My India My Life Goals: ಸತತ 9 ವರ್ಷಗಳಿಂದ ಗಂಗಾನದಿಯನ್ನು ಸ್ವಚ್ಛಗೊಳಿಸುತ್ತಿರುವ ರಾಜೇಶ್ ಶುಕ್ಲಾ

ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಕರ್ತವ್ಯ. ಪರಿಸರವಿಲ್ಲದೆ ಮನುಷ್ಯರಾದ ನಾವಿರಲು ಸಾಧ್ಯವಿಲ್ಲ. ಪರಿಸರ ಸಂರಕ್ಷಣೆ ಮಾಡಲು ನಮ್ಮಲ್ಲಿ ಹುಮ್ಮಸ್ಸು ಹಾಗೂ ಉತ್ಸಾಹ ಮೂಡಲು, ಸತತ 9 ವರ್ಷಗಳಿಂದಲೂ ಪರಿಸರ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿರುವ ರಾಜೇಶ್ ಶುಕ್ಲಾ ಅವರ ಸ್ಪೂರ್ತಿದಾಯಕ ಕಥೆಯನ್ನು ನೋಡೋಣ.

Important Highlight‌
My India My Life Goals: ಸತತ 9 ವರ್ಷಗಳಿಂದ ಗಂಗಾನದಿಯನ್ನು ಸ್ವಚ್ಛಗೊಳಿಸುತ್ತಿರುವ ರಾಜೇಶ್ ಶುಕ್ಲಾ
Follow us
ಮಧುಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 17, 2023 | 4:35 PM

ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. 2023 ರ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರವು ‘ಮೈ ಇಂಡಿಯಾ ಮೈ ಲೈಫ್ ಗೋಲ್’ (My India My Life Goals) ಎಂಬ ವಿಶೇಷ ಆಂದೋಲನಕ್ಕೆ ಚಾಲನೆ ನೀಡಿದೆ. ಈ ಕಾರ್ಯಕ್ರಮವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಒಂದು ಭಾಗವಾಗಿದ್ದು, ಈ ಆಂದೋಲನದ ಮುಖ್ಯ ಉದ್ದೇಶವೆಂದರೆ ಜನರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪರಿಸರ ಸಂರಕ್ಷಣೆಯ ಭಾಗವಾಗುವಂತೆ ಪ್ರೇರೇಪಿಸುವುದು. ಪರಿಸರ ಸಂರಕ್ಷಣೆಯೂ ಕೂಡಾ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ಟಿ.ವಿ9 ಕೂಡಾ ಈ ಅಭಿಯಾನದಲ್ಲಿ ಭಾಗವಹಿಸುತ್ತಿದ್ದು, ಪ್ರತಿಯೊಬ್ಬರೂ ಕೂಡಾ ಪರಿಸರವನ್ನು ಉಳಿಸಬೇಕು ಹಾಗೂ ಪರಿಸರದ ಸ್ವಚ್ಛತೆಯನ್ನು ಕಾಪಾಡಬೇಕೆಂದು ನಾವು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.

ಪರಿಸರ ಸಂರಕ್ಷಣೆಯಲ್ಲಿ ಹಾಗೂ ಮರಗಿಡಗಳನ್ನು ನೆಡುವಲ್ಲಿ ಸಾಲುಮರದ ತಿಮ್ಮಕ್ಕರವರ ಮಹಾನ್ ಸಾಧನೆಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಮರಗಿಡಗಳನ್ನು ಬೆಳೆಸಿದರೆ, ಪರಿಸರವನ್ನು ಉಳಿಸಲು ಸಾಧ್ಯ ಎಂದು ನಮಗೆಲ್ಲರಿಗೂ ಸ್ಪೂರ್ತಿ ತುಂಬಿದ ತಾಯಿಯವರು. ಇಂದು ನಾವು ನಿಮಗೆ ಉತ್ತರ ಪ್ರದೇಶದ ವಾರಣಾಸಿಯ ರಾಜೇಶ್ ಶುಕ್ಲಾ ಅವರ ಸ್ಪೂರ್ತಿದಾಯಕ ಕಥೆಯ ಬಗ್ಗೆ ತಿಳಿಸಿಕೊಡುತ್ತೇವೆ. ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಶುಕ್ಲಾ ಅವರು ಸತತ 9 ವರ್ಷಗಳಿಂದಲೂ ಪರಿಸರ ರಕ್ಷಣೆಯ ಕಾರ್ಯದಲ್ಲಿ ನಿರತರಾಗಿದ್ದಾರೆ.

ಶುಕ್ಲಾ ಅವರ ಪರಿಸರ ಸ್ವಚ್ಛತೆಯ ದಿನಚರಿಯ ಬಗ್ಗೆ ನೋಡುವುದಾದರೆ, ಗಂಗಾ ಶುದ್ದೀಕರಣ ಕಾರ್ಯಕರ್ತರಾಗಿರುವ ರಾಜೇಶ್ ಶುಕ್ಲಾ ತನ್ನ ಕಾರ್ಯಕರ್ತರ ತಂಡದೊಂದಿಗೆ, ಪ್ರತಿದಿನ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿದಿನ ಬೆಳಗ್ಗೆ 5 ಗಂಟೆಗೆ, ರಾಜೇಶ್ ಶುಕ್ಲಾ ಅವರು ತಮ್ಮ ತಂಡದೊಂದಿಗೆ ಸ್ವಚ್ಛತಾ ಕಾರ್ಯಾಚರಣೆಯನ್ನು ಆಯೋಜಿಸಲು ತಮ್ಮ ಸ್ಕೂಟರ್​​ನಲ್ಲಿ ಗಂಗಾ ನದಿಯ ದಡಕ್ಕೆ ಹೋಗುತ್ತಾರೆ. ಪ್ರತಿದಿನ ಅವರು ತಮ್ಮ ತಂಡದೊಂದಿಗೆ ಮೂರು ಗಂಟೆಗಳ ಕಾಲ ನದಿಯನ್ನು ಸ್ವಚ್ಛಗೊಳಿಸುತ್ತಾರೆ. ಹಾಗೂ ಗಂಗಾ ನದಿಯನ್ನು ಸ್ವಚ್ಛವಾಗಿಡಲು ಮತ್ತು ನದಿಯಲ್ಲಿ ಕಸವನ್ನು ಎಸೆಯುವ ಮೂಲಕ ನದಿಯನ್ನು ಕಲುಷಿತಗೊಳಿಸದಂತೆ ಅಲ್ಲಿಗೆ ಬರುವ ಭಕ್ತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಒಂಬತ್ತು ವರ್ಷಗಳಿಂದ, ಶುಕ್ಲಾ ಅವರು ನದಿಯಲ್ಲಿ ಬಿಡುವ ಪಾಲಿಥಿನ್ ಚೀಲಗಳು, ಇನ್ನಿತರ ಕಸಗಳಿಂದ ನದಿನೀರಿಗೆ ಉಂಟಾಗುವಂತಹ ಹಾನಿಕಾರಕ ಸ್ವರೂಪಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: My India My Life Goals; ಮಿಷನ್ ಲೈಫ್ ನೊಂದಿಗೆ ಹೆಜ್ಜೆ ಹಾಕುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ: ಜಿ ಕಿಶನ್ ರೆಡ್ಡಿ. ಕೇಂದ್ರ ಸಚಿವ

ನಾವು ಸಾಮೂಹಿಕ ಜವಬ್ದಾರಿಯನ್ನು ತೆಗೆದುಕೊಂಡರೆ ನಮ್ಮ ಪರಿಸರವು ಸುಧಾರಿಸುತ್ತದೆ ಮತ್ತು ನಮ್ಮ ದೇಶವೂ ಸ್ವಚ್ಛ ಮತ್ತು ಸದೃಢವಾಗುತ್ತದೆ ಹಾಗೂ ಪರಿಸರ ಸಂರಕ್ಷಣೆಗಾಗಿ ನಾವೆಲ್ಲರೂ ಹೋರಾಡಿದರೆ ಮಾತ್ರ ಪರಿಸರ ಸುಧಾರಿಸುತ್ತದೆ ಆಗ ಮಾತ್ರ ಸ್ವಸ್ಥ ಭಾರತ ಉದಯವಾಗುತ್ತದೆ ಎಂದು ರಾಜೇಶ್ ಶುಕ್ಲಾ ಹೇಳುತ್ತಾರೆ. ನಮ್ಮ ರಾಷ್ಟ್ರವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಪರಿಸರಕ್ಕಾಗಿ ಸಂಘಟಿತವಾಗಿ ಹೋರಾಡಲು ಇವರ ಕಥೆ ನಮಗೆ ಸ್ಪೂರ್ತಿ ನೀಡುತ್ತದೆ.

ಮೈ ಇಂಡಿಯಾ ಮೈ ಲೈಫ್ ಗೋಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು