ದೆಹಲಿ: ಸಂಗೀತ ಲೋಕದ ಅನನ್ಯ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರು ಆರು ವರ್ಷಗಳ ಕಾಲ ರಾಜ್ಯಸಭೆಯ (Rajya Sabha) ಅಂಗವಾಗಿದ್ದರು. ಈ 6 ವರ್ಷ ಅವಧಿಯಲ್ಲಿ ಅವರು ಯಾವುದೇ ಭತ್ಯೆಗಳನ್ನು ತೆಗೆದುಕೊಳ್ಳಲಿಲ್ಲ. ಬಿಜೆಪಿಯಿಂದ ಬೆಂಬಲಿತರಾಗಿದ್ದ ಲತಾ ಅವರು ನವೆಂಬರ್ 22, 1999 ರಂದು ರಾಜ್ಯಸಭೆಗೆ ಚುನಾಯಿತರಾದರು ಮತ್ತು ನವೆಂಬರ್ 21, 2005 ರವರೆಗೆ ಸದನದ ಭಾಗವಾಗಿದ್ದರು. ಆರ್ಟಿಐ ಪ್ರಕಾರ ಅವರು ತಮ್ಮ ಅವಧಿಯಲ್ಲಿ ಸಂಸದರಾಗಿ ಅವರು ಪಡೆದ ಭತ್ಯೆಗಳು ಮತ್ತು ಚೆಕ್‌ಗಳನ್ನು ಎಂದಿಗೂ ಮುಟ್ಟಲಿಲ್ಲ ಎಂದು ತಿಳಿದುಬಂದಿದೆ. ಪೇ ಅಕೌಂಟ್ಸ್ ಆಫೀಸ್‌ನಿಂದ ಮಂಗೇಶ್ಕರ್‌ಗೆ ಮಾಡಿದ ಎಲ್ಲಾ ಪಾವತಿಗಳನ್ನು ಹಿಂತಿರುಗಿಸಲಾಗಿದೆ ಎಂದು ದಾಖಲೆಗಳು ತೋರಿಸಿವೆ. ಲತಾ ಮಂಗೇಶ್ಕರ್ ಅವರ ಅಧಿಕಾರಾವಧಿಯಲ್ಲಿ ಅವರು ಸದನಕ್ಕೆ ಹಾಜರಾಗಿದ್ದೇ ಕಡಿಮೆ. ಆರು ವರ್ಷಗಳಲ್ಲಿ ಅವರು ಕೇವಲ 12 ದಿನಗಳವರೆಗೆ ಸದನ ಬಂದಿದ್ದಾರೆ. ಅದರಲ್ಲೂ 12 ಪೂರ್ತಿ ದಿನ ಬಂದಿರಲಿಲ್ಲ. ಆ ಆರು ವರ್ಷಗಳಲ್ಲಿ ಅವರು ಕೇಳಿದ್ದು ಅನ್ಸ್ಟಾರ್ಡ್ ಒಂದೇ ಒಂದು ಪ್ರಶ್ನೆ. ಅದು ರೈಲುಗಳ ಹಳಿತಪ್ಪುವಿಕೆಯ ಬಗ್ಗೆ ಆಗಿತ್ತು. ವಿವಿಧ ವಿಭಾಗಗಳಲ್ಲಿ ರೈಲುಗಳು ಹಳಿತಪ್ಪಿದ ಘಟನೆಗಳು ಹೆಚ್ಚುತ್ತಿವೆ ಎಂಬುದು ಸತ್ಯವೇ. ಹಾಗಿದ್ದಲ್ಲಿ, 2000ನೇ ಇಸವಿಯ ಆರಂಭದಿಂದಲೂ ರೈಲು ಹಳಿತಪ್ಪಿದ ಘಟನೆಗಳ ಸಂಖ್ಯೆ ಎಷ್ಟು ? ಇದರ ಪರಿಣಾಮವಾಗಿ ರೈಲ್ವೆಯು ಅನುಭವಿಸಿದ ಅಂದಾಜು ನಷ್ಟ, ಇಂತಹ ಘಟನೆಯನ್ನು ತಡೆಯಲು ಸರ್ಕಾರ ಏನು ಕ್ರಮ ಕೈಗೊಂಡಿದೆ? ಎಂದು ಲತಾ ಪ್ರಶ್ನೆ ಕೇಳಿದ್ದರು.
ಸಂದರ್ಶನವೊಂದರಲ್ಲಿ ಅವರು ಬಹಿರಂಗಪಡಿಸಿದಂತೆ, ಗಾಯಕಿ ಲತಾ ಯಾವಾಗಲೂ ಸಂಸತ್ತಿಗೆ ತಾನು ಸೂಕ್ತವಲ್ಲ ಎಂದು ಭಾವಿಸಿದ್ದರು. “ರಾಜ್ಯಸಭೆಯಲ್ಲಿ ನನ್ನ ಅಧಿಕಾರಾವಧಿಯು ಸಂತೋಷದಿಂದ ಕೂಡಿತ್ತು. ನಾನು ಸಂಸತ್ ಗೆ ಸೇರ್ಪಡೆಗೊಳ್ಳಲು ಇಷ್ಟವಿರಲಿಲ್ಲ. ವಾಸ್ತವವಾಗಿ, ರಾಜ್ಯಸಭೆಗೆ ನನ್ನನ್ನು ಒತ್ತಾಯಿಸಿದವರಿಗೆ ನನ್ನನ್ನು ಬಿಟ್ಟುಬಿಡುವಂತೆ ನಾನು ಮನವಿ ಮಾಡಿದ್ದೆ. ರಾಜಕೀಯದ ಬಗ್ಗೆ ನನಗೆ ಏನು ಗೊತ್ತು? ಎಂದಿದ್ದರು ಲತಾ.
ವಾಸ್ತವವಾಗಿ ರಾಜ್ಯಸಭೆಗೆ ನನ್ನನ್ನು ಒತ್ತಾಯಿಸಿದವರಿಗೆ ನನ್ನನ್ನು ಬಿಟ್ಟು ಬಿಡಿ ಎಂದು ನಾನು ಮನವಿ ಮಾಡಿದ್ದೇನೆ. ನಾನು ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿಜಿ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಜಿ ಅವರ ಬಗ್ಗೆ ಅತ್ಯುನ್ನತ ಗೌರವವನ್ನು ಹೊಂದಿರುವೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧ ಹೊಂದಿಲ್ಲ ಎಂದು ಅವರು ನ್ಯೂಸ್ 18 ಜತೆ ಹೇಳಿದ್ದರು.
ಅವರು ಪ್ರತಿನಿಧಿಸುವ ಉದ್ಯಮದ ಸಮಸ್ಯೆಗಳನ್ನು ಪ್ರಸ್ತಾಪಿಸದಿದ್ದಕ್ಕಾಗಿ ಆಗಾಗ್ಗೆ ಟೀಕೆಗೆ ಒಳಗಾಗಿದ್ದರು. “ನಾನು ಸಂಸತ್ತಿನಲ್ಲಿ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಏಕೆ ಪರಿಹರಿಸಲಿಲ್ಲ ಎಂದು ನನ್ನನ್ನು ಆಗಾಗ್ಗೆ ಕೇಳಲಾಗುತ್ತದೆ. ನಾನು ಮನರಂಜನಾ ಉದ್ಯಮದ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಮಟ್ಟಿಗೆ ನಾನು ಅದರೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಮಾತ್ರ ಹೇಳಬಲ್ಲೆ. ನಾನು ಗಾಯಕಿ, ಭಾಷಣ ಮಾಡುವವಳಲ್ಲ. ಬಹುಶಃ ಈಗ ಸಂಸತ್ನಲ್ಲಿರುವ ರೇಖಾ ಅವರು ಚಲನಚಿತ್ರೋದ್ಯಮವನ್ನು ಕಾಡುವ ಸಮಸ್ಯೆಗಳನ್ನು ಮುಂದಿಡುವುದಕ್ಕೆ ಸೂಕ್ತ ಎಂದು ಎಂದು ಲತಾ ದೀದಿ ಹೇಳಿದ್ದರು.
ಲತಾ ಮಂಗೇಶ್ಕರ್ ಅವರು ಇಂದೋರ್‌ನಲ್ಲಿ ಸಿಖ್ ನೆರೆಹೊರೆಯಲ್ಲಿ ಜನಿಸಿದರು ಮತ್ತು ಕೊಲ್ಹಾಪುರದಲ್ಲಿ ಸಂಗೀತ ಕುಟುಂಬದಲ್ಲಿ ಬೆಳೆದರು. ಆಕೆಯ ತಂದೆ ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಅವರು ಗ್ವಾಲಿಯರ್ ಘರಾನಾದಿಂದ ಸಂಗೀತಗಾರರಾಗಿದ್ದರು ಮತ್ತು ಅವರು ನಾಟಕ ಕಂಪನಿಯನ್ನು ನಡೆಸುತ್ತಿದ್ದರು.ಅವರೇ ಲತಾ ಅವರ ಮೊದಲ ಗುರು.
ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಿಂದ ಕಾಲೇಜು ನಿರ್ಮಾಣ ಮಾಡಲಾಗಿತ್ತು