು ನೀಡಿದ್ದ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ (Chief Justice of India – CJ) ಡಿ.ವೈ.ಚಂದ್ರಚೂಡ್ ಇತ್ತೀಚೆಗೆ ವಿವರಣೆ ನೀಡಿದ ಅಪರೂಪದ ವಿದ್ಯಮಾನ ವರದಿಯಾಗಿದೆ. ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಣ ವಿವಾದದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಸಿಜೆ ಚಂದ್ರಚೂಡ್​, ‘ಸಂವಿಧಾನದ ಪಿತೃಗಳು ಮತ್ತು ಮಾತೆಯರು’ ಎಂದು 2018ರಲ್ಲಿ ತಾವು ಹೇಳಿದ್ದೇಕೆ ಎಂದು ವಿವರಿಸಿದರು.

ಚಂದ್ರಚೂಡ್​ ಅವರ 2018ರ ತೀರ್ಪು ಉಲ್ಲೇಖಿಸಿದ ವಕೀಲ ಡಾ ಅಭಿಷೇಕ್ ಮನು ಸಿಂಘ್ವಿ, ‘ಸಂವಿಧಾನದ ಮಾತೆಯರು’ (Founding Mothers of Constitution) ಎಂಬ ಉಲ್ಲೇಖವನ್ನು ನಾನು ಎಲ್ಲಿಯೂ ಓದಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ನ್ಯಾಯಮೂರ್ತಿಯೊಬ್ಬರು ತಮ್ಮ ತೀರ್ಪಿನಲ್ಲಿ ಈ ರೀತಿ ಉಲ್ಲೇಖಿಸಿದ್ದು ಇದೇ ಮೊದಲು’ ಎಂದು ಹೇಳಿದರು.

ಇಬ್ಬರ ವಾದಗಳನ್ನೂ ಆಲಿಸಿದ ನಂತರ ಪ್ರತಿಕ್ರಿಯಿಸಿ ಸಿಜೆ ಚಂದ್ರಚೂಡ್, ‘ಸಂವಿಧಾನದ ಕರಡು ಸಿದ್ಧಪಡಿಸುವಲ್ಲಿ ಹಲವು ಮಹಿಳೆಯರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ತಕ್ಕ ಮನ್ನಣೆ ಸಿಗುವಂತೆ ಆಗಬೇಕು ಎನ್ನುವ ಕಾರಣಕ್ಕೆ ನಾನು ಹೀಗೆ ಹೇಳಿದ್ದೆ’ ಎಂದರು.

‘ತಮ್ಮ ಅಭಿಪ್ರಾಯಕ್ಕೆ ಮತ್ತಷ್ಟು ವಿವರಣೆ ನೀಡಿದ ಅವರು, ‘ತಾಯಂದಿರು ಎಂಬ ಪದವನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ. ಸಂವಿಧಾನದ ಸಭೆಗಳಲ್ಲಿ, ಕರಡು ಸಮಿತಿಗಳಲ್ಲಿ ಮಹಿಳೆಯರು ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಗೌರವ ಸಿಗಬೇಕು. ಮಾನ್ಯತೆ ದೊರೆಯಬೇಕು ಎನ್ನುವ ಕಾರಣಕ್ಕೆ ತಾಯಂದಿರು ಎಂಬ ಪದ ಬಳಸಿದ್ದೆ. ಇಲ್ಲದಿದ್ದರೆ ಅವರಿಗೆ ಸರಿಯಾದ ಕ್ರಮದಲ್ಲಿ ಗೌರವ ಸಲ್ಲಿಸಿದಂತೆ ಆಗುವುದಿಲ್ಲ ಎನಿಸಿತ್ತು. ಸಂವಿಧಾನ ಕರಡು ಸಮಿತಿಯಲ್ಲಿ ದಾಕ್ಷಾಯಿಣಿ ವೇಲಾಯುಧನ್ ಸೇರಿದಂತೆ ಹಲವು ಮಹಿಳೆಯರು ಸಕ್ರಿಯ ಪಾತ್ರ ನಿರ್ವಹಿಸಿದ್ದರು. ಈ ಮಹಿಳೆಯರು ಸಂವಿಧಾನಕ್ಕೆ ಹಲವು ರೀತಿಯಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ’ ಎಂದು ವಿವರಿಸಿದರು.

‘ಸಂವಿಧಾನ ಸಮಿತಿಯಲ್ಲಿ ಹಲವು ಮಹಿಳೆಯರಿದ್ದರು. ಅವರಲ್ಲಿ ಹಲವರಿಗೆ ಪ್ರಬುದ್ಧ ಸಂಗಾತಿಗಳೂ ಇದ್ದರು. ಆದರೆ ಗಂಡನ ಚಾತುರ್ಯ ಅಥವಾ ಸ್ಥಾನಮಾನಗಳ ಹೊರತಾಗಿಯೂ ಈ ಮಹಿಳೆಯರು ಪ್ರತಿಭಾವಂತರಾಗಿದ್ದರು. ದುರ್ಗಾಭಾಯಿ ದೇಶಮುಖ್ ಅವರು ನನ್ನ ಮಾತಿಗೆ ಒಂದು ಉದಾಹರಣೆ ಮಾತ್ರ. ಅವರು ಆದರ್ಶಗಳಿಗಾಗಿ ಹೋರಾಡಿದರು. ಎಷ್ಟೋ ವಿಚಾರಗಳಲ್ಲಿ ತಮ್ಮ ಗಂಡಂದಿರ ವಿಚಾರಗಳಿಗೂ ಇವರ ವಿಚಾರಗಳಿಗೂ ವ್ಯತ್ಯಾಸಗಳಿದ್ದವು. ಹೀಗಾಗಿ ಅವರಿಗೆ ಶಾಸನಸಭೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು’ ಎಂದು ಸಿಂಘ್ವಿ ಪ್ರತಿಕ್ರಿಯಿಸಿದರು.

ಭಾರತ ಸೇರಿದಂತೆ ಹಲವು ದೇಶಗಳು ‘ತಾಯಿನಾಡು’ (Motherland) ಎನ್ನುವ ಭಾವನೆಯನ್ನು ದೇಶದ ಬಗ್ಗೆ ಹೊಂದಿವೆ. ಜರ್ಮನಿಯಂಥ ಕೆಲವೇ ದೇಶಗಳು ‘ತಂದೆನೆಲ’ ಎಂದು ಹೇಳಿಕೊಳ್ಳುತ್ತವೆ ಎಂದೂ ಅಭಿಷೇಕ್ ಮನು ಸಿಂಘ್ವಿ ವಿವರಿಸಿದರು.

ಇದನ್ನೂ ಓದಿ: ಭಾರತ ಸಂವಿಧಾನ ರಕ್ಷಣೆಗೆ ಪ್ರಮಾಣ ಸ್ವೀಕರಿಸಿ, ಸಂವಿಧಾನದ ಪೀಠಿಕೆ ಓದಲು ಕರೆ ನೀಡಿದ ಸಚಿವ ಪ್ರಲ್ಹಾದ್ ಜೋಶಿ

ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Fri, 13 January 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು