Independence Day 2023 Speech: ಸ್ವಾತಂತ್ರ್ಯ ದಿನಾಚರಣೆಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯಲು, ಭಾಷಣ ಮಾಡಲು ಇಲ್ಲಿವೆ ಟಿಪ್ಸ್
ಆಗಸ್ಟ್ 15ರ ಮಂಗಳವಾರ ಇಡೀ ದೇಶದಲ್ಲಿ 76ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮ ಮನೆ ಮಾಡಲಿದೆ. ವಿದ್ಯಾರ್ಥಿಗಳಿಗೆ ಆಗಸ್ಟ್ 15 ರ ಸ್ವಾತಂತ್ರ್ಯ ದಿನಕ್ಕೆ ಬೇಕಾಗುವ ಭಾಷಣ, ಶಾಲಾ ಚಟುವಟಿಕೆ, ಪ್ರಬಂಧ, ಸೇರಿದಂತೆ ದೇಶ ಪ್ರೇಮ ಹುಟ್ಟಿಸುವ ಸ್ವಾತಂತ್ರ್ಯ ಹೋರಾಟಗಾರರ ಘೋಷಣೆಗಳು ಇಲ್ಲಿವೆ.
ಸಾಂದರ್ಭಿಕ ಚಿತ್ರ
ಆಗಸ್ಟ್ 15 ಭಾರತಾಂಬೆಗೆ ಸ್ವಾತಂತ್ರ್ಯ ಸಿಕ್ಕ ದಿನ(Independence Day). ಈ ದಿನದಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಪುತ್ರನನ್ನು ನೆನೆಯಲಾಗುತ್ತೆ. ಪ್ರತಿ ವರ್ಷದಂತೆ, ಶಾಲೆ, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಈ ದಿನವನ್ನು ಅದ್ಧೂರಿಯಾಗಿ ಆಚರಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತೆ. ಹಾಗೂ ಈ ದಿನದ ವಿಶೇಷತೆ, ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ ಪ್ರಬಂಧಗಳು, ಭಾಷಣಗಳು, ಚರ್ಚೆಗಳು ಮತ್ತು ಇತರ ಕಾರ್ಯಕ್ರಮಗಳನ್ನ ಆಯೋಜಿಸಲಾಗುತ್ತೆ. ಈ ದಿನದಂದು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಸ್ವಾತಂತ್ರ್ಯ ಹೋರಾಟಗಾರರ ಘೋಷಣೆಗಳು ಇಲ್ಲಿವೆ.
ಆಗಸ್ಟ್ 15, 1947 ರಂದು ಭಾರತವು ಸ್ವಾತಂತ್ರ್ಯ ಪಡೆಯಿತು. ಸುಮಾರು ಎರಡು ಶತಮಾನಗಳ ನಂತರ ಬ್ರಿಟಿಷ್ ಆಳ್ವಿಕೆಯು ಅಂತ್ಯಗೊಂಡು ಅಖಂಡ ಭಾರತದ ನಿರ್ಮಾಣವಾಯಿತು. ಸ್ವಾತಂತ್ರ್ಯ ದಿನಾಚರಣೆಯ ಮೊದಲ ವಾರ್ಷಿಕೋತ್ಸವವು ಆಗಸ್ಟ್ 15, 1948 ರಂದು ನಡೆಯಿತು. ಈ ದಿನಕ್ಕಾಗಿ ಲಕ್ಷಾಂತರ ಹೋರಾಟಗಾರರು ಪ್ರಾಣ ಬಿಟ್ಟಿದ್ದಾರೆ. ಈ ದಿನ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ, ನಿಸ್ವಾರ್ಥತೆ, ತ್ಯಾಗವನ್ನು ನೆನಪಿಸುತ್ತದೆ.
ಇದನ್ನೂ ಓದಿ: Independence Day 2023: ಈ ಬಾರಿಯ ಸ್ವಾಂತಂತ್ರ್ಯ ದಿನಾಚರಣೆಯ ಥೀಮ್ ಏನು, ವಿಶಿಷ್ಟವಾಗಿ ಆಚರಿಸುವುದು ಹೇಗೆ ? ಇಲ್ಲಿದೆ ಐಡಿಯಾ
ಸ್ವಾತಂತ್ರ್ಯ ಹೋರಾಟಗಾರರ ಘೋಷಣೆಗಳು
- ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ನಾ ಅದನ್ನು ಪಡೆದೇ ತೀರುತ್ತೇನೆ -ಬಾಲಗಂಗಾಧರ ತಿಲಕ್
- ನೀವು ನನಗೆ ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ -ನೇತಾಜಿ ಸುಭಾಷ್ ಚಂದ್ರ ಬೋಸ್
- ಮಾಡು ಇಲ್ಲವೇ ಮಡಿ – ಮಹಾತ್ಮ ಗಾಂಧಿ
- ಇಂಕ್ವಿಲಾಬ್ ಜಿಂದಾಬಾದ್ -ಹಸ್ರತ್ ಮೋಹನಿ
- ಆರಾಮವಾಗಿರುವುದು ತುಂಬಾ ಕೆಟ್ಟದು -ಪಂಡಿತ್ ಜವಾಹರಲಾಲ್ ನೆಹರು
- ಜೈ ಹಿಂದ್ -ಸುಭಾಷ್ ಚಂದ್ರಬೋಸ್
- ಸರ್ಫರೋಶಿ ಕಿ ತಮನ್ನಾ, ಅಬ್ ಹಮಾರೆ ದಿಲ್ ಮೇ ಹೈ – ರಾಮಪ್ರಸಾದ್ ಬಿಸ್ಮಿಲ್
- ಒಂದು ದೇಶದ ಹಿರಿಮೆಯು ಜನಾಂಗದ ತಾಯಂದಿರನ್ನು ಪ್ರೇರೇಪಿಸುವ ಪ್ರೀತಿ ಮತ್ತು ತ್ಯಾಗದ ಶಾಶ್ವತ ಆದರ್ಶಗಳಲ್ಲಿ ಅಡಗಿದೆ – ಸರೋಜಿನಿ ನಾಯ್ಡು
- ಸ್ವಾತಂತ್ರ್ಯವು ಕೇವಲ ರಾಜಕೀಯ ನಿರ್ಧಾರ ಅಥವಾ ಹೊಸ ಸಂವಿಧಾನಗಳ ವಿಷಯವಲ್ಲ. ಅದು ಮನಸ್ಸು ಮತ್ತು ಹೃದಯದ ವಿಷಯವಾಗಿದೆ ಮತ್ತು ಮನಸ್ಸು ತನ್ನನ್ನು ತಾನು ಸಂಕುಚಿತಗೊಳಿಸಿದರೆ, ಬೆಚ್ಚಗಾಗಿದ್ದರೆ ಮತ್ತು ಹೃದಯವು ಕಹಿ ಮತ್ತು ದ್ವೇಷದಿಂದ ತುಂಬಿದ್ದರೆ, ಸ್ವಾತಂತ್ರ್ಯವು ಇರುವುದಿಲ್ಲ. – ಜವಾಹರಲಾಲ್ ನೆಹರು
- ಒಂದು ರಾಷ್ಟ್ರದ ಸಂಸ್ಕೃತಿಯು ಅದರ ಜನರ ಹೃದಯದಲ್ಲಿ ಮತ್ತು ಆತ್ಮದಲ್ಲಿ ನೆಲೆಸಿದೆ -ಮಹಾತ್ಮ ಗಾಂಧಿಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:33 pm, Sat, 12 August 23