My India My Life Goals: ಪರಿಸರವನ್ನು ಉಳಿಸುವಲ್ಲಿ ಟಿವಿ9ನ ಪಾತ್ರ ದೊಡ್ಡದು ಎಂದು ಶ್ಲಾಘಿಸಿದ ಸಚಿವ ಭೂಪೇಂದ್ರ ಯಾದವ್

| Updated By: ಭಾಸ್ಕರ ಹೆಗಡೆ

Updated on: Jun 30, 2023 | 11:30 AM

ಕೇಂದ್ರ ಸರ್ಕಾರವು 'ಮೈ ಇಂಡಿಯಾ ಮೈ ಲೈಫ್ ಗೋಲ್ಸ್' ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಈ ವಿಶೇಷ ಅಭಿಯಾನದಲ್ಲಿ ಟಿವಿ9 ಸಂಸ್ಥೆ ಸಹ ಪಾಲುದಾರನಾಗಿದೆ.

My India My Life Goals: ಪರಿಸರವನ್ನು ಉಳಿಸುವಲ್ಲಿ ಟಿವಿ9ನ ಪಾತ್ರ ದೊಡ್ಡದು ಎಂದು ಶ್ಲಾಘಿಸಿದ ಸಚಿವ ಭೂಪೇಂದ್ರ ಯಾದವ್
ಭೂಪೇಂದ್ರ ಯಾದವ್
Follow us on

ವಿಶ್ವ ಪರಿಸರ ದಿನದಂದು ಟಿವಿ9 ಕೂಡ ಪ್ರಕೃತಿಯನ್ನು ಸಂರಕ್ಷಿಸುವ ಕೇಂದ್ರ ಸರ್ಕಾರದ ಅಭಿಯಾನದೊಂದಿಗೆ ಕೈ ಜೋಡಿಸಿದೆ ಎಂಬುದರ ಬಗ್ಗೆ ನಿಮಗೆ ತಿಳಿದಿರಬಹುದು. ಇದಕ್ಕಾಗಿ ಕೇಂದ್ರ ಸರ್ಕಾರವು ‘ಮೈ ಇಂಡಿಯಾ ಮೈ ಲೈಫ್ ಗೋಲ್ಸ್(My India My Life Goals) ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಇದರಲ್ಲಿ ಟಿವಿ 9 ಸಂಸ್ಥೆ ಸಹ ಪಾಲುದಾರನಾಗಿದೆ. ಹಾಗಾಗಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ (Bhupendra Yadav) ಅವರು ಪರಿಸರವನ್ನು ಉಳಿಸುವ ಈ ಆಂದೋಲನಕ್ಕೆ ಸೇರಿಕೊಂಡಿದ್ದಕ್ಕಾಗಿ ಟಿವಿ 9 ಅನ್ನು ಅಭಿನಂದಿಸಿದ್ದಾರೆ.

ನಾವು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನ ಪಡುತ್ತಿರುವುದರಿಂದ, ನಮ್ಮ ದೇಶದ ಜನ ಸ್ಫೂರ್ತಿ ಪಡೆಯುತ್ತಾರೆ ಎಂದು ಅವರು ಆಶಿಸಿದ್ದಾರೆ. ಪರಿಸರಕ್ಕೆ ಅನುಗುಣವಾಗಿ ತಮ್ಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ಸಣ್ಣ ಕಾರ್ಯಗಳಿಂದ ಪರಿಸರವನ್ನು ಇನ್ನಷ್ಟು ಉತ್ತಮಗೊಳಿಸಬಹುದು ಎಂಬ ಟಿವಿ 9 ಪರಿಕಲ್ಪನೆಯನ್ನು ಭೂಪೇಂದ್ರ ಯಾದವ್ ಶ್ಲಾಘಿಸಿದರು.

ಇದನ್ನೂ ಓದಿ: My India My Life Goals: ಸಾಮಾನ್ಯರೂ ಪರಿಸರಪರ ಕೆಲಸಕ್ಕೆ ಹೇಗೆ ಕೈಜೋಡಿಸೋದು? ವಿಶ್ವಸಂಸ್ಥೆಯಿಂದ ಮೆಚ್ಚುಗೆ ಪಡೆದ ಆಫ್ರೋಜ್ ಷಾ ಹೇಳಿದ ಟಿಪ್ಸ್

ಏನಿದು ಅಭಿಯಾನ?

ಜೂನ್ 5 ರಂದು ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ‘ಮೈ ಇಂಡಿಯಾ ಮೈ ಲೈಫ್ ಗೋಲ್ಸ್’ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ಲಾಸ್ಟಿಕ್ ನಿಷೇಧಕ್ಕೆ ಪ್ರಧಾನಿ ಮೋದಿಯವರ ಕರೆಯನ್ನು ಬೆಂಬಲಿಸಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಏಕೆ ಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು. ಪರಿಸರವನ್ನು ರಕ್ಷಿಸಲು ಈ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಪರಿಸರವನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅವರು ಈ ಅಭಿಯಾನಕ್ಕೆ ಸೇರಲು ಇಡೀ ದೇಶಕ್ಕೆ ಕರೆ ನೀಡಿದರು.

ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:28 pm, Tue, 27 June 23